ಕೊರೊನಾ ಸೋಂಕಿತರಲ್ಲಿ ಭಾರತಕ್ಕೆ 9ನೇ ಸ್ಥಾನ : 24 ಗಂಟೆಯಲ್ಲಿ 7,466 ಹೊಸ ಕೇಸ್!
ಕೋವಿಡ್ -19 ಸೋಂಕು ಭಾರತದಲ್ಲಿ ಇನ್ನೂ ವೇಗವನ್ನು ಹರಡುತ್ತಿದೆ. ಎರಡು ತಿಂಗಳ ಸುದೀರ್ಘ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಭಾರತದಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿತ್ತು. ಆದರೆ ಲಾಕ್ ಡೌನ್ ಸಡಿಲಗೊಳ್ಳುತ್ತಿರುವ ಈ ಸಮಯದಲ್ಲಿ, ಭಾರತದಲ್ಲಿ ದೃಢಪಡಿಸಿದ ಒಟ್ಟು ಕೊರೊನಾವೈರಸ್ ಪ್ರಕರಣಗಳು 1.65 ಲಕ್ಷ ದಾಟಿದೆ.
ಹೌದು… ದೇಶದಲ್ಲಿ ಇನ್ನೇನು 4.0 ಲಾಕ್ ಡೌನ್ ಮುಕ್ತಾಯಗೊಳ್ಳಲು 2ನೇ ದಿನ ಬಾಕಿ ಇದೆ. ಹಂತ ಹಂತವಾಗಿ ಲಾಖ್ ಡೌನ್ ಸಡಿಲಗೊಳ್ಳುತ್ತಿರುವವ ಈ ಸಮಯದಲ್ಲಿ ಹೊರ ದೇಶಗಳಿಂದ ದೇಶಕ್ಕೆ, ಸೋಂಕಿತರ ಸಂಖ್ಯೆ ಹೆಚ್ಚಿರುವ ರಾಜ್ಯಗಳಿಂದ ಕರ್ನಾಟಕಕಕ್ಕೆ ಆಗಮಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಹೀಗಾಗಿ ಒಟ್ಟು ಪ್ರಕರಣಗಳ ಸಂಖ್ಯೆ 1,65,799ರಷ್ಟಿದ್ದು ಚೇತರಿಸಿಕೊಂಡವರು 71,105 ಜನ ಮತ್ತು ಇದರಲ್ಲಿ 4,706 ಸಾವುಗಳು ಸಂಭವಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 89,987 ಇದೆ.
ಭಾರತವು ಒಂದು ದಿನದಲ್ಲಿ ಸುಮಾರು 7,500 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 7,466 ಹೊಸ ಪ್ರಕರಣಗಳು ದೃಢಪಟ್ಟಿದ್ದು, 3,414 ಗುಣಮುಖರಾಗಿದ್ದು, 175 ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಮಾರಣಾಂತಿಕ ವೈರಸ್ ಸೋಂಕಿನಿಂದ ಭಾರತವನ್ನು ವಿಶ್ವದ ಒಂಬತ್ತನೇ ಅತಿ ಹೆಚ್ಚು ಹಾನಿಗೊಳಗಾದ ದೇಶವನ್ನಾಗಿ ಮಾಡಿದೆ.