ಬೆಂಗಳೂರಿಂದ ಸುಮಾರು 600 ಬಸ್ಸುಗಳಲ್ಲಿ 15 ಸಾವಿರ ಕಾರ್ಮಿಕರು ತವರಿಗೆ ವಾಪಸ್..

ಲಾಕ್‌ಡೌನ್ ವಿಸ್ತರಣೆಯ ನಡುವೆಯೇ ಭಾರೀ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬೆಂಗಳುರುನ್ನು ತೊರೆದಿದ್ದಾರೆ.

ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 15 ಸಾವಿರ ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳುರಿನಲ್ಲಿ ಕಟ್ಟಡ ನಿರ್ಮಾಣವೂ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಈಗ ಕೆಲಸವಿಲ್ಲದೇ ಪರದಾಡುತ್ತಿದ್ದು ಹೊತ್ತಿಗು ಉಟವಿಲ್ಲದೆ ಊರುಗಳಿಗೆ ಹಿಂತಿರುಗುತ್ತಿದ್ದಾರೆ.

ರೈಲು ಸಂಪರ್ಕ ಇರದೇ ಹೋದ ಹಿನ್ನೆಲೆಯಲ್ಲಿ ಕಾರ್ಮಿಕರು ಊರಿನತ್ತ ಮುಖ ಮಾಡಲು ರಸ್ತೆ ಸಾರಿಗೆ ಬಸ್ಸುಗಳನ್ನೇ ನೆಚ್ಚಿಕೊಂಡಿದ್ದಾರೆ. ಕಳೆದ ಕೆಳದಿನಗಳಲ್ಲಿ ಏನಿಲ್ಲವೆಂದರೂ 600 ಬಸ್ಸುಗಳು ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ಕಾರ್ಮಿಕರನ್ನು ತಲುಪಿಸುವ ಕಾರ್‍ಯ ಮಾಡಿದೆ.

ಈ ಮಧ್ಯೆ ಕೇಂದ್ರ ಸರಕಾರವು ಅಗತ್ಯ ಬಿದ್ದರೇ ಕಾರ್ಮಿಕರ ವಾಪಸಾತಿಗೆ ರೈಲುಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಬೆಂಗಳೂರು ತೊರೆಯುವ ಸಾಧ್ಯತೆಗಳಿವೆ.

ಈ ಮಧ್ಯೆ ಮುಂದಿನ ವಾರದಿಂದ ಕೈಗಾರಿಕೆಗಳ್ನು ತೆರೆಯಲು ನಿರ್ಧರಿಸಲಾಗಿದ್ದು ಕಾರ್ಮಿಕರು ತಮ್ಮ ಕೆಲಸದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯ ಮತ್ತು ರಾಜಧಾನಿ ಬಿಟ್ಟು ತೆರಳುತ್ತಿರುವ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿರುವ ಅವರು ಯಾವುದೇ ಆತಂಕಕ್ಕೆ ಒಳಗಾಗಿ ಊರು ಬಿಟ್ಟು ಹೋಗದಿರಿ ಎಂದು ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights