ಬಿಗ್ಬಾಸ್ ಮನೆಯ ಆ ಐದು ನಿಮಿಷಗಳು… 50 ದಿನ ಪೂರೈಸಿದ ಸಂಭ್ರಮದಲ್ಲಿ ಬಿಗ್ಬಾಸ್ ಸೀಸನ್ 7
ಪ್ರತಿ ವರ್ಷದಂತೆ ಈ ವರ್ಷವೂ ಬಿಗ್ಬಾಸ್ ರಿಯಾಲಿಟಿ ಶೋ ಶುರುವಾಗಿದೆ. ಸೆಲೆಬ್ರಿಟಿಗಳನ್ನು ಒಂದು ಮನೆಯಲ್ಲಿ ಕೂಡಿ ಹಾಕಿ ನಾನಾ ಟಾಸ್ಕ್ಗಳನ್ನ ನೀಡ್ತಾ, ಬಿಗ್ಬಾಸ್ ಆಟವಾಡ್ತಿದ್ರೆ. ಈ ಬಾರಿಯ ಬಿಗ್ಬಾಸ್ ನಾನೇ ಗೆಲ್ಲಬೇಕು ಅನ್ನೋ ಛಲದೊಂದಿಗೆ, ಎಲ್ಲಾ ಟಾಸ್ಕ್ಗಳಲ್ಲೂ ನೂರಕ್ಕೆ ನೂರು ಪರಿಶ್ರಮ ಹಾಕಿ ಸ್ಪರ್ಧಿಗಳು ಮುನ್ನುಗ್ಗುತ್ತಿದ್ದಾರೆ. ಈಗಾಗಲೇ 50 ದಿನ ಕಂಪ್ಲೀಟ್ ಆಗಿದ್ದು, ಇನ್ನು 50 ದಿನ ಬಿಗ್ಬಾಸ್ ಮನೆಯಲ್ಲಿ ಉಳಿಯುವವರೇ ಈ ಬಾರಿ ಪ್ರಶಸ್ತಿ ಕೊಂಡೊಯ್ಯಲಿದ್ದಾರೆ.
ಉಳಿದಿರುವ ಸ್ಪರ್ಧಿಗಳು 13
ಕಳೆದ 7 ವಾರಗಳಿಂದ ಎಲಿಮಿನೀಷನ್ನಲ್ಲಿ ಹೊರಹೋದವರು, ವೈಲ್ಡ್ ಕಾಡ್ರ್ ಎಂಟ್ರಿ ಪಡೆದು ಬಿಗ್ಬಾಸ್ ಮನೆಗೆ ಬಂದವರು ಎಲ್ಲವನ್ನೂ ಸೇರಿಸಿದ್ರೆ ಸದ್ಯ 13 ಮಂದಿ ಬಿಗ್ಬಾಸ್ ಮನೆಯಲ್ಲಿದ್ದಾರೆ. ನಿನ್ನೆಯಷ್ಟೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿದ್ದ ಆರ್ಜೆ ಪೃಥ್ವಿ ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಾರೆ. ನಾಮಿನೇಟ್ ಆಗಿ ಹೊರಬಂದು ಮತ್ತೆ ಬಿಗ್ ಮನೆಯಲ್ಲಿ ಮರುಜನ್ಮ ಪಡೆದಿರುವ ಚೈತ್ರಾ ಕೋಟೂರ್ ಅವ್ರನ್ನ ಮುಂದಿನ ವಾರಕ್ಕೆ ಡೈರೆಕ್ಟ್ ನಾಮಿನೇಟ್ ಮಾಡಿದ್ದಾರೆ ಪೃಥ್ವಿ.
ಆ ಐದು ನಿಮಿಷಗಳು…
ಈವರೆಗಿನ 50 ದಿನಗಳಲ್ಲಿ ಅದ್ಭುತವೆನಿಸುವ, ಅತ್ಯಮೂಲ್ಯ ಎನಿಸುವ, ಎಮೋಷನಲ್ ಎನಿಸುವ ಕ್ಷಣಗಳು ಯಾವುದು ಅಂತ ನೋಡಲು ಹೋದ್ರೆ ನಮಗೆ ನೆನಪಾಗುವುದು, ಬಹುಶಃ ಬಿಗ್ಬಾಸ್ ಮುಗಿದು ಹಲವು ವರ್ಷಗಳಾದ್ರೂ ನೆನಪಿನಲ್ಲಿ ಉಳಿಯುವುದು ಅಂದ್ರೆ ಅದು ಸೆಲೆಬ್ರಿಟಿ ಕೊರಿಯೋಗ್ರಾಫರ್, ಡ್ಯಾನ್ಸರ್ ಕಿಶನ್.
ಕಿಶನ್ ಮಾತು, ಮೌನ, ಡ್ಯಾನ್ಸ್…
ಹೌದು, ಈಗ್ಗೆ ಕೆಲ ದಿನಗಳ ಹಿಂದೆ ಬಿಗ್ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದರಂತೆ ಸ್ಪರ್ಧಿಗಳು ತಾವು ಯಾರ ಬಳಿಯಾದ್ರೂ ಕ್ಷಮೆಯಾಚಿಸಬೇಕು ಅಂದ್ರೆ ಕೇಳಬಹುದು ಅಂತ. ಅದರಂತೆ ತಮ್ಮ ಜೀವನದಲ್ಲಾದ ಕೆಲ ಘಟನೆಗಳನ್ನು ಮೆಲುಕು ಹಾಕುತ್ತಾ ಎಲ್ಲ ಸ್ಪರ್ಧಿಗಳೂ ಒಬ್ಬೊಬ್ಬರ ಬಳಿ ಕ್ಷಮೆ ಕೇಳಿದ್ರು. ಆದ್ರೆ ಕಿಶನ್ ಅವ್ರ ಅಂದಿನ ಮಾತು, ಮೌನ, ಡ್ಯಾನ್ಸ್ ಎಲ್ಲವೂ ಸ್ಪರ್ಧಿಗಳಷ್ಟೇ ಅಲ್ಲ, ನೋಡುಗರ ಕಣ್ಣಲ್ಲೂ ನೀರು ತರಿಸಿತ್ತು.
ತಾಯಿಯ ಬಳಿ ಕ್ಷಮೆ ಕೇಳಿದ್ದೇಕೆ ಕಿಶನ್ ?
ಕಿಶನ್. ಒಬ್ಬ ಪ್ರತಿಭಾನ್ವಿತ ಯುವಕ. ತಮ್ಮ ಡ್ಯಾನ್ಸ್ನಿಂದಲೇ ಕರ್ನಾಟಕ ಮಾತ್ರವಲ್ಲ ಭಾರತದಾದ್ಯಂತ ಮನೆ ಮಾತಾಗಿರುವ ಹುಡುಗ. ಆದ್ರೂ ಅವ್ರ ಬಗ್ಗೆ ಹೆಚ್ಚು ಜನರಿಗೆ ಹೆಚ್ಚು ತಿಳಿದಿರಲಿಲ್ಲ. ಆದ್ರೆ ಅಂದಿನ ಎಪಿಸೋಡ್ನಲ್ಲಿ ಕಿಶನ್ ತಮ್ಮ ಮನಸ್ಸನ್ನು ಬಿಚ್ಚಿಟ್ಟಿದ್ದರು. ತಮ್ಮ ತಾಯಿಯನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದರು. ಡ್ಯಾನ್ಸ್ ಮಾಡುವ ಅರ್ಧದಲ್ಲೇ ಭಾವೋದ್ವೇಗಕ್ಕೆ ಒಳಗಾಗಿ ಅಳುತ್ತಾ ಕುಳಿತುಬಿಟ್ಟಿದ್ದರು. ನಂತರ ಎಲ್ಲ ಸ್ಪರ್ಧಿಗಳೂ ಅವ್ರನ್ನು ಮತ್ತೆ ಹುರಿದುಂಬಿಸಿದ್ರು. ತಾಯಿ, ಮಗು ನಡುವಿನ ಬಾಂಧವ್ಯವೇ ಅಂಥಾದ್ದಲ್ಲವೇ…
ನಂತರ ಮಾತನಾಡಿದ ಕಿಶನ್, ಅವ್ರ ನಗುಮುಖದ ಹಿಂದಿನ ನೋವಿನ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮೂರು ತಿಂಗಳ ಮಗುವಾಗಿದ್ದಾಗಲೇ ಅವ್ರ ತಾಯಿ ಅಪಘಾತಕ್ಕೀಡಾಗಿದ್ದರಂತೆ. ಅದ್ರಿಂದಾಗ ಅವ್ರ ದೇಹದ ಅರ್ಧ ಭಾಗ ಸುಟ್ಟಿತ್ತು. ಮೊದಲು ಹೇಗಿದ್ದೆ, ಈಗ ಹೀಗಾದೆನಲ್ಲಾ ಅನ್ನೋ ನೋವಿನಲ್ಲೇ ಅವರ ತಾಯಿ ಮದ್ಯಪಾನ ಮಾಡತೊಡಗಿದ್ರಂತೆ. ಆ ಬಳಿಕ ಕಿಶನ್ ಸಹ ಮುಂಬೈಗೆ ಹೋದ ಕಾರಣ, ತಾಯಿಯ ಜತೆ ಹೆಚ್ಚು ಮಾತನಾಡುತ್ತಿರಲಿಲ್ಲವಂತೆ. ಒಮ್ಮೆ ಕರೆ ಮಾಡಿದ್ದಾಗ ಅವ್ರ ತಾಯಿ ಕಿಶನ್ಗೆ ಬಟ್ಟೆ ತಗೋ ದುಡ್ಡು ಕಳಿಸ್ತೀನಿ ಅಂದಿದ್ರಂತೆ, ಅದಾದ ಮಾರನೆಯ ದಿನವೇ ಕಿಶನ್ ತಾಯಿ ವಿಧಿವಶರಾದ ಸುದ್ದಿ ಬಂದಿತ್ತಂತೆ.
