ಬಜೆಟ್ ಪ್ರತಿಗೆ ವಿಶೇಷ ಪೂಜೆ : ಹಸಿರು ಶಾಲು ಹಾಕಿಕೊಂಡ ಸಿಎಂ..

ಇಂದು ರಾಜ್ಯ ಬಜೆಟ್ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಗರದ ಮಲ್ಲೇಶ್ವರಂನಲ್ಲಿರುವ ರಾಯರ ಮಠಕ್ಕೆ ತೆರಳಿ ಬಜೆಟ್ ಪ್ರತಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡನೆಗೂ ಮುನ್ನ ದೇವಸ್ಥಾನಕ್ಕೆ ತೆರಳಿದ ಸಿಎಂ ಬಿಎಸ್ ವೈ ಬಿಳಿ ವಸ್ತ್ರ ಹಸಿರು ಶಾಲು ಹಾಕಿಕೊಂಡಿರುವುದು ಭಾರೀ ಗಮನ ಸೆಳೆದಿದೆ. ಇದರಿಂದ ಈ ಬಜೆಟ್ ನಲ್ಲಿ ರೈತರಿಗೆ ಸಂತಸದ ವಿಷಯ ಇರಬಹುದು ಎನ್ನುವ ಕುತೂಹಲ ಅಧಿಕವಾಗಿದೆ.

ಯಡಿಯೂರಪ್ಪ ಬ್ರೀಫ್‍ಕೇಸ್‍ನಲ್ಲಿ ತಂದಿದ್ದ ಬಜೆಟ್ ಪ್ರತಿಗಳಿಗೆ ಮಠದ ಶ್ರೀಗಳಿಂದ ಪೂಜೆ ಸಲ್ಲಿಸಿ ನಾಡಿನ ಒಳಿತಿಗೆ ಪ್ರಾರ್ಥಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ರೈತಪರ ಬಜೆಟ್ ಮಂಡಿಸಲು ಪ್ರಯತ್ನಿಸಿದ್ದೇನೆ. ಯಾವುದೇ ಯೋಜನೆಗಳನ್ನು ಕಡಿತಗೊಳಿಸಿವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಜೊತೆಗೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸಚಿವ ಪ್ರಭುಚವ್ಹಾಣ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಸೇರಿದಂತೆ ಮತ್ತಿತರರು ರಾಯರ ಮಠದಲ್ಲಿ ವಿಶೇಷ ಪೂಜೆ ಸಲ್ಲಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights