ದೇವರ ನಾಡಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ಯೋಗಿ ನಾಡಲ್ಲಿ ಧರ್ಮದ್ದೆ ರಾಜ್ಯಭಾರ
ಮೊದಲನೆಯ ಫೋಟೋದಲ್ಲಿರುವವರ ಹೆಸರು ಗೋಪಾಲಿಕ ಅಂತರ್ಜನಂ..ಸಂಪ್ರದಾಯವಾದಿ ನಂಬೂದಿರಿ ಬ್ರಾಹ್ಮಣ ಕುಟುಂಬದ ಮಗಳು. ಕಳೆದ 29 ವರ್ಷದಿಂದ ಮಲಪ್ಪುರಂ ಜಿಲ್ಲೆಯ ಸರಕಾರೀ ಶಾಲೆಯೊಂದರಲ್ಲಿ ಅರೇಬಿಕ್ ಶಿಕ್ಷಕಿ.
ಅನ್ಯಮತೀಯ ಅದ್ಯಾಪಕಿಗೆ ಮೊದಲು ಕರ್ಮಠರಿಂದ ವಿರೋಧ ವ್ಯಕ್ತವಾದರೂ ನಂತರ ಊರವರ , ವಿದ್ಯಾರ್ಥಿಗಳ ಹೆಮ್ಮೆಗೆ ಪಾತ್ರವಾದ ಈ ಅಧ್ಯಾಪಕಿಯನ್ನು ವಿಶ್ವ ಅರೇಬಿಕ್ ದಿನದಂದು ಮಲಪ್ಪುರಂ ಜಿಲ್ಲೆಯ ಸಮಸ್ತ ಮುಸ್ಲಿಂ ಸಂಘಟನೆಗಳು ಆದರಿಸಿ ಸನ್ಮಾನಿಸಿತ್ತು..
ಎರಡನೆಯ ಚಿತ್ರದಲ್ಲಿರುವವರು ಡಾ|| ಫಿರೋಜ್ ಖಾನ್. ತಾತ ಪ್ರಸಿದ್ಧ ಭಜನೆಕಾರ ಗಫೂರ್ ಖಾನರಿಂದ ತೊಡಗಿ ಸ್ವಯಂ ಸಂಸ್ಕೃತ ಅಭ್ಯಸಿಸಿದ್ದ ತಂದೆ ರಂಜಾನ್ ಖಾನ್ ರವರೆಗೆ ಸಂಸ್ಕೃತದ ಸೆಳೆತ ರಕ್ತದಲ್ಲೇ ಇದ್ದ ವಿದ್ಯಾರ್ಥಿ.
ಸಂಸ್ಕೃತ ಅಧ್ಯಯನದಲ್ಲಿ ಶಾಸ್ತ್ರಿ, ಶಿಕ್ಷಾ ಶಾಸ್ತ್ರಿ, ಆಚಾರ್ಯ ಅಧ್ಯಯನ ಮುಗಿಸಿ ಜೈಪುರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಿಂದ ಪಿಹೆಚ್ ಡಿ ಪದವಿ ಪಡೆದ ಪ್ರತಿಭಾವಂತ. ತನ್ನ ಅರ್ಹತೆಯ ಮೇರೆಗೆ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸಹಾಯಕ ಪ್ರೊಫೆಸರ್ ಆಗಿ ಆಯ್ಕೆಯಾದ ಫಿರೋಜ್ ಮುಸಲ್ಮಾನ ಎನ್ನುವ ಒಂದೇ ಕಾರಣಕ್ಕಾಗಿ ಅಲ್ಲಿಯ “ದೇಶಪ್ರೇಮಿ” ವಿದ್ಯಾರ್ಥಿಗಳ ವಿರೋಧದಿಂದಾಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡುವಂತಾಯಿತು.
ಮೊದಲನೆಯವರಿಗೆ ಸಮಾಜ, ಸಮುದಾಯ ಎರಡೂ ಸ್ವಾಗತಿಸಿ ಗೌರವಿಸಿದರೆ ಎರಡನೆಯವರು ಮೋದಿಜಿಯ ಸ್ವಂತ ಕ್ಷೇತ್ರದಲ್ಲೇ ಯಾರ ಸಹಕಾರವೂ ದೊರೆಯದೆ ತನ್ನ ಧರ್ಮದ ಕಾರಣದಿಂದ ಸೋಲೊಪ್ಪಿಕೊಂಡರು.
ವ್ಯತ್ಯಾಸ ಇಷ್ಟೇ.. ಮೊದಲನೆಯದು ನಡೆದದ್ದು ಕೇರಳದಲ್ಲಿ .. ಎರಡನೆಯದು ಯೋಗಿಯ ರಾಮರಾಜ್ಯದಲ್ಲಿ..
Kishan Kumar Hegde