ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ : ಆಸ್ಪತ್ರೆ ನೆಲಸಮ : 3 ಜನ ಸಾವು!

ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ್ದು ಆಸ್ಪತ್ರೆ ನೆಲಸಮವಾದ ದಾರುಣ ಘಟನೆ ನಡೆದಿದೆ.

ಭೂಕಂಪದ ತೀವ್ರತೆಗೆ ಚಪ್ಪಟೆಯಾದ ಆಸ್ಪತ್ರೆಯ ಅವಶೇಷಗಳ ಕೆಳಗೆ ಒಂದು ಡಜನ್‌ಗೂ ಹೆಚ್ಚು ರೋಗಿಗಳು ಮತ್ತು ಸಿಬ್ಬಂದಿ ಸಿಕ್ಕಿಬಿದ್ದಿದ್ದು, ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ರಕ್ಷಣಾ ಸಿಬ್ಬಂದಿ ಆಗಮಿಸಿದ್ದು, ರೋಗಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಈ ವರೆಗೆ ಆಸ್ಪತ್ರೆಯ ಅವಶೇಷಗಳಡಿ ಎಷ್ಟು ಜನ ಸಿಲುಕಿದ್ದಾರೆ ಎಂಬುದಕ್ಕೆ ನಿಖರ ಮಾಹಿತಿ ಲಭ್ಯವಾಗಿಲ್ಲ.

“ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದ ರೋಗಿಗಳು ಮತ್ತು ಆಸ್ಪತ್ರೆ ನೌಕರರಿದ್ದಾರೆ ಮತ್ತು ನಾವು ಈಗ ಅವರನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ. ಆಸ್ಪತ್ರೆ ಸಮತಟ್ಟಾದ್ದರಿಂದ ಭೂ ಕಂಪನದಿಂದ ಕುಸಿದಿದೆ” ಎಂದು ಮಾಮುಜು ನಗರದ ಪಾರುಗಾಣಿಕಾ ಸಂಸ್ಥೆಯ ಅರಿಯಾಂಟೊ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights