ನಕಲಿ‌ ಮಾಲೀಕನನ್ನ ಸೃಷ್ಠಿಸಿ ನಿವೇಶನ ಗುಳುಂ : ಮುಡಾ ಸಿಬ್ಬಂದಿಗಳ ಭಾರಿ ಗೋಲ್ಮಾಲ್

ನಿವೇಶನ ಕಬಳಿಸಲು ನಕಲಿವ್ಯಕ್ತಿಯನ್ನ ಸೃಷ್ಠಿಸಿದ ಮುಡಾ ಸಿಬ್ಬಂದಿಗಳ ಭಾರಿ ಗೋಲ್ಮಾಲ್ ಪ್ರಕರಣವೊಂದು ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯ ಲಕ್ಷಾಂತರ ಮೌಲ್ಯದ ನಿವೇಶನವನ್ನು ಕಬಳಿಸಲು ನಕಲಿಮಾಲೀಕನನ್ನ ಸೃಷ್ಠಿಸಲು ಭೂಗಳ್ಳರೊಂದಿಗೆ ಮುಡಾ ಸಿಬ್ಬಂದಿಗಳು ಶಾಮೀಲಾದ ಆರೋಪ ಕೇಳಿ ಬಂದಿದೆ.ಇದರ ಜೊತೆಗೆ ಮತ್ತೊಂದು ವಿಚಾರ ಅಂದ್ರೆ  ಖದೀಮರ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಡಾ ಅಧಿಕಾರಿಗಳು ದೂರು ಕೊಟ್ಟು ಒಂದು ವರ್ಷ ಕಳೆದ್ರೂ ಭೂಗಳ್ಳರು ಸಿಕ್ಕಿಲ್ಲ.

1994 ರಲ್ಲಿ ಎಲ್.ರಾಜೇ ಅರಸ್ ಎಂಬುವರಿಗೆ 30×40 ವಿಸ್ತೀರ್ಣದ ನಿವೇಶನವನ್ನು ಮಂಜೂರು ಮಾಡಲಾಗಿತ್ತು. ಇದಕ್ಕೆ ನಿಗದಿತ ಹಣ ಪಾವತಿಸಿ ಮಂಜೂರಾತಿ ಪತ್ರ,ಸ್ವಾಧೀನಪತ್ರ ಪಡೆದಿದ್ದ ರಾಜೇ ಅರಸ್ ಕಾರಣಾಂತರದಿಂದ ಹಕ್ಕುಪತ್ರ ಪಡೆದಿರಲಿಲ್ಲ. ಇಲ್ಲೇ ಆಗಿದ್ದು ಎಡವಟ್ಟು. ಯಾವಾಗ ರಾಜೇ ಅರಸ್ ಹಕ್ಕು ಪಡೆಯದೇ ಸುಮ್ಮನಾಗಿಬಿಟ್ಟರೋ ಆಗಲೇ ಸ್ಥಳದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. 2004 ರಲ್ಲಿ ನಕಲಿ ಮಾಲೀಕನ ಸೃಷ್ಟಿ ಮಾಡಿ, ರಾಜೇ ಅರಸ್ ರವರನ್ನೇ ಹೋಲುವ ವ್ಯಕ್ತಿಯನ್ನ ಕರೆತಂದ ಖದೀಮರು ಹಕ್ಕು ಪತ್ರ ಪಡೆದಿದ್ದಾರೆ. ಹಕ್ಕುಪತ್ರ ಪಡೆದು ನಿವೇಶನ ಮಾರಾಟ ಮಾಡಿದ್ದಾರೆ.

2018 ರಲ್ಲಿ ಹಕ್ಕುಪತ್ರ ಪಡೆಯಲು ಬಂದ ರಾಜೇ ಅರಸ್ ರಿಗೆ ನಕಲಿ ವ್ಯಕ್ತಿಯನ್ನ ಸೃಷ್ಟಿಸಿ ನಿವೇಶನ ಕಬಳಿಸಿದ ಅಕ್ರಮ ಬೆಳಕಿಗೆ ಬಂದಿದೆ.
ಸದ್ಯ ರಾಜೇ ಅರಸ್ ನ್ಯಾಯಕ್ಕಾಗಿ ಹಿರಿಯ ವಕೀಲ ಬಿ.ಆರ್.ಚಂದ್ರಮೌಳಿ ಮೊರೆ ಹೋಗಿದ್ದಾರೆ.ವಕೀಲರಿಂದ ಮುಡಾ ಅಧಿಕಾರಿಗಳಿಗೆ ನೊಟೀಸ್ ಜಾರಿಯಾಗಿದ್ದು ಅಧಿಕಾರಿಗಳಿಗೂ ಶಾಕ್ ಆಗಿದ್ದಾರೆ. 28/03/2019 ರಲ್ಲಿ ಮುಡಾ ಅಧಿಕಾರಿಗಳಿಂದ ಲಕ್ಷ್ಮೀಪುರಂ ಠಾಣೆಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇನ್ನು ಬಗೆಹರಿಯದ ನಕಲಿ ಮಾಲೀಕನ ಪ್ರಕರಣಕ್ಕೆ ರಾಜೇ ಅರಸ್ ಬೇಸತ್ತು ಹೋಗಿ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

ಅದೇನೇ ಆಗಲಿ ಅದೆಂಥ ವ್ಯಕ್ತಿಯೇ ಆಗಲಿ ಬಂದು ತನ್ನ ಹಕ್ಕುಪತ್ರ ಕೇಳಿದಾಗ ಹಕ್ಕುಪತ್ರ ನೀಡುವ ಸಿಬ್ಬಂದಿಗಳು ಗಮನ ಹರಿಸಬೇಕಿತ್ತು. ಹೀಗೇ ಹಕ್ಕುಪತ್ರದಲ್ಲಿರುವಂತೇ ಇರುವ ವ್ಯಕ್ತಿಗೆ ಅದ್ಯಾವ ಆಧಾರದ ಮೇಲೆ ನೀಡಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ. ಹೀಗಾಗಿ ಇದರಲ್ಲಿ ಸಿಬ್ಬಂದಿಗಳೂ ಶಾಮೀಲಾಗಿದ್ದಾರೆಂದು ಆರೋಪಿಸಲಾಗುತ್ತಿದೆ. ಪ್ರಕರಣದಲ್ಲಿ ಅದ್ಯಾರೇ ಭಾಗಿಯಾಗಲಿ ಸೂಕ್ತ ಕ್ರಮ ಕೈಗೊಂಡು ತಪ್ಪಿಕಸ್ತರಿಗೆ ಶಿಕ್ಷೆಯಾಗಿ ಅಮಾಯಕರಿಗೆ ನ್ಯಾಯ ಸಿಗಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights