ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ನೆರವಾಗಲು ಚೀನಾ ಸಿದ್ಧ

ಭಾರತವು ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ನೀಡಿದ ಬೆಂಬಲಕ್ಕೆ ಚೀನಾ ಬುಧವಾರ ಧನ್ಯವಾದ ಅರ್ಪಿಸಿದೆ. ಅಲ್ಲದೆ, ದೇಶದಲ್ಲಿಯೂ ಹೆಚ್ಚಾಗುತ್ತಿರುವ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಾಯ ಮಾಡಲು ಚೀನಾ ಮುಂದಾಗಿದೆ ಎಂದು ಚೀನೀ ರಾಯಭಾರಿ ಕೌನ್ಸಿಲರ್‌ ಜಿ ರೋಂ ತಿಳಿಸಿದ್ದಾರೆ.

ದೆಹಲಿಯಲ್ಲಿರುವ ಚೀನೀ ರಾಯಭಾರಿಯವರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ ರೋಂ “ಚೀನಾದ ಉದ್ಯಮಗಳು ಭಾರತಕ್ಕೆ ದೇಣಿಗೆ ನೀಡಲು ಪ್ರಾರಂಭಿಸಿವೆ. ಭಾರತೀಯರ ಅಗತ್ಯಕ್ಕೆ ತಕ್ಕಂತ  ನಮ್ಮ ಸಾಮರ್ಥ್ಯ ಮೀರಿ ನಾವು ಹೆಚ್ಚಿನ ಬೆಂಬಲ ಮತ್ತು ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ.” ಎಂದು ಹೇಳಿದ್ದಾರೆ.

ಚೀನಾ ಮತ್ತು ಭಾರತ ರಾಷ್ಟ್ರಗಳು ಪರಸ್ಪರ ಸಂವಹನ ಮತ್ತು ಸಹಕಾರವನ್ನು ಕಾಪಾಡಿಕೊಂಡಿವೆ. ಕಷ್ಟದ ಸಂದರ್ಭಗಳಲ್ಲಿ, ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಪರಸ್ಪರ ಬೆಂಬಲವನ್ನು ನೀಡಿವೆ ಎಂದು ಅವರು ಹೇಳಿದ್ದಾರೆ.

ಚೀನಾದಲ್ಲಿ ಇದುವರೆಗೆ 3,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 81,000 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾ ವೈರಸ್ ಪೀಡಿತ ವುಹಾನ್ ನಗರಕ್ಕೆ ಮಾಸ್ಕ್‌ಗಳು, ಕೈಗವಸುಗಳು (ಗ್ಲೌಸ್‌) ಮತ್ತು ಇತರ ತುರ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಸುಮಾರು 15 ಟನ್ ವೈದ್ಯಕೀಯ ಸಹಾಯವನ್ನು ಭಾರತ ಕಳುಹಿಸಿತು.

“ಭಾರತವು ಚೀನಾಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧ ಚೀನಾದ ಹೋರಾಟಕ್ಕೆ ಭಾರತೀಯ ಜನರು ವಿವಿಧ ರೀತಿಯಲ್ಲಿ ಬೆಂಬಲಿಸಿದ್ದಾರೆ. ಅದಕ್ಕಾಗಿ ನಾವು ಮೆಚ್ಚುಗೆ ಮತ್ತು ಧನ್ಯವಾದಗಳನ್ನು ವ್ಯಕ್ತಪಡಿಸುತ್ತೇವೆ” ಎಂದು ಅವರು ಹೇಳಿದರು.

ಇತ್ತೀಚೆಗೆ, ಚೀನಾ ಅನುಭವದ ಬಗ್ಗೆ ಭಾರತ ಸೇರಿದಂತೆ 19 ಯುರೇಷಿಯನ್ ಮತ್ತು ದಕ್ಷಿಣ ಏಷ್ಯಾದ ದೇಶಗಳಿಗೆ ಸಂಕ್ಷಿಪ್ತವಾಗಿ ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್ ನಡೆಸಿದೆ. ಸಾಂಕ್ರಮಿಕ ತರೆಗುಟ್ಟುವ, ನಿಯಂತ್ರಿಸುವ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ತನ್ನ ಅನುಭವವನ್ನು ಚೀನಾ ಇತರ ದೇಶಗಳೊಂದಿಗೆ ಹಂಚಿಕೊಂಡಿದೆ ಎಂದು ವಕ್ತಾರರು ತಿಳಿಸಿದರು.

“ಚೀನಾವು ಭಾರತ ಮತ್ತು ಇತರ ದೇಶಗಳೊಂದಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತದೆ, ಜಿ 20 ಮತ್ತು ಬ್ರಿಕ್ಸ್‌ನಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಚೀನಾವು ಸಹಾಯವನ್ನು ಹೆಚ್ಚಿಸುತ್ತದೆ, ಉತ್ತಮವಾಗಿ ಪರಿಹರಿಸಲು ನಮ್ಮ ತಾಂತ್ರಿಕ ಮತ್ತು ಸ್ಥೈರ್ಯವನ್ನು ನೀಡುತ್ತದೆ. ಜಾಗತಿಕ ಸವಾಲುಗಳು ಮತ್ತು ಎಲ್ಲಾ ಮಾನವಕುಲದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಲು ನೆರವಾಗುತ್ತದೆ”ಎಂದು ಜಿ ರೋಂಗ್ ಹೇಳಿದರು.

ಕೊರೊನಾ ವೈರಸ್ ಪತ್ತೆಯಾದಾಗಿನಿಂದ ಇಲ್ಲಿಯವರೆಗೂ ಹೆಚ್ಚು ತತ್ತರಿಸಿದ ರಾಷ್ಟ್ರ ಚೀನಾ. ಸೋಂಕಿನ ನಿವಾರಣೆಗಾಗಿ ಶ್ರಮಿಸಿ ಇತ್ತೀಚೆಗೆ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದು, ಈಗ ಇತರ ದೇಶಗಳಿಗೂ ನೆರವಾಗಲು ಮುಂದಾಗಿರುವುದು ಶ್ಲಾಘನೀಯ

 

Spread the love

Leave a Reply

Your email address will not be published. Required fields are marked *