ಮತ್ತೊಂದು ಅತ್ಯಾಚಾರ ಪ್ರಕರಣ ಬಯಲು : ಬಾಲಕಿ ಮೇಲೆ ಎರಗಿದ ನಾಲ್ಕು ಕಾಮುಕರು

ಅತ್ಯಾಚಾರದ ವಿರುದ್ಧ ಅದೇಷ್ಟೇ ಹೋರಾಟಗಳಾಗಿ ಶಿಕ್ಷೆಗಳಾದರೂ ಕೂಡ ಕಾಮುಕರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅದಕ್ಕೆ ಸಾಕ್ಷಿ ಕರ್ನಲ್ ನಲ್ಲಿ ಬಾಲಕಿ ಮೇಲೆ ನಾಲ್ಕು ಕಾಮುಕರು ತಮ್ಮ ಕಾಮಕೃತ್ಯವನ್ನ ಎಸಗಿದ್ದಾರೆ.

ಹೌದು…  ದೇಶದಲ್ಲಿ ಪ್ರತಿದಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆ, ಕಠಿಣ ಶಿಕ್ಷೆ, ಪ್ರಬಲ ಕಾನೂನು ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆಯೂ ನಡೆಯುತ್ತಿದೆ. ಈ ಮಧ್ಯೆ 12 ವರ್ಷದ ಬಾಲಕಿ ಮೇಲೆ ನಾಲ್ವರು ಆರೋಪಿಗಳು ಅತ್ಯಾಚಾರವೆಸಗಿದ ಘಟನೆ ಹರಿಯಾಣದ ಕರ್ನಲ್​ ನಗರದಲ್ಲಿ ನಡೆದಿದೆ. ಅತ್ಯಾಚಾರದ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಅಪ್ರಾಪ್ತೆ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಮಾತನಾಡಿದ ಕರ್ನಲ್ ಪೊಲೀಸರು, ಆರೋಪಿಗಳನ್ನು ಬಂಧಿಸಲಾಗಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ಇನ್ನಷ್ಟೇ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights