ಮದ್ದೂರು ಪಟ್ಟಣದಲ್ಲಿ ಪದೇ ಪದೇ ಕೇಳಿ ಬರ್ತಿದೆ ಸ್ಫೋಟದ ಸದ್ದು – ಜನರಲ್ಲಿ‌ ಆತಂಕ..

ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಪದೇ ಪದೇ ಕೇಳಿ ಬರ್ತಿರೋ ನಿಗೂಢ ಶಬ್ದಕ್ಕೆ ಅಲ್ಲಿನ ಜನ್ರು ಹೈರಾಣಾಗಿದ್ದಾರೆ. ಭಾರೀ ಸ್ಫೋಟದ ಶಬ್ದಕ್ಕೆ ಭೂಮಿ ಕಂಪಿಸಿದ ಅನು ಭವವಾಗ್ತಿದ್ದು ಜನ್ರನ್ನ ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಹೌದು! ಸಕ್ಕರೆನಾಡು ಮಂಡ್ಯದ ಮದ್ದೂರಿನನಲ್ಲಿ ಪದೇ ಪದೇ ಭಾರೀ ಸ್ಫೋಟದ ಸದ್ದು ಕೇಳಿ‌ ಬರ್ತಿದೆ. ಆ ಸ್ಫೋಟದ ಸದ್ದಿಗೆ ಕೆಲಕಾಲ ಭೂಮಿ ಕಂಪಿಸಿದ ಅನುಭವವಾಗ್ತಿದೆ. ಅಲ್ದೆ ವಸ್ತುಗಳು ಕೂಡ ಕೂಡ ಅಲುಗಾಡ್ತಿದ್ದು ಜನರನ್ನು ಆಂತಕ್ಕೆ ತಳ್ತಿದೆ. ಇಷ್ಟಾದ್ರು ಕೂಡ ಈ ಸ್ಫೋಟದ ಸದ್ದು ಎಲ್ಲಿಂದ ಬರ್ತಿದೆ ಅನ್ನೋದು ನಿಗೂಢವಾಗಿದ್ದು ಮದ್ದೂರಿನ ಜನ್ರನ್ನ ಮತ್ತಷ್ಟು ಆತಂಕಕ್ಕೆ ತಳ್ಳಿದೆ.

ಇನ್ನು ಈ ರೀತಿಯ ಭಾರೀ ಶಬ್ದ ಈ ಹಿಂದೇಯೂ ಕೂಡ ನಾಲ್ಕೈದು ಭಾರೀ ಕೇಳಿ ಬಂದಿದ್ದು, ಜನ್ರನ್ನು ಪದೇ ಪದೇ ಆತಂಕಕ್ಕೀಡು ಮಾಡ್ತಿದೆ. ಈ ತಾಲೂಕಿನಲ್ಲಿ‌ ಸುತ್ತಲು ಅಕ್ರಮ ಕಲ್ಲು ಕ್ವಾರೆ ನಡೆಯುತ್ತಿದೆ. ಮೈ-ಬೆಂ ಹೆದ್ದಾರಿ ಹಾದು ಹೋಗಿದ್ದು ಜಿಲ್ಲಾಡಳಿತ ಮಾತ್ರ ಹೆದ್ದಾರಿಯಲ್ಲಿ ಭಾರೀ ವಾಹನಗಳ ಟೈರು ಬ್ಲಾಸ್ಟ್ ಆಗಿ ಈ ಈ ರೀತಿ ಭಾರೀ ಶಬ್ಧ ಕೇಳಿ ಬರ್ತಿದೆ ಅಂತಾ ಸಬೂಬು ಹೇಳಿ ಕೈ ತೊಳೆದು ಕೊಳ್ತಿದೆ. ಆದ್ರೆ ಹೆದ್ದಾರಿಯಲ್ಲಿ ಯಾವುದೇ ವಾಹನದ ಟೈರ್ ಬ್ಲಾಸ್ಟ್ ಆದ ಮಾಹಿತಿ ಇರೋದಿಲ್ಲ.ಆದ್ರೆ ಪದೇ ಪದೇ ಈ ರೀತಿ‌ ಶಬ್ದ ಇಲ್ಲಿನ ಜನ್ರನ್ನು‌ ಆತಂಕಕ್ಕೆ ದೂಡಿದ್ದು ನಿಖಿರ ಕಾರಣ ಕಂಡು ಹಿಡಿಯುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಒಟ್ಟಾರೆ ಮಂಡ್ಯದ ಮದ್ದೂರು ಪಟ್ಟಣದಲ್ಲಿ ಪದೇ ಪದೇ ಕೇಳಿ ಬರ್ತಿರೋ ಈ ನಿಗೂಢ ಸ್ಫೋಟದ ಶಬ್ದ ಇಲ್ಲಿನ‌ ನಾಗರೀಕರ ಆತಂಕಕ್ಕೆ ಕಾರಣವಾಗಿದ್ದು ಭೂಕಂಪನದ ಅನುಭವಕ್ಕೆ ಹೈರಾಣಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights