ಮಸ್ಕಿಯಲ್ಲಿ ಮತದಾರರಿಗೆ ಬಿಜೆಪಿ ಹಣ ಹಂಚಿಕೆ ಆರೋಪ; ಕಾಂಗ್ರೆಸ್‌ ಧರಣಿ

ಏಪ್ರಿಲ್‌ 17ರಂದು ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಮಧ್ಯೆ, ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿರುವ ತುರ್ವಿಹಾಳದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಜನರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಗಳು ಕೇಳಿಬರುತ್ತಿದೆ. ಈ ಕುರಿತು ತುರ್ವಿಹಾಳ ಪೊಲೀಸ್‌ ಠಾಣೆಯ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಪರ ಪ್ರಚಾರಕ್ಕೆ ಬಂದಿರುವ ಹಾಸನ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದ್ದು, ಇವರಲ್ಲಿಹಾಸನ ಜಿಲ್ಲೆಯ ಒಬ್ಬ ಮಹಿಳೆ, ಇಬ್ಬರು ಯುವಕರು ಮತ್ತು ಕುರುಕುಂದಾ ಗ್ರಾಮದ ಒಬ್ಬ ವ್ಯಕ್ತಿ ತುರ್ವಿಹಾಳದಲ್ಲಿ ಮತದಾರರನ್ನು ಜಾತಿ ಆಧಾರದಲ್ಲಿ ಎಣೆಕೆ ಮಾಡಿ, ಹಣ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಬಿಜೆಪಿಗರು ತುರ್ವಿಹಾಳದ ವಾರ್ಡ್‌ ನಂ. 1, 2 ಮತ್ತು 3ರಲ್ಲಿ ಹಣ ಹಂಚಿಕೆ ಮಾಡಿದ್ದಾರೆ. ಅವರನ್ನು ಪೊಲೀಸ್‌ ಠಾಣೆಗೆ ಕರೆತಂದು, ಹಣ ಹಂಚಿಎಕ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್‌ ಮುಖಂಡರು ಒತ್ತಾಯಿಸಿದ್ದಾರೆ.

ಆದರೆ, ಪಿಎಸ್‌ಐ ಯರಿಯಪ್ಪ ಅಂಗಡಿ ಅವರು ಯಾರು ಬೇಕಾದರೂ ಸರ್ವೆ ಮಾಡಬಹುದು. ಒಂದು ವೇಳೆ ಹಣ ಹಂಚಿಕೆ ಮಾಡಿದ್ದರು, ಆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿ ಎಂದು ಹೇಳಿದರು. ಪಿಎಸ್‌ಐ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಎಂದು ಕಾಂಗ್ರೆಸಿಗರು ಆರೋಪಿಸಿದ್ದು, ಪೊಲೀಸ್‌ ಠಾಣೆ ಎದುರು ಧರಣಿ ನಡೆಸಿದ್ದಾರೆ.

ಇದನ್ನೂ ಓದಿ: ನನಗೆ BJP ಲೆಕ್ಕಕ್ಕಿಲ್ಲ; ನನ್ನ ಸ್ಪರ್ಧೆ ಕಾಂಗ್ರೆಸ್‌ನೊಂದಿಗೆ ಮಾತ್ರ: ಮಲ್ಲಿಕಾರ್ಜುನ ಖೂಬಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights