ಭಾರತರತ್ನ ಪ್ರಶಸ್ತಿ ಕೋಡೋದ್ರಲ್ಲಿ ಬಿಜೆಪಿ ರಾಜಕೀಯ – ಕೃಷ್ಣಬೈರೇಗೌಡ ವಾಗ್ದಾಳಿ

ಭಾರತರತ್ನ ಪ್ರಶಸ್ತಿ ಕೋಡೋದ್ರಲ್ಲಿ ಬಿಜೆಪಿ ರಾಜಕೀಯ ಬೇಳೆಯನ್ನ ಬೇಯಿಸಿಕೊಳ್ತಿದೆಯೆಂದು ಮಾಜಿ ಸಚಿವ ಕೃಷ್ಣಬೈರೇಗೌಡ ಕೊಲಾರದಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ, ಜಿಲ್ಲಾ ಉಸ್ತುವಾರಿ ಸ್ತಾನದಿಂದ ದೂರವಾದ ನಂತರ ಕೋಲಾರಕ್ಕೆ ಆಗಮಿಸಿದ ಕೃಷ್ಣಬೈರೇಗೌಡ, ಸರಸಾಪುರ ಪಿಯುಸಿ ಕಾಲೇಜಿನ ಆವರಣದಲ್ಲಿ ನೂತನ ಲೈಬ್ರಿರಿ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ರು.

ಇದೇ ವೇಳೆ ಗ್ರಾಮದ ಹಿರಿಯ ಮುಖಂಢರು ಹಾಜರಿದ್ದರು, ಕಾರ್ಯಕ್ರಮದ ನಂತರ ಮಾತನಾಡಿದ ಕೃಷ್ಣಬೈರೇಗೌಡ ಬಿಜೆಪಿ ವಿರುದ್ದ ಕಿಡಿಕಾರಿದ್ರು, ಬ್ರಿಟೀಷರ ವಿರುದ್ದ ಹೋರಾಡಲಾಗದೆ ಸಾವರ್ಕರ್ ಅಡ್ಜೆಸ್ಟ್‍ಮೆಂಟ್ ಮಾಡಿಕೊಂಡರು, ಆದ್ರೆ ಭಗತ್‍ಸಿಂಗ್ ಬ್ರಿಟೀಷರ ವಿರುದ್ದ ಸಮರ್ಥವಾಗಿ ಹೋರಾಟಿ ಪ್ರಾಣ ತ್ಯಾಗ ಮಾಡಿದವ್ರು ಇಂತವ್ರಿಗೂ ಬಿಜೆಪಿ ಭಾರತರತ್ನ ಕೊಟ್ಟಿಲ್ಲ. ಇನ್ನು ರಾಜ್ಯದ ಹೆಮ್ಮೆ ಶ್ರೀ ಶಿವಕುಮಾರಸ್ವಾಮಿಗಳಿಗೂ ಭಾರತ ರತ್ನ ಕೊಟ್ಟಿಲ್ಲ ಕೇವಲ ರಾಜಕೀಯವಾಗಿ ಪ್ರಶಸ್ತಿಯನ್ನ ಬಳಸಿಕೊಂಡಿದೆ ಎಂದು ಕಿಡಿಕಾರಿದ್ರು.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಬಯಕೆ ಮಾತಿಗೆ ಪ್ರತಿಕ್ರಿಯೆ ನೀಡಿದ ಕೃಷ್ಣಬೈರೇಗೌಢ, ಸಿಎಂ ಬಿಎಸ್‍ವೈ, ಎಚ್‍ಡಿಕೆ ಸರ್ಕಾರಕ್ಕಿಂತಲೂ ಸಿದ್ದರಾಮಯ್ಯ ರಾಜ್ಯದಲ್ಲಿ ಉತ್ತಮ ಆಳ್ವಿಕೆ ನೀಡಿದವ್ರು, ಜನರ ಆದೇಶದಿಂದಲೇ ಎಂದು ಹೇಳಿದ್ದಾರೆ ಅದು ಮುಂದೆ ಕಾದುನೋಡಬೇಕಿದೆ ಎಂದ್ರು.

ಇನ್ನು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿ ಎಂದು ಬಿಜೆಪಿಯ ಒಂದು ಗುಂಪು ಕಾಯ್ತಿದೆ, ಸಿಎಂ ಯಡಿಯೂರಪ್ಪ ಕೆಲಸ ಮಾಡದಂತೆ ಇರೋ ಸ್ವಾಂತಂತ್ರ್ಯವೂ ಕೆಲವರು ಕಸಿದುಕೊಂಡಿದ್ದಾರೆ, ಅನರ್ಹ ಶಾಸಕರ ಸಹವಾಸವೇ ಬೇಡ ಎಂದು ನಾಯಕರು ಹೇಳಿದ್ದಾರೆ, ಕೆಟ್ಟ ಮಾರ್ಗದಲ್ಲಿ ಬಿಎಸ್‍ವೈ ಸಿಎಂ ಆದರು ನಾವು ಸರ್ಕಾರಕ್ಕೆ ಸಮಸ್ಯೆ ಕೊಟ್ಟಿಲ್ಲ, ಮುಂದೆ ಸರ್ಕಾರ ಇರುತ್ತ ಇಲ್ವೊ ಎಂದು ಹೇಳೋಕಾಗಲ್ಲ ಎಂದು ತಿಳಿಸಿದ್ರು,

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights