ಮನೆಗಳ್ಳತನ ಮಾಡಿದ್ದ ನಾಲ್ವರು ಕಳ್ಳರನ್ನು ಬಂಧಿಸಿದ ಪೊಲೀಸರು….
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸರ ಕಾರ್ಯಾಚರಣೆಯಿಂದ ಮನೆಗಳ್ಳತನ ಮಾಡಿದ್ದ ನಾಲ್ವರು ಮನೆಗಳ್ಳರನ್ನು ಬಂಧಿಸಲಾಗಿದೆ.
ಬಂಧಿತ ಮನೆಗಳ್ಳರಿಂದ ಕಳ್ಳತನ ಮಾಡಿದ್ದ ೩.೨೦ ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರ್ ಜಪ್ತಿ ಮಾಡಲಾಗಿದೆ. ರಂಜಿತ್(೨೬),ಪ್ರಜ್ವಲ್(೩೦), ವಾಸು(೨೬), ಕಾರ್ತಿಕ್(೨೨) ಬಂಧಿತ ಮನೆಗಳ್ಳರು.
ಸೆ-೦೯ ರಂದು ಶ್ರೀರಂಗಪಟ್ಟಣ ತಾಲೂಕಿನ ಬಿದರಹಳ್ಳಿ ಹುಂಡಿ ಗ್ರಾಮದಲ್ಲಿ ನಡೆದಿದ್ದ ಮನೆಗಳ್ಳತನ ಸಂಬಂಧಪಟ್ಟಂತೆ ಮನೆಯ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಅರೆಕೆರೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಪ್ರಕರಣ ಭೇಧಿಸಿದ ಅರೆಕೆರೆ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.