ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಸುಳಿವು ಬಿಟ್ಟು ಕೊಟ್ಟ ಬಸವರಾಜ ಹೊರಟ್ಟಿ…
ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಧಾರವಾಡದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರ ಬೀಳಿಸುವ ಮನಸ್ಸು ನಮಗಿಲ್ಲ, ದೇವೆಗೌಡರು ಕೂಡಾ ಅದನ್ನೆ ಹೇಳಿದ್ದಾರೆ ಎಂದಿದ್ದಾರೆ.
ಉಪ ಚುನಾವಣಾ ಸಮೀಕ್ಷೆ ವಿಚಾರವಾಗಿ ಮಾತನಾಡಿದ ಅವರು, ಇಲ್ಲಿಯವರೆಗೆ ನಡೆಸಿದ ಸಮೀಕ್ಷೆಗಳು ಇದುವರೆಗೂ ಸರಿ ಆಗಿಲ್ಲ. ಹಲವಾರು ಜನ ಬೇರೆ ಬೇರೆ ರೀತಿ ಸಮೀಕ್ಷೆ ನಡೆಸಿದ್ದಾರೆ, ಎಲ್ಲರದೂ ಒಂದೆ ರೀತಿಯಾಗಿ ಬಂದಿಲ್ಲ. ಜನರ ಭಾವನೆಗಳು ಯಾರಿಗೂ ಗೊತ್ತಾಗುವುದಿಲ್ಲ, ಆದ್ದರಿಂದ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಂಬುವುದಿಲ್ಲ. ಸಮೀಕ್ಷೆಗಳ ಪ್ರಕಾರ ಫಲಿತಾಂಶ ಬರುವುದಿಲ್ಲ ಎನ್ನುವದು ನನ್ನ ನಂಬಿಕೆ ಎಂದಿದ್ದಾರೆ.
ಚುನಾವಣಾ ಫಲಿತಾಂಶದ ನಂತರ ಸರ್ಕಾರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ೭ ಶೀಟ್ ಗಳು ಬಂದರೆ ಮಾತ್ರ ಸರ್ಕಾರ ಉಳಿಯತ್ತೆ ಇಲ್ಲವಾದ್ರೆ ಬೇರೆ ಡೆವಲಪ್‌ಮೆಂಟ್ ನಡೆಯತ್ತೆ. ಜನರಿಗೆ ಸರ್ಕಾರ ಬೀಳಬಾರದು ಎಂಬ ಆಸೆ ಇದೆ, ಆ ಹಿನ್ನೆಲೆ ಎನಾದ್ರು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಸರ್ಕಾರ ಬೀಳಬಾರದು ಎನ್ನುವ ಮಾತನ್ನು ಕೂಡಾ ದೇವೆಗೌಡರು ನಿನ್ನೆನೆ ಹೇಳಿದ್ದಾರೆ. ಸಿದ್ದರಾಮಯ್ಯನ ಜೊತೆ ಸೇರಿ ಕಾಂಗ್ರೆಸ್ ಜೊತೆ ಕೈ ಜೊಡಿಸುವ ಮನಸ್ಸು ದೇವೆಗೌಡರಿಗೆ ಇಲ್ಲ. ಫಲಿತಾಂಶ ಬಂದ ನಂತರ ಎಲ್ಲಾ ಗೊತ್ತಾಗುತ್ತೆ.
ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎನ್ಕೌಂಟರ್ ಮಾಡಿದ್ದು ಒಳ್ಳೆಯ ವಿಚಾರ. ಹೆಣ್ಣು ಮಕ್ಕಳ ಮೇಲೆ ಈ ರೀತಿ ನಡೆದುಕೊಂಡವರನ್ನು ಗಲ್ಲಿಗೇರಿಸಲೇ ಬೇಕು. ನ್ಯಾಯಾಲಯಗಳು ಇಂತವರನ್ನು ಬಹಳ ದಿನಾ ಇಟ್ಟುಕೊಳ್ಳಬಾರದು. ಎನ್ಕೌಂಟರ್ ಮಾಡಿದ್ದು ಸರಿಯಾದ ಕ್ರಮ ಎಂದಿದ್ದಾರೆ.