ಬಲ್ಬ್‌ನೊಳಗೆ ವಿಭಿನ್ನವಾಗಿ ಗಣೇಶ ಮೂರ್ತಿ ರೂಪಿಸಿದ ಯುವಕಲಾವಿದ…!

ನಾಡಿನಲ್ಲೆಡೆ ಈಗ ಎಲ್ಲಿ ನೋಡಿದ್ರೂ ಗಣೇಶನ ಮೂರ್ತಿಯದ್ದೇ ಭರಾಟೆ ಇವುಗಳ ಮಧ್ಯೆ ಯುವಕಲಾವಿದನೊಬ್ಬ ಬಲ್ಬ್‌ನೊಳಗೆ ವಿಭಿನ್ನವಾಗಿ ಗಣೇಶನ ಮೂರ್ತಿಗಳನ್ನ ರೂಪಿಸೋ ಮೂಲಕ ತನ್ನ ಕೈಚಳಕ ಪ್ರದರ್ಶಿಸಿ ಗಮನ ಸೆಳೆದಿದ್ದಾನೆ..

ಹೌದು… ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಯುವಕ ವಿಜಯ್ ಪವಾರ್ ಎಂಬಾತನೇ ಈ ಬಲ್ಬ್ ಯುವ ಕಲಾವಿದ. ಈತ ಕಳೆದ ೧೦ ವರ್ಷಗಳಿಂದ ಬಲ್ಬ್‌ನಲ್ಲಿ ವಿಭಿನ್ನ ರೀತಿಯ ಕಲಾಕೃತಿ ತಯಾರಿಸಿಕೊಂಡು ಬರ್ತಿದ್ದು, ಇಲ್ಲಿಯವರೆಗೂ ಕಡ್ಡಿ ಮತ್ತು ಹಾಳೆಗಳಿಂದ ಗೋಲಗುಮ್ಮಟ, ಚಾರಮಿನರ್, ದೆಹಲಿಯ ಕೆಂಪುಕೋಟೆ, ವಿಧಾನಸೌಧ, ವಿಕಾಸಸೌಧ ಸೇರಿದಂತೆ ಜಗತ್‌ಪ್ರಸಿದ್ದ ಕಟ್ಟಡಗಳನ್ನೊಳಗೊಂಡು ಇಲ್ಲಿಯವರೆಗೆ ಅಂದಾಜು ೬೦೦ಕ್ಕೂ ಅಧಿಕ ಕಲಾಕೃತಿ ರೂಪಿಸಿರೋ ವಿಜಯ್ ಇದೀಗ ಗಣೇಶ ಚತುರ್ಥಿಯ ನಿಮಿತ್ಯ ೨೦೦ ವ್ಯಾಟ್‌ನ ೪ ಬಲ್ಬ್‌ಗಳಲ್ಲಿ ಮತ್ತು ೬೦ ವ್ಯಾಟ್‌ನ ಬಲ್ಬನೊಳಗೆ ವಿಶೇಷ ಗಣೇಶನ ಮೂರ್ತಿಗಳನ್ನ ತಯಾರಿಸಿದ್ದಾನೆ.

ಈ ಮಧ್ಯೆ ತಮ್ಮ ವಿಶಿಷ್ಟ ಕಲಾಕೃತಿಯಿಂದಲೇ ಈ ಹಿಂದೆ ೬ ಬಾರಿ ಲಿಮ್ಕಾ ದಾಖಲೆ ಮಾಡಿರೋ ವಿಜಯ್‌ನ ಕಲೆಯ ಕೈಚಳಕಕ್ಕೆ ಇದೀಗ ಜನ್ರು ಫುಲ್ ಫಿದಾ ಆಗಿದ್ದಾರೆ. ಅಲ್ಲದೆ ವಿಶೇಷ ಸಂದರ್ಭಗಳಲ್ಲಿ ವಸ್ತುಸ್ಥಿತಿ ಗೆ ಸಂಭಂದಿಸಿದಂತೆ ಬಲ್ಬ್‌ನಲ್ಲಿ ವಿಶೇಷ ಕಲಾಕೃತಿ ರಚಿಸೋ ವಿಜಯ್ ಇನ್ನೂ ಕೂಡ ಮುಂದಿನ ದಿನಗಳಲ್ಲಿ ಏನಾದ್ರೂ ಸಾಧನೆ ಮಾಡಬೇಕೆನ್ನೋ ಹಂಬಲ ಹೊಂದಿದ್ದಾನೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights