ಪದವೀಧರರ ಸ್ಪರ್ಧಾತ್ಮಕ ಪರೀಕ್ಷೆಗೆ ದಾರಿ ದೀಪ ಯುನಿವರ್ಸಲ್ ಸ್ಕೂಲ್ ಆಫ್ ಲಾ ಸಂಸ್ಥೆ….
ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್ನ್ ನ ಅಂಗ ಸಂಸ್ಥೆಯಾದ ಯುನಿವರ್ಸಲ್ ಸ್ಕೂಲ್ ಆಫ್ ಆಡ್ಮಿನಿಸ್ಟ್ರೇಷನ್ ಮತ್ತು ಯುನಿವರ್ಸಲ್ ಸ್ಕೂಲ್ ಆಫ್ ಲಾ ಸಂಸ್ಥೆ ಲೋಕಾರ್ಪಣೆಗೊಂಡಿತ್ತು. ಬೆಂಗಳೂರು ದಕ್ಷಿಣ ಭಾಗದ ಕೋಲೂರಿನಲ್ಲಿ ಉದ್ಘಾಟಗೆಗೊಂಡ, ಈ ಸಂಸ್ಥೆ BA, B.com, BA,LLB ಪದವಿಯ ಜೊತೆಗೆ ಐಏಎಸ,ಕೆ.ಏ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತದೆ. ಆ ಮೂಲಕ ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ವಿನೂತನ ಆವಿಷ್ಕಾರಕ್ಕೆ ಮುನ್ನುಡಿ ಬರೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ, ಒಂದು ಶಿಕ್ಷಣ ಸಂಸ್ಥೆ ಬೇಕಾದ ಎಲ್ಲ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.
ಈ ಸಂಸ್ಥೆಯ ಕಟ್ಟಡವನ್ನು ನೋಡಿದಾಗ ನನ್ನ ವಿದ್ಯಾರ್ಥಿ ಜೀವನ ನೆನಪಿಗೆ ಬಂದಿದೆ.ಉಪೇಂದ್ರ ಶೆಟ್ಟಿಯವರು ಕೋಚಿಂಗ್ ಸೆಂಟರ್ ಜೊತೆಗೆ ಲಾ ಕಾಲೇಜು ಪ್ರಾರಂಭಿಸಿದ್ದಾರೆ, ಅದಕ್ಕೆ ಬಾರ್ ಕೌನ್ಸಿಲ್ ನಿಂದ ಅನುಮತಿ ಸಿಕ್ಕಿದೆ. ಉಪೇಂದ್ರ ಶೆಟ್ಟಿಯವರು ಶಿಕ್ಷಣ ಸಂಸ್ಥೆ ಪ್ರಾರಂಭಿಸುವಾಗಲೇ ತಮ್ಮ ಇಪ್ಪತ್ತು ವರ್ಷ ಅನುಭವ ಇಟ್ಟಕೊಂಡು,ಒಳ್ಳೆಯ ಗುಣಮಟ್ಟ ಶಿಕ್ಷಣ ನೀಡುವ ಯೋಜನೆ ಹೊಂದಿದ್ದಾರೆ. ಈ ಬಗ್ಗೆ ನನಗೆ ವಿಶ್ವಾಸವಿದೆ.ಇದಕ್ಕೆ ಅವರು ಈ ಹಿಂದೆ ಮಾಡಿದ ಕೆಲಸವೇ ಸಾಕ್ಷಿ ಎಂದರು.
ಬಳಿಕ ಮಾತನಾಡಿದ, ಕೇಂದ್ರ ಸಚಿವರಾದ ಡಿ.ವಿ ಸಂದಾನಂದಗೌಡ, ಯಾವುದೇ ದೇಶ ಅಭಿವೃದ್ಧಿ ಆಗಬೇಕಾದರೆ, ಅಲ್ಲಿ ಸಂಶೋದನೆಗಳು ನಡೆಯಬೇಕು. ಸಂಶೋಧನೆಗಳಿಗೆ ಅವಕಾಶ ಮಾಡಿಕೊಟ್ಟ ದೇಶಗಳು ಇಂದು ಅಭಿವೃದ್ಧಿ ಹೊಂದಿವೆ. ಸಿವಿಲ್ ಸರ್ವಿಸ್ ಎನ್ನುವುದು ಉನ್ನತ ಹುದ್ದೆ. ಆ ಹುದ್ದೆಗೆ ಪರೀಕ್ಷೆ ಪಾಸ್ ಮಾಡಿದ್ರೆ ಸಾಕಾಗಲ್ಲ, ಬದಲಾಗಿ ಅದಕ್ಕೆ ಬೇಕಾದ ಸ್ಕಿಲ್ಸ್ ಬೇಕು. ಸ್ಕಿಲ್ಸ್ ನೀಡುವ ಕೆಲಸವನ್ನು ಯುನಿವರ್ಸಲ್ ಕೋಚಿಂಗ್ ಸೆಂಟರ್ ಮಾಡುತ್ತಿದೆ. ದೇಶದ ಯುವ ಜನರ ವ್ಯಕ್ತಿತ್ವ ವಿಕಸನ ಆಗಬೇಕು. ವಿಕಸನ ಮಾಡುವಂತಹ ಕೆಲಸ ಉಪೇಂದ್ರ ಶೆಟ್ಟಿಯವರು ಮಾಡುತ್ತಿದ್ದಾರೆ ಎಂದರು.
ಈ ಸಮಯದಲ್ಲಿ ಕಳೆದ ವರ್ಷ ಯುನಿವರ್ಸಲ್ ಕೋಚಿಂಗ್ ಸೆಂಟರ್‍ನಲ್ಲಿ ಕೋಚಿಂಗ್ ಪಡೆದು ಸಿವಿಲ್ ಸರ್ವಿಸ್ ಗೆ ಆಯ್ಕೆಯಾದವರನ್ನು ಗೌರವಿಸಲಾಯಿತು. ಬಳಿಕ ಮಾತನಾಡಿದ ಎಂಆರ್ ಜಿ ಗ್ರೂಪ್ ನ ಸಿಎಂಡಿ ಆದ ಪ್ರಕಾಶ್ ಶೆಟ್ಟಿ, ದೇಶದ ಆಸ್ತಿ ಎಂದರೆ ಅದು ವಿದ್ಯೆ, ವಿದ್ಯೆ ನೀಡುವ ಮೂಲಕ ದೇಶ ಸೇವೆ ಮಾಡುಲಾಗುತ್ತಿದೆ. ಈ ಸಂಸ್ಥೆಯಲ್ಲಿ ಐ ಪಿ ಎಸ್, ಕೆಏಎಸ್ ತರಬೇತಿ ನೀಡುತ್ತಿದ್ದಾರೆ.ಆ ಮೂಲಕ ದೇಶ ಸೇವೆಯನ್ನು ಉಪೇಂದ್ರ ಶೆಟ್ಟಿಯವರ ಮಾಡುತ್ತಿದ್ದಾರೆ ಎಂದರು.
ಈ ವೇಳೆ ವೇದಿಕೆಯಲ್ಲಿ ಸಂಸದರಾದ ಏ ನಾರಯಣಸ್ವಾಮಿ,ಪಾಲಿಕೆ ಸದಸ್ಯರಾದ ಉಮೇಶ್ ಶೆಟ್ಟಿ, ಯುನಿವರ್ಸಲ್ ಸ್ಕೂಲ್ ಆಫ್ ಆಡ್ಮಿನಿಸ್ಟ್ರೇಷನ್ ನ ನಿರ್ದೇಶಕರಾದ ಉಪೇಂದ್ರ ಶೆಟ್ಟಿ ಸೇರಿದಂತೆ ಇತರೆ ಗಣ್ಯರು ಭಾಗಿಯಾಗಿದ್ದರು.
ಹೆಚ್ಚಿನ ಮಾಹಿತಿಗಾಗಿ
8105932421