ಫಿಲಿಫೈನ್ಸ್‍ನಲ್ಲಿ ಸಿಡಿದ ಜ್ವಾಲಾಮುಖಿ : ಆಕಾಶದಲ್ಲಿ ಬೂದಿ, ಮಿಂಚಿನ ಜ್ವಾಲೆ

ಆಕಾಶದಲ್ಲಿ ಬೂದಿ, ಮಿಂಚಿನ ಜ್ವಾಲೆ, ಭೂಕಂಪನ ಇವೆಲ್ಲವು ಒಟ್ಟಿಗೆ ಸಂಭವಿಸಿದ್ದು, ಫಿಲಿಫೈನ್ಸ್‍ನಲ್ಲಿ. ಪ್ರಕೃತಿಯ ಮುನಿಸಿಗೆ ಜನ ಅಕ್ಷರಶ: ಭಯಬೀತರಾಗಿದ್ದಾರೆ.

ಹೌದು…  ಫಿಲಿಫೈನ್ಸ್‍ನ ರಾಜಧಾನಿ ದಕ್ಷಿಣ ಭಾಗದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಆಕಾಶದಲ್ಲಿ ಬೂದಿ ಹಾಗೂ ಮಿಂಚಿನ ಜ್ವಾಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಈ ಭಾಗದಲ್ಲಿ ಹಾರಾಟ ನಡೆಸಿದ್ದ ನೂರಾರು ವಿಮಾನಗಳಿಗೆ ತುರ್ತು ಸಂದೇಶ ನೀಡಿ ವಿಮಾನ ನಿಲ್ದಾಣಗಳಲ್ಲಿ ಉಳಿಸಲಾಗಿದೆ.

ಇದೇ ವೇಳೆ ಭೂಕಂಪನಗಳು ಕೂಡ ನಡೆದಿದ್ದು, ಈ ಪ್ರದೇಶದಲ್ಲಿರುವ ಮನೆಗಳು ಹಾಗೂ ರಸ್ತೆಗಳಲ್ಲಿ ಬೂದಿ ಆವರಿಸಿದೆ.  ನಾವು ಮಲಗಲು ಸಾಧ್ಯವಾಗದ ರೀತಿಯಲ್ಲಿ ಘಟನೆಯಲ್ಲಿ ಭೂಮಿ ನಡಗುತ್ತಿದೆ. ನಿಜಕ್ಕೂ ಇದು ಪ್ರಕೃತಿಯ ಮುನಿಸು ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಸುಮಾರು 10,000 ಮಂದಿಯನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ.

ಸರ್ಕಾರಿ ಕಚೇರಿಗಳು, ಶಾಲೆ, ಹೊಟೇಲ್ ಸೇರಿದಂತೆ ಎಲ್ಲವನ್ನು ಮುಚ್ಚಲಾಗಿದೆ. ಇಲ್ಲಿನ ನಿಯೋನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ಸೇರಿದ್ದು,ಇಲ್ಲಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸುಮಾರು 250ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights