ಫ್ಯಾಕ್ಟ್ಚೆಕ್ : ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆಂದು ಸುಳ್ಳು ಆರೋಪ ಮಾಡಿದ BJP!
ಇತ್ತೀಚೆಗೆ ಪಶ್ಚಿಮ ಬಂಗಾಳದ, ಹೌರಾದ ಶಿವಪುರದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಸ್ಥಳೀಯ ಹಿಂದೂ ಸಂಘಟನೆಯೊಂದು ಮೆರವಣಿಗೆ ನಡೆಸುತ್ತಿದ್ದ ವೇಳೆ ಗಲಭೆ ಉಂಟಾಗಿತ್ತು. ಗ್ರಾಂಡ್ ಟ್ರಂಕ್ ರಸ್ತೆಯಲ್ಲಿ ನಡೆದ ಹಿಂಸಾಚಾರದಲ್ಲಿ ಅಂಗಡಿಗಳು ಹಾಗೂ ರಸ್ತೆಬದಿಯಲ್ಲಿದ್ದ ಬೈಕ್ಗಳು ಬೆಂಕಿಗೆ ಆಹುತಿಯಾಗಿದ್ದವು. ಮರುದಿನ ಇದೇ ಜಾಗದಲ್ಲಿ ಕಲ್ಲುತೂರಾಟವೂ ನಡೆದಿತ್ತು. ಶಿವನ ದೇವಸ್ಥಾನಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
যে গরু দুধে দেয় তার লাথি খেতে হয়। pic.twitter.com/J8ALRpkb8S
— Dr. Sukanta Majumdar (@DrSukantaBJP) March 30, 2023
ಇದೇ ಪ್ರತಿಪಾದನೆಯೊಂದಿಗೆ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮುಖ್ಯಸ್ಥ ಸುಕಾಂತಾ ಮಜುಂದಾರ್, ಗೋಪಾಲ್ ಗೋಸ್ವಾಮಿ ಎಂಬವರು ಈ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ‘ಜಿಹಾದಿಗಳು ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ, ಮಮತಾ ದೀದಿ ಅವರು ರಾಹುಲ್ ಭಜನೆಗಳನ್ನು ಹಾಡುತ್ತಿದ್ದಾರೆ’ ಎಂದು ಗೋಪಾಲ್ ಆರೋಪಿಸಿದ್ದಾರೆ.
ಹಲವು BJP ಮತ್ತು ಬಲಪಂಥೀಯ ಪ್ರತಿಪಾದಕರು ಇದೇ ಹೇಳಿಕೆಯನ್ನು ಉಲ್ಲೇಖಿಸಿ ಮುಸ್ಲಿಮರು ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, BJP ಬೆಂಬಲಿಗರು ಮಾಡಿರುವ ಆರೋಪ ಸುಳ್ಳು ಎಂದು ಆಲ್ಟ್ನ್ಯೂಸ್ ವರದಿ ಮಾಡಿದೆ. ದೇವಸ್ಥಾನಕ್ಕೆ ಬೆಂಕಿ ಹಚ್ಚಲಾಗಿದೆ ಎಂಬುದು ಸತ್ಯಕ್ಕೆ ದೂರುವಾದುದು ಎಂದು ‘ಆಲ್ಟ್ ನ್ಯೂಸ್’ ಫ್ಯಾಕ್ಟ್ಚೆಕ್ ವರದಿಯನ್ನು ಪ್ರಕಟಿಸಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಆಲ್ಟ್ನ್ಯೂಸ್ ತಂಡ, ಭದ್ರಕ್ನ ಸುದಾಮ ಪಂಡಿತ್ ಎಂಬ ಪುರೋಹಿತರನ್ನು ಭೇಟಿ ಮಾಡಿ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ಟ್ವೀಟ್ ಮಾಡಿದ ವೀಡಿಯೊವನ್ನು ತೋರಿಸಿ ಮಾಹಿತಿಯನ್ನು ಪಡೆದಿದೆ. ಘಟನೆಯನ್ನು ವಿವರಿಸಿರುವ ಪುರೋಹಿತರು, ಆ ಸ್ಥಳವನ್ನು ದೇವಾಲಯದ ಹಿಂದಿನ ಓಣಿ ಎಂದು ಗುರುತಿಸಿದ್ದಾರೆ. ವಿಡಿಯೊವನ್ನು ನೋಡಿದಾಗ, ವೀಡಿಯೊದಲ್ಲಿ ಕಂಡುಬರುವ ಜ್ವಾಲೆಯು ದೇವಸ್ಥಾನದ ಮುಂಭಾಗದಲ್ಲಿಯೇ ಪ್ಲಾಸ್ಟಿಕ್ ಪೆಟ್ಟಿಗೆಗಳು, ಬುಟ್ಟಿಗಳು ಮತ್ತು ರಸ್ತೆ ಬದಿಯ ತ್ಯಾಜ್ಯವನ್ನು ಆವರಿಸಿದೆ ಎಂದು ಅವರು ಹೇಳಿದರು.
Fact: No temple was burnt in Howrah. One viral video shows someone from balcony while filming presumed the temple was being burnt seeing black smoke billowing from the main road. That black smoke was due to burning of these plastic fruit carts that belonged to poor vendors. pic.twitter.com/mJq5cGUCKA
— Tamal Saha (@Tamal0401) April 2, 2023
ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಮೆರವಣಿಗೆ ವೇಳೆ ಹಣ್ಣಿನ ಬುಟ್ಟಿಗಳು, ಬಿದಿರಿನ ಸಾಮಗ್ರಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಜ್ವಾಲೆಯು ದೇವಸ್ಥಾನದ ಒಂದು ಪಾರ್ಶ್ವಕ್ಕೆ ಸ್ವಲ್ಪ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ‘ಮುಸ್ಲಿಮ್ ವ್ಯಾಪಾರಿಗಳು ನಿತ್ಯವೂ ಬಳಸುತ್ತಿದ್ದ ಹಣ್ಣಿನ ಬುಟ್ಟಿಗಳು, ಬಿದಿರಿನ ಸಾಮಗ್ರಿಗಳನ್ನು ತಂದು ಬೆಂಕಿಗೆ ಸುರಿಯಲಾಗಿತ್ತು. ಬೆಂಕಿಯಿಂದ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ. ಬೆಂಕಿ ದೇವಸ್ಥಾನಕ್ಕೆ ತಾಗಿಲ್ಲ ಎಂದಿದ್ದಾರೆ.

ನಾನು ಕಳೆದ 40 ವರ್ಷಗಳಿಂದ ಇಲ್ಲಿ ಅರ್ಚಕನಾಗಿದ್ದೇನೆ. ನಾವು ನಮ್ಮ ಮುಸ್ಲಿಂ ಸಹೋದರರೊಂದಿಗೆ ಸಾಮರಸ್ಯದಿಂದ ಬದುಕುತ್ತೇವೆ. ನಾನು ಹಿಂದೆಂದೂ ಅಂತಹದನ್ನು ನೋಡಿಲ್ಲ, ”ಎಂದು ಪಂಡಿತ್ ಆಲ್ಟ್ನ್ಯೂಸ್ಗೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಹೌರಾದ ಶಿವಪುರದಲ್ಲಿ ರಾಮನವಮಿ ಹಿಂಸಾಚಾರದ ವೇಳೆ ಬೆಂಕಿಯಿಂದ ದೇವಾಲಯಕ್ಕೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಸ್ಪಷ್ಟವಾಗಿದೆ. ರಾಮನವಮಿಯ ದಿನದಂದು ಮುಸ್ಲಿಮರು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ BJP ಬೆಂಬಲಿಗರು ವಿಡಿಯೋ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರೆ?

