ಟ್ರಾಕ್ಟರ್ ಲೈಟ್ ಬೆಳಕಿನಲ್ಲಿ ನವ ಜೋಡಿಯ ಎಂಗೇಜ್ಮೆಂಟ್ ಕಾರ್ಯಕ್ರಮ : ವಿಡಿಯೋ ವೈರಲ್

ಟ್ರಾಕ್ಟರ್ ಲೈಟ್ ಬೆಳಕಿನಲ್ಲಿಯೇ ನವ ಜೋಡಿಯ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆಸಲಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದಲ್ಲಿ ಟ್ರಾಕ್ಟರ್ ಲೈಟ್ ಬೆಳಕಿನಲ್ಲಿ ಗ್ರಾಮದ ಅಮರಪ್ಪ,ದುರ್ಗಮ್ಮ ದಂಪತಿಯ ಮಗಳಾದ ಮಾದ್ಯಮಳ ನಿಶ್ಚಿತಾರ್ಥ ಕಾರ್ಯಕ್ರಮ ಟ್ರಾಕ್ಟರ್ ಬೆಳಕಿನಲ್ಲಿ ಮಾಡಲಾಗಿದೆ. ಮಾದ್ಯಮ ಹಾಗೂ ಸೋಮಣ್ಣ ಜೋಡಿಗಳ ನಿಶ್ಚಿತಾರ್ಥ ಕಾರ್ಯಕ್ರಮ ವಿದ್ಯುತ್ ಬೆಳಕು ಇಲ್ಲವೇ ಸೋಲಾರು ಬೆಳಕಿನಲ್ಲಿ ನಡೆಸಬೇಕಾಗಿತ್ತು.ಆದರೆ ,ಕೃಷ್ಣಾ ನದಿ ಪ್ರವಾಹಕ್ಕೆ ಗಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಗಳು ಹಾನಿಯಾದ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ಗಡ್ಡಿ ಜನರು ಕಗ್ಗತಲಲ್ಲಿಯೇ ವಾಸ ಮಾಡಿ ನರಕದ ಜೀವನ ಅನುಭವಿಸುತ್ತಿದ್ದಾರೆ.

ಇದರಿಂದ ನಿಶ್ಚಿತಾರ್ಥಕ್ಕು ವಿದ್ಯುತ್ ಬೆಳಕು ಅಡ್ಡಿಯಾಗಿದೆ.ಸೋಲಾರ ವ್ಯವಸ್ಥೆ ಹಾಗೂ ವಿದ್ಯುತ್ ಕಂಬಗಳ ಸಂಪರ್ಕ ಹಾಳಾದ ಹಿನ್ನೆಲೆ ನೀಲಕಂಠರಾಯನಗಡ್ಡಿ ಗ್ರಾಮದ ಜನರು ಮೂರು ತಿಂಗಳಿನಿಂದ ಕತ್ತಲಲ್ಲಿಯೇ ಜೀವನ ನಡೆಸುತ್ತಿದ್ದಾರೆ.ಜೇಸ್ಕಾಂ ಅಧಿಕಾರಿಗಳು ಬೇಗ ಕಂಬಗಳ ಅಳವಡಿಸಿ ಬೆಳಕಿನ‌ ಭಾಗ್ಯ ಕಲ್ಪಿಸಬೇಕಾಗಿತ್ತು,‌ಆದರೆ ನಿಷ್ಕಾಳಜಿ ತೊರಿದ ಪರಿಣಾಮ ಈಗ ಮೂರು ತಿಂಗಳಿನಿಂದ ಕತ್ತಲಲ್ಲಿಯೇ ಜೀವ ನಡೆಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights