ನೆರೆ ಬಂದು ಎರಡೂವರೆ ತಿಂಗಳು : ಸಂತ್ರಸ್ತರ ಸೂರಿಲ್ಲದ ಬದುಕಿನ ಪರದಾಟ…..

ಬರಬಾರ್‍ದ ನೆರೆ ಬಂದು ಬದುಕೇ ಎಕ್ಕುಟ್ಟಿಹೋಗಿರುವ ಉತ್ತರ ಕರ್ನಾಟಕದ, ಅದರಲ್ಲಿಯೂ ಬೆಳಗಾವಿಯ ಜನತೆ ಮೂರು ತಿಂಗಳಾದರೂ ಇನ್ನೂ ಸೂರಿಲ್ಲದೇ ಜೀವನ ನಡೆಸಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಸರಕಾರ ಇವರತ್ ಕಣ್ಣೆತ್ತಿಯೂ ನೋಡುತ್ತಿಲ್ಲ…
ನೆರೆಯಿಂದ ತೀವ್ರ ಸಂಕಷ್ಟ ಎದುರಿಸಿದ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಈವರೆಗೆ ಒಬ್ಬ ಸಂತ್ರಸ್ತರಿಗೂ ಸೂರು ಕಲ್ಪಿಸಲಾಗಿಲ್ಲ. ಟಿನ್ ಶೆಡ್‌ಗಳನ್ನು ಹಾಕಿದ್ದಾರಾದರೂ ಅವು ವಾಸಯೋಗ್ಯವಾಗಿಲ್ಲ. ಹೀಗಾಗಿ ಅವರ ಬದುಕೇ ನರಕವಾಗಿದೆ ..

ಅರಣ್ಯ ಭವನದ ಬಳಿ ಇರುವ ಜಾಗದಲ್ಲಿ ಟಿನ್ ಶೆಡ್‌ಗಳನ್ನು ನಿರ್ಮಸಲಾಗಿದೆ. ಆದರೆ ಅಲ್ಲಿ ವಾಸವಿರುವುದ ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಸಣ್ಣ ಬಿಸಿಲಿಗೂ ಟಿನ್ ಚಾವಣಿ ಬೆಂದುಹೋಗುತ್ತವೆ. ಹೀಗಾಗಿ ಇಲ್ಲಿನ ಸಂತ್ರಸ್ತರು ಒಂದು ಪರಿಹಾರ ಶಿಬಿರದಿಂದ ಮತ್ತೊಂದಕ್ಕೆ ಗುಳೆ ಹೋಗುವುದು ತಪ್ಪಿಲ್ಲ.

ನೆರೆಯಲ್ಲಿ ಸೂರು ಕಳೆದುಕೊಂಡವರಿಗೆ ಹೊಸದಾಗಿ ಮನೆ ಕಟ್ಟಿಕೊಳ್ಳಲು ತಲಾ 5 ಲಕ್ಷ ರೂ ನೆರವು ನೀಡುವುದಾಗಿ ರಾಜ್ಯ ಸರಕಾರ ನೀಎಇದ್ದ ಭರವಸೆ ಇನ್ನೂ ಬಾಯಿಮಾತಿನಲ್ಲಿಯೇ ಇದೆಯೇ ಹೊರತು ಕಾರ್‍ಯರೂಪಕ್ಕೆ ಬಂದಿಲ್ಲ ಎನ್ನುವುದು ಸಂತ್ರಸ್ತರ ದೂರು.

ಸದ್ಯ ಪರಿಹಾರ ಶಿಬಿರದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳ ಪೈಕಿ ಅರ್ಧದಷ್ಟು ಕುಟುಂಬಗಳು ಸೂರುರಹಿತವಾಗಿವೆ. ಅವರಿಗೆ ಶಾಶ್ವರತ ಸೂರು ಕಲ್ಪಿಸಿಕೊಡಬೇಕಿದೆ… ಸರರ್ಕಾರ ಮತ್ತು ಸಮಾಜ ಇನ್ನಾದರು ಇವರತ್ತ ನೋಡಬೇಕಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights