ಫ್ಯಾಕ್ಟ್‌ಚೆಕ್ : ಕರ್ನಾಟಕದಲ್ಲಿ ನಂದಿನಿ ಬಳಸಿ ಎನ್ನುವ ರಾಹುಲ್ ಗಾಂಧಿ, ದೆಹಲಿಯಲ್ಲಿ ಅಮುಲ್‌ಗೆ ಪ್ರಚಾರ ನೀಡಿದರೇ?

ಕರ್ನಾಟಕದಲ್ಲಿ ಅಮುಲ್‌ ಹಾಲು ಮಾರಾಟಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ನಮ್ಮ ರಾಜ್ಯದ್ದೇ ನಂದಿನಿ ಬ್ರಾಂಡ್‌ ಇರುವಾಗ ಅಮುಲ್‌ ಯಾಕೆ ಬೇಕು ಎಂದು ಕನ್ನಡಿಗರು ಹೋರಾಟ ನಡೆಸಿದ್ದರು.  ನಂದಿನಿ ಮತ್ತು ಅಮುಲ್’ಸಹಕಾರ’ದ ಕುರಿತ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆ ನಂತರ ಈ ವಿವಾದ ಸೃಷ್ಟಿಯಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಅಮಿತ್ ಶಾ ನೀಡಿದ ಹೇಳಿಕೆಯಿಂದ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ನಡುವಿನ ವಿವಾದದ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಏಪ್ರಿಲ್ 16 ರಂದು ಬೆಂಗಳೂರಿನ ನಂದಿನಿ ಮಿಲ್ಕ್ ಪಾರ್ಲರ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ನಂದಿನಿ ಐಸ್ ಕ್ರೀಮ್ ಖರೀದಿಸಿದರು ಮತ್ತು ನಂದಿನಿ ಬ್ರಾಂಡ್ ಕರ್ನಾಟಕ “ರಾಜ್ಯದ ಹೆಮ್ಮೆ” ಎಂದು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಂದು ಚಿತ್ರ ವೈರಲ್ ಆಗಿದ್ದು, ರಾಹುಲ್ ಗಾಂಧಿ ಅಮುಲ್ ಬ್ರಾಂಡಿನ ಉತ್ಪನ್ನಗಳನ್ನು ಸವಿಯುತ್ತಿದ್ದಾರೆ ಎಂದು ಆಪಾದಿಸಿ ಆಂಧ್ರಪ್ರದೇಶ BJP ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣು ವರ್ಧನ್ ರೆಡ್ಡಿ ವೈರಲ್  ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿಯವರ ಮಾತಿಗೂ ಕೃತಿಗೂ ಎಷ್ಟು ವ್ಯತ್ಯಾಸವಿದೆ ನೋಡಿ ಎಂಬ ಹೇಳಿಕೆಯೊಂದಿಗೆ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

“ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅಮುಲ್ ವಿರುದ್ಧ ಮಾತನಾಡುತ್ತಾರೆ, ದೆಹಲಿಯಲ್ಲಿ ಅಮುಲ್ ಡೈರಿಗೆ ಹೋಗಿ ಅದನ್ನು ಹೊಗಳುತ್ತಾರೆ. ಕಾಂಗ್ರೆಸ್‌ನ ಮುಖವಾಡವನ್ನು ಜನರು ಅರ್ಥಮಾಡಿಕೊಳ್ಳಬೇಕು, ಅವರ ಉದ್ದೇಶ ಭಾರತೀಯರು ಕಚ್ಚಾಡಿಕೊಂಡಿರಬೇಕು ಎನ್ನುವುದು” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾಧನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ BJP ನಾಯಕರು ಹಂಚಿಕೊಂಡಿರುವ ಫೋಟೊವನ್ನು ಪರಿಶೀಲಿಸಿದಾಗ, ಫೋಟೊಗಳನ್ನು ತಪ್ಪಾಗಿ ಹಂಚಿಕೊಂಡಿರುವುದು ಪತ್ತೆಯಾಗಿದೆ.ರಾಹುಲ್ ಗಾಂಧಿ ಅವರು ಅಮುಲ್ ಡೈರಿಗೆ ಭೇಟಿ ನೀಡಿಲ್ಲ ಅಥವಾ ಗುಜರಾತ್ ಸಹಕಾರಿಯ ಉತ್ಪನ್ನಗಳನ್ನು ಪ್ರಚಾರ ಮಾಡಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಹಲವು ಮಾಧ್ಯಮಗಳ ವರದಿಯ ಪ್ರಕಾರ, ರಾಹುಲ್ ಗಾಂಧಿ ಏಪ್ರಿಲ್ 18 ರಂದು ದೆಹಲಿಯ ಬಂಗಾಳಿ ಮಾರುಕಟ್ಟೆ ಮತ್ತು ಚಾಂದಿನಿ ಚೌಕ್‌ಗೆ ಭೇಟಿ ನೀಡಿ ಈ ಪ್ರದೇಶಗಳಲ್ಲಿ ಲಭ್ಯವಾಗುವ ಜನಪ್ರಿಯ ಬೀದಿ ಆಹಾರವನ್ನು ಸೇವಿಸಿದ್ದಾರೆ. ಫ್ರೀ ಪ್ರೆಸ್ ಜರ್ನಲ್ ತನ್ನ ವರದಿಯಲ್ಲಿ “ರಾಹುಲ್ ಗಾಂಧಿ ಹಳೆ ದೆಹಲಿಯ, ಬಂಗಾಳಿ ಮಾರುಕಟ್ಟೆಗೆ ಭೇಟಿ ನೀಡಿ ಶರ್ಬತ್, ಗೋಲ್ಗಪ್ಪವನ್ನು ಸವಿದು ಆನಂದಿಸಿದ್ದಾರೆ ” ಎಂಬ ಶೀರ್ಷಿಕೆ ನೀಡಿದೆ.

ಮೊಹಬ್ಬತ್ ಕಾ ಶರ್ಬತ್ ಹಳೆಯ ದೆಹಲಿಯಲ್ಲಿ ಮಾರಾಟವಾಗುವ ಜನಪ್ರಿಯ ಬೇಸಿಗೆ ಪಾನೀಯವಾಗಿದೆ. ಸುಡು ಬೇಸಿಗೆಯ ಬಿಸಿಲಿನ ಕಾರಣಕ್ಕೆ ರಾಹುಲ್ ಗಾಂಧಿವರು ಕಲ್ಲಂಗಡಿ, ಹಾಲು ಮತ್ತು ಐಸ್ ಕ್ಯೂಬ್‌ನಿಂದ ತಯಾರಿಸಿದ ರೂಹ್ ಅಫ್ಜಾವನ್ನು ಸವಿದಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ದೆಹಲಿಯಲ್ಲಿ ಅಮುಲ್ ಉತ್ಪನ್ನಗಳನ್ನು ಬಳಸುವ ಮೂಲಕ ಪ್ರಚಾರ ನೀಡುತ್ತಿದ್ದಾರೆ ಎಂದು ಸುಳ್ಳು ಪೋಸ್ಟ್‌ಅನ್ನು ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ಒಂದು ವೇಳೆ ರಾಹುಲ್ ಗಾಂಧಿ ಅಮುಲ್ ಉತ್ಪನ್ನಗಳನ್ನು ಬಳಸಲು ಇಚ್ಚಿಸಿದರೆ, ಅದನ್ನು ಸ್ವಾಗತಿಸಬೇಕು. ಯಾಕೆಂದರೆ ಅಮುಲ್ ಉತ್ಪನ್ನಗಳು ನಿಷೇದಿತ ಉತ್ಪನ್ನಗಳಲ್ಲ ಮತ್ತು ಅದನ್ನು ಬಳಸಿದರೆ ಅಪರದವೂ ಅಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ಚಾಂದಿನಿ ಚೌಕ್‌ನಲ್ಲಿ ಸವಿದ ತಂಪು ಪಾನೀಯಾವನ್ನು, ಅಮುಲ್ ಉತ್ಪನ್ನಗಳನ್ನು ಮಾರಾಟ ಪ್ರಚಾರ ಮಾಡುವ ಮೂಲಕ ಕರ್ನಾಟಕದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟಿಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights