ತಂಗಿಯ ಜೊತೆ ಲವ್ವಿಡವ್ವಿ, ಬ್ಲ್ಯಾಕ್‌ಮೇಲ್- ಪೊಲೀಸರ ಅತಿಥಿಯಾದ ಪಾಂಡಿಚೇರಿ ಬಿಜೆಪಿ ಮುಖಂಡ
ಪ್ರೀತಿಸುತ್ತಿದ್ದ ಯುವತಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಪಾಂಡಿಚೇರಿ ಮೂಲದ ಬಿಜೆಪಿ ಯುವ ಮುಖಂಡನನ್ನು ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಪಾಂಡಿಚೇರಿಯ ಬಿಜೆಪಿಯ ಯುವ ಮುಖಂಡ ರಾಕ್ ಜಿಜೆಆರ್ ಬಂಧಿತ ಆರೋಪಿ. ರಾಕ್ ಹುಬ್ಬಳ್ಳಿಯಲ್ಲಿರುವ ಸಂಬಂಧಿಯೊಬ್ಬರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಯುವತಿಯೊಂದಿಗೆ ಮದುವೆ ಮಾಡಿಕೊಡುವಂತೆ ಪೋಷಕರನ್ನು ಪೀಡಿಸಿದ್ದ. ಸೋಶಿಯಲ್ ಮಿಡಿಯಾದಲ್ಲಿ ಖಾಸಗಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಯುವತಿಯ ಕುಟುಂಬವರಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಯುವತಿಯ ತಂದೆ ಹುಬ್ಬಳ್ಳಿ- ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪಾಂಡಿಚೇರಿ ಸಂಬಂಧ, ಅಣ್ಣ- ತಂಗಿಯ ಲವ್ವಿಡವ್ವಿ.
ಯುವತಿಯ ತಂದೆ ಪಾಂಡಿಚೇರಿ ಮೂಲದವರಾಗಿದ್ದು, ಕೆಲಸದ ನಿಮಿತ್ತ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ವಾಸವಾಗಿದ್ದಾರೆ. ರಾಕ್ ಮತ್ತು ಯುವತಿಯ ಕುಟುಂಬಸ್ಥರು ಸಂಬಂಧಿಕರಾಗಿರುವ ಕಾರಣ ಪರಸ್ಪರ ಒಡನಾಟವಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಸ್ವಚ್ಛಂದವಾಗಿ ಓಡಾಡಿಕೊಂಡಿದ್ದರು. ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದರು. ಈ ವೇಳೆ ಯುವತಿಯ ಜೊತೆ ಸರಸ ಸಲ್ಲಾಪವೂ ನಡೆದು ಹೋಗಿದೆ. ಯುವತಿಯ ಜೊತೆಗೆ ಖಾಸಗಿಯಾಗಿರುವ ಕೆಲವು ವಿಡಿಯೋ ಮತ್ತು ಫೋಟೋಗಳನ್ನು ರಾಕ್ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ.
ಮದುವೆ ಮಾಡಿಕೊಡದಿದ್ದರೆ ಮಾನ ಹರಾಜು ಹಾಕುವ ಬೆದರಿಕೆ.
ಯುವತಿಯ ಜೊತೆಗಿನ ಸಂಪರ್ಕ ಹೆಚ್ಚಾಗುತ್ತಿದ್ದಂತೆ ಇಬ್ಬರ ಒಡನಾಟದ ಬಗ್ಗೆ ಮನೆಯವರಿಗೆ ಗೊತ್ತಾಗಿದೆ. ಯುವತಿಯನ್ನು ಮದುವೆ ಮಾಡಿಕೊಡುವಂತೆ ರಾಕ್ ಆಕೆಯ ಪಾಲಕರನ್ನು ಒತ್ತಾಯಿಸಿದ್ದಾನೆ. ರಾಕ್ ಮತ್ತು ಯುವತಿ ಸಂಬಂಧದಲ್ಲಿ ಅಣ್ಣ- ತಂಗಿ ಆಗಬೇಕು. ಹಾಗಾಗಿ ಯುವತಿ ಕುಟುಂಬಸ್ಥರು ಮದುವೆ ನಿರಾಕರಿಸಿದ್ದರು. ಅಣ್ಣ- ತಂಗಿ ಸಂಬಂಧವಾಗುವ ಕಾರಣ ಮದುವೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಕೆಯ ಜೊತೆಗೆ ಸಂಪರ್ಕದಲ್ಲಿ ಇರದಂತೆ ಎಚ್ಚರಿಕೆ ನೀಡಿದ್ದಾರೆ. ಯುವತಿಯ ಮೊಬೈಲ್ ಕಸಿದು ರಾಕ್ ಜೊತೆಗೆ ಮಾತು ನಿಲ್ಲಿಸಿದ್ದಾರೆ. ಇದರಿಂದ ಕುಪಿತನಾದ ರಾಕ್ ಯುವತಿಯ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಕೆಲ ವಿಡಿಯೋ ಮತ್ತು ಫೋಟೋಗಳನ್ನು ಯುವತಿಯ ತಂದೆ ಮೊಬೈಲ್‍ಗೆ ಹರಿಬಿಟ್ಟಿದ್ದಾನೆ. ಅಲ್ಲದೇ ಹಲವು ವಾಟ್ಸಪ್ ಗ್ರೂಪ್‍ನಲ್ಲಿಯೂ ವಿಡಿಯೋ ಫೋಟೋಗಳನ್ನ ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ. ರಾಕ್ ನಡೆಯಿಂದ ತೀವ್ರವಾಗಿ ನೊಂದ ಯುವತಿಯ ಕುಟುಂಬಸ್ಥರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಭಾವಿಗಳ ಒಡನಾಡ.
ಪಾಂಡಿಚೇರಿಯ ಯುವ ಕಾಂಗ್ರೆಸ್ ಮುಖಂಡ ರಾಕ್‌ನಿಗೆ ಸಹಜವಾಗಿಯೇ ರಾಜಕೀಯ ನಾಯಕರ ಸಂಪರ್ಕವಿದೆ. ಹಲವು ಗಣ್ಯರೊಂದಿಗೆ ಫೋಟೋ ತೆಗೆಸಿಕೊಂಡು ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಬಿಜೆಪಿ ಹೈಕಮಾಂಡ್ ಜೊತೆಗೆ ಉತ್ತಮ ಸಂಪರ್ಕವಿದೆ ಎನ್ನಲಾಗುತ್ತಿದೆ. ರಾಜಕೀಯ ಪ್ರಭಾವ ಬಳಸಿ ಮತ್ತಷ್ಟು ಉಪಟಳ ಕೊಡಬಹುದು ಎಂದು ಯುವತಿಯ ಪೋಷಕರು ಆತಂಕದಲ್ಲಿದ್ದಾರೆ. ಹೀಗಾಗಿ ರಾಕ್‌ನಿಂದ ರಕ್ಷಣೆ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ ಪೊಲೀಸರಿಂದ ಆರೋಪಿಯ ವಿಚಾರಣೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು ಪಾಂಡಿಚೇರಿಗೆ ತೆರಳಿ ಬಿಜೆಪಿ ಯುವ ಮುಖಂಡ ರಾಕ್‌ನನ್ನು ವಶಕ್ಕೆ ಪಡೆದಿದ್ದಾರೆ. ರಾಕ್ ಮೊಬೈಲ್ ಸೀಜ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಹುಬ್ಬಳ್ಳಿಗೆ ಕರೆತಂದಿದ್ದು ತನಿಖೆ ಮುಂದುವರಿಸಿದ್ದಾರೆ. ಹೈ ಪ್ರೊಫೈಲ್ ಕೇಸ್ ಆಗಿರುವ ಕಾರಣ ಪೊಲೀಸರು ಹೆಚ್ಚೇನು ಮಾಹಿತಿ ನೀಡುತ್ತಿಲ್ಲ. ಪೊಲೀಸ್ ಆಯುಕ್ತ ಆರ್. ದಿಲೀಪ್ ಮತ್ತು ಡಿಸಿಪಿ ನಾಗೇಶ್ ನೇತ್ರತ್ವದಲ್ಲಿ ತನಿಖೆ ಮುಂದುವರಿದಿದೆ.