ವೈದ್ಯರ ಬಳಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಮಂಗ : ಅಚ್ಚರಿಗೊಂಡ ರೋಗಿಗಳು…!

ಆಸ್ಪತ್ರೆಗೆ ಚಿಕಿತ್ಸೆಗಾಗಿ ಮಂಗವೊಂದು ಬಂದು ಅಚ್ಚರಿ ಮೂಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ನಡಿದಿದೆ..

ಆಸ್ಪತ್ರೆಗೆ ರೋಗಿಗಳು ಬರೋದು ಮಾಮೂಲು ಆದ್ರೆ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಮಂಗವೊಂದು ವೈದ್ಯರ ಬಳಿ ಚಿಕಿತ್ಸೆಗಾಗಿ ಬಂದು ಅಚ್ಚರಿ ಮೂಡಿಸಿತು ಅಂದ್ರೆ ನಂಬಲಾಗದೆ ಇದ್ರು ಸತ್ಯವಾಗಿದೆ, ಇದು ಕಾಕತಾಳಿಯವಾದ್ರು ಮಂಗನ ವರ್ತನೆ ಮಾತ್ರ ಹಾಗಿತ್ತು. ಮಂಗವೊಂದು ಕುದ್ದು ಆಸ್ಪತ್ರೆಯ ನೋಂದಣಿ ಮೇಜಿನ ಬಳಿ ನೊಂದಣಿ ಮಾಡಿಸಲು ನಿಂತಿದ್ದ ಜನರ ಮುಂದೆ ಬಂದು ಅದೂ ಕೂಡ ನಿಂತಿತು.

ಅಚ್ಚರಿಯಾಗಿ ಕಂಪ್ಯೂಟರ್ ನೋಡುತ್ತಿತ್ತು, ನಂತರ ಸೀದಾ ವೈದ್ಯರ ಕೊಠಡಿ ಬಳಿ ಹೋಗಿ ಜನರು ಕಾಯುವಂತೆ ಅದೂ ಕೂಡ ಕಾಯತಲಿತ್ತು.ಇದನ್ನು ನೋಡಿದ ಜನರು ಸ್ವಲ್ಪ ಕುಷಿ ಪಟ್ರೆ ಇನ್ನು ಕೆಲವರು ಭಯ ಪಟ್ಟರು ನಂತರ ಮಂಗವನ್ನು ಅಲ್ಲಿಂದ ಓಡಿಸಲಾಯಿತು. ಆದ್ರೆ ಕೆಲವು ಸಮಯ ಇದರ ವರ್ತನೆ ಆಸ್ಪತ್ರೆಗೆ ಬಂದ ಜನರಲ್ಲಿ ಖುಷಿ ಕೊಟ್ಟಿತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights