ಪಾಕ್ ಯುದ್ದದಲ್ಲಿ ಭಾರತ ಜಯದ ನೆನಪಿಗಾಗಿ ‘ವಿಜಯಿ ದಿವಸ್’ ಆಚರಣೆ….
1971ರಲ್ಲಿ ನಡೆದ ಇಂಡೋ ಪಾಕ್ ಯುದ್ದದಲ್ಲಿ ಭಾರತ ಜಯಗಳಿಸಿದ ವಿಜಯದ ನೆನಪಿಗಾಗಿ ಇಂದು ಕಾರವಾರ ಜಿಲ್ಲಾಡಳಿತ ಹಾಗು ಐ.ಎನ್.ಎಸ್ ಕದಂಬ ನೌಕಾಪಡೆ ವತಿಯಿಂದ ವಿಜಯಿ ದಿವಸ್ ಆಚರಿಸಲಾಯಿತು.
ಜಿಲ್ಲಾಕೇಂದ್ರ ಕಾರವಾರದ ವಾರ್ಷಿಪ್ ಮ್ಯೂಸಿಯಮ್ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೌಕಾ ಪಡೆಯ ಅಧಿಕಾರಿ ವರ್ಗದವರು ಹಾಜರಿದ್ರು, ಕದಂಬ ನೌಕಾಪಡೆಯ ಮುಖ್ಯಸ್ತ ಶ್ರಿನಿವಾಸ ಮುಖ್ಯ ಅತಿಥಿಯಾಗಿ ಹಾಜರಿದ್ದರು ಜೊತೆಗೆ ಜಿಲ್ಲಧಿಕಾರಿ ಹರೀಶಕುಮಾರ ಹಾಜರಿದ್ದು ಈ ಮೊದಲು 1971ರಲ್ಲಿ ನಡೆದ ಯುದ್ದದಲ್ಲಿ ಪಾಲ್ಗೋಂಡು ವೀರ ಮರಣಹೊಂದಿದ ಸೈನಿಕ ರಾಘೋಭ ರಾಣೆ ಯವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ರು..
ಈ ಸಂದರ್ಭದಲ್ಲಿ ಎನ್.ಸಿ.ಸಿ ಅಭ್ಯರ್ಥಿ ಗಳ ತಂಡದಿಂದ ಗೌರವ ವಂದನೆ ಸಲ್ಲಿಸಲಾಯಿತು..ಬಂದ ಅಧಿಕಾರಿಗಳು ಹುತಾತ್ಮ ಸ್ಮಾರಕ್ಕೆ ಹೂಗುಚ್ಚ ಅರ್ಪಿಸಿ ಗೌರವ ಸಲ್ಲಿಸಿದ್ರು…