ಐ ಯಾಮ್ ಸಾರಿ ಅಮ್ಮಾ..
ತಮ್ಮ ತಾಯಿ ಹೇಗೆಲ್ಲಾ ಮಾನಸಿಕ ಯಾತನೆ ಪಡುತ್ತಿದ್ದರು, ನೊಂದಿದ್ದರು ಎಂಬುದನ್ನು ಅರಿಯದೇ ಆಗ ನಾನು ಅವರಿಗೆ ಹೆಚ್ಚು ಸಮಯ ಕೊಡುತ್ತಿರಲಿಲ್ಲ. ಆದ್ರೆ ಈಗ ಅವ್ರು ನನ್ನ ಜೊತೆಯಿಲ್ಲ. ಆದ್ರೆ ಅವ್ರ ಆಶೀರ್ವಾದ ನನ್ನ ಬಳಿ ಕೊನೆವರೆಗೂ ಇದ್ದೇ ಇರುತ್ತೆ. ಅವ್ರು ಇದ್ದಾಗ ಅವ್ರ ಬೆಲೆ ಗೊತ್ತಾಗಲಿಲ್ಲ, ಅವ್ರೀಗ ಇಲ್ಲ… ಐ ಯಾಮ್ ಸಾರಿ ಅಮ್ಮಾ… ಎಂದು ಬಿಕ್ಕಳಿಸಿದ್ರು.
ಎಲ್ಲ ಸ್ಪರ್ಧಿಗಳೂ ಕಣ್ಣೀರು, ಕಣ್ಣೀರು…
ಕಿಶನ್ರ ಡ್ಯಾನ್ಸ್, ಹಾಗೂ ನೋವಿನ ಮಾತುಗಳನ್ನು ಕೇಳಿ ಬಿಗ್ಬಾಸ್ ಮನೆಯಲ್ಲಿದ್ದ ಅಷ್ಟೂ ಸ್ಪರ್ಧಿಗಳೂ ಕಣ್ಣೀರಾದ್ರು. ಕಿಶನ್ ಪರ್ಫಾಮೆನ್ಸ್ ಪ್ರಾರಂಭದಿಂದ ಮಾತು ಮುಗಿಸಿದ ಕ್ಷಣದವರೆಗೂ ಆ ಹತ್ತು ನಿಮಿಷಗಳ ಕಾಲ ಎಲ್ಲರ ಕಣ್ಣಂಚಲ್ಲೂ ನೀರು.. ಬಿಗ್ಬಾಸ್ ಮನೆಯ ಲಕ್ಕಿ ಹುಡುಗ ಎನಿಸಿಕೊಂಡಿದ್ದ ಕಿಶನ್, ಏನೂ ಕಷ್ಟಗಳಿಲ್ಲದೇ ಬೆಳೆದು ಬಂದ ಹುಡುಗ ಅಂತ ಅಂದುಕೊಂಡಿದ್ದವರಿಗೆ ಕಿಶನ್ರ ಮಾತುಗಳನ್ನು ಕೇಳಿ ಗದ್ಗದಿತರಾಗಿದ್ದರು. ಅಂದೇ ಕಿಶನ್ ಬಿಗ್ಬಾಸ್ ಮನೆಯ ಸ್ಪರ್ಧಿಗಳು ಮಾತ್ರವಲ್ಲ ಪ್ರೇಕ್ಷಕರ ಹೃದಯವನ್ನೂ ಗೆದ್ದರು…