ಬೈಕ್ ಸವಾರರ ಅರ್ಧ ಹೆಲ್ಮೆಟ್ ಹೊಡೆದು ಹಾಕಿದ ಟ್ರಾಫಿಕ್ ಸಬ್ಇನ್ಸ್ಪೆಕ್ಟರ್…!

ಅರ್ಧ ಹೆಲ್ಮೆಟ್ ಹಾಕುವ ಬೈಕ್ ಸವಾರರ ಹೆಲ್ಮೆಟ್ ನ್ನ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಕಿತ್ತು ಹೊಡೆದು ಹಾಕಿದ ಘಟನೆ ಹಾಸನದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.

ಅರ್ಧ ಹೆಲ್ಮೆಟ್ ಹಾಕಿದ ಬೈಕ್ ಸವಾರರನ್ನ ತಡೆದು ಹೆಲ್ಮೆಟ್ ಕಿತ್ತುಕೊಂಡು ಹೊಡೆದು ಹಾಕಿದ ಸಬ್ ಇನ್ಸ್ ಪೆಕ್ಟರ್ ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಂಡ ವಿಧಿಸುವುದನ್ನ ಬಿಟ್ಟು ಹೆಲ್ಮೆಟ್ ಹೊಡೆದು ಹಾಕಿದ್ದಕ್ಕೆ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ವಿರುದ್ದ ಸಾರ್ವಜನಿಕರ ಆಕ್ರೋಶ ಹೊರಹಾಕಿದ್ದಾರೆ.

ನೂರಾರು ಬೈಕ್ ಸವಾರರಿಂದ ಹೆಲ್ಮೆಟ್ ಕಸಿದು ನೂರಾರು ಹೆಲ್ಮೆಟ್ ನ್ನ ಹೊಡೆದು ಹಾಕಿರುವ ಹಾಸನ ನಗರ ಸಂಚಾರಿ ಪೊಲೀಸರ ಈ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಖಂಡನೆ ವ್ಯಕ್ತವಾಗಿದೆ.

ಅಕ್ರಮವಾಗಿ ಹೆಲ್ಮೆಟ್ ಕಿತ್ತು ಹೊಡೆದು ಹಾಕಿದ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ವಿರುದ್ದ ಹಲವು ಆರೋಪಗಳು ಕೇಳಿಬಂದಿದ್ದವು. ಸದ್ಯ ಈ‌ ದುರ್ವರ್ತನೆ ವಿರುದ್ದ ಸಾರ್ವಜನಿಕ ವಲಯದಲ್ಲಿ ಬಾರೀ ಆಕ್ಷೇಪ ವ್ಯಕ್ತವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights