ಮೋದಿಯನ್ನು ಫಾಲೋ ಮಾಡುವುದನ್ನು ನಿಲ್ಲಿಸಿದ ಯುಎಸ್‌ ವೈಟ್‌ಹೌಸ್‌ ಖಾತೆ; ಕಾರಣವೇನು?

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಕಚೇರಿ, ಅಮೆರಿಕದ ಭಾರತೀಯ ರಾಯಭಾರಿ ಕಚೇರಿ, ಭಾರತದ ಯುಎಸ್ ರಾಯಭಾರ ಕಚೇರಿ ಮತ್ತು ಭಾರತದ ಯುಎಸ್ ರಾಯಭಾರಿ ಅವರ ಟ್ವಿಟ್ಟರ್ ಖಾತೆಗಳನ್ನು ಅನ್‌ಫಾಲೋ ಮಾಡಿರುವ ಅಮೆರಿಕಾದ ವೈಟ್‌ಹೌಸ್‌ ಟ್ವಿಟ್ಟರ್ ಹ್ಯಾಂಡಲ್ ಏಕೆ ಫಾಲೋ ಮಾಡುತ್ತಿಲ್ಲ ಎಂಬುದಕ್ಕೆ ಕಾರಣಗಳನ್ನು ವಿವರಿಸಿದೆ.

 

ಕಾರ್ಯವಿಧಾನ ಮನವಿ ಪತ್ರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭೇಟಿಯನ್ನು ಬೆಂಬಲಿಸಿ ತಮ್ಮ ಸಂದೇಶಗಳನ್ನು ರಿಟ್ವೀಟ್ ಮಾಡಲು ಅಧ್ಯಕ್ಷೀಯ ಪ್ರವಾಸದ ಸಮಯದಲ್ಲಿ ಆತಿಥೇಯ ರಾಷ್ಟ್ರಗಳಿಗೆ ಅಮೆರಿಕಾ ವೈಟ್‌ಹೌಸ್‌ ಮನವಿ ಮಾಡಿತ್ತು.

ಫೆಬ್ರವರಿ ಕೊನೆಯ ವಾರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ವೈಟ್‌ಹೌಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ – @WhightHouse – ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಕಚೇರಿ, ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಭಾರತದ ಯುಎಸ್ ರಾಯಭಾರ ಕಚೇರಿ ಮತ್ತು ಭಾರತದ ಯುಎಸ್ ರಾಯಭಾರಿ ಕೆನ್ ಜಸ್ಟರ್ ಅವರ  ಖಾತೆಗಳನ್ನು ‘ಫಾಲೋ’ ಮಾಡಲು ಪ್ರಾರಂಭಿಸಿತ್ತು.

ಈ ವಾರದ ಆರಂಭದಲ್ಲಿ ವೈಟ್‌ಹೌಸ್‌ ಈ ಆರು ಟ್ವಿಟರ್ ಹ್ಯಾಂಡಲ್‌ಗಳನ್ನು ‘ಫಾಲೋ’ ಮಾಡುವುದನ್ನು ‘ಅನ್‌ಫಾಲೋ’ ಮಾಡಿದೆ.

 

ವೈಟ್‌ಹೌಸ್‌ನ ‘ಫಾಲೋ’ ಹೇಗೆ ಕಾರ್ಯನಿರ್ವಹಿಸುತ್ತದೆ

“ವೈಟ್‌ಹೌಸ್‌ನ ಟ್ವಿಟ್ಟರ್ ಖಾತೆಯು ಸಾಮಾನ್ಯವಾಗಿ ಯುಎಸ್ ಸರ್ಕಾರದ ಪ್ರಮುಖ ಟ್ವಿಟ್ಟರ್ ಖಾತೆಗಳನ್ನು ಮತ್ತು ಇತರ ಸೂಕ್ತವಾದ ಪ್ರಮುಖ ಖಾತೆಗಳನ್ನೂ ಫಾಲೋ ಮಾಡುತ್ತದೆ. ಉದಾಹರಣೆಗೆ, ಅಧ್ಯಕ್ಷೀಯ ಭೇಟಿಯ ಸಮಯದಲ್ಲಿ ಈ ಖಾತೆಯು ಸಾಮಾನ್ಯವಾಗಿ ಆತಿಥೇಯ ದೇಶದ ಅಧಿಕಾರಿಗಳು ತಮ್ಮ ಸಂದೇಶಗಳನ್ನು ಬೆಂಬಲಿಸಲು ಮತ್ತು ರಿಟ್ವೀಟ್ ಮಾಡಲು ಆತಿಥ್ಯ ವಹಿಸಿದ ರಾಷ್ಟ್ರದ ಪ್ರಮುಖ ಖಾತೆಗಳನ್ನು ಅಲ್ಪಾವಧಿಗೆ ಫಾಲೋ ಮಾಡುತ್ತದೆ.

ಹಾಗಾಗಿಯೇ ಫೆಬ್ರವರಿ ಕೊನೆಯ ವಾರದಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಅವರು ಭಾರತಕ್ಕೆ ಭೇಟಿ ನೀಡಿದ್ದರಿಂದಾಗಿ, ಭೇಟಿಗೆ ಸಂಬಂಧಿಸಿದಂತೆ ವೈಟ್‌ಹೌಸ್‌ ಪೋಸ್ಟ್‌ ಮಾಡುವ ಸಂದೇಶಗಳನ್ನು ಭಾರತೀಯ ಅಧಿಕಾರಿಗಳು ಮತ್ತು ಆಡಳಿತಾಂಗ ರೀಟ್ವೀಟ್‌ ಮಾಡಬೇಕೆಂದು ಈ ಪ್ರಮುಖ ಖಾತೆಗಳನ್ನು ಫಾಲೋ ಮಾಡಲು ಆರಂಭಿಸಿತ್ತು. ಭೇಟಿ ಮುಗಿದ ನಂತರದ ಕೆಲವು ದಿನಗಳ ಬಳಿಕ ಈ ಆರೂ ಖಾತೆಗಳನ್ನು ಫಾಲೋ ಮಾಡುವುದನ್ನು ವೈಟ್‌ಹೌಸ್‌ ನಿಲ್ಲಿಸಿದೆ.

 

ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

ರಾಷ್ಟ್ರಪತಿ ಕೋವಿಂದ್ ಮತ್ತು ಪ್ರಧಾನಿ ಮೋದಿಯವರ ಟ್ವಿಟ್ಟರ್ ಖಾತೆಗಳನ್ನು ವೈಟ್‌ಹೌಸ್‌ ‘ಫಾಲೋ ಮಾಡದಿರುವುದು’ ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆಗಳನ್ನು ಸೆಳೆದಿದೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಭಿವೃದ್ಧಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, “ನಮ್ಮ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯನ್ನು ವೈಟ್‌ಹೌಸ್‌ ಪಾಲೋ ಮಾಡದಿರುವ ಕಾರಣದಿಂದಾಗಿ ನಾನು ಬೇಸರಗೊಂಡಿದ್ದೇನೆ. ವಿದೇಶಾಂಗ ಸಚಿವಾಲಯವು ಗಮನಹರಿಸಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಬುಧವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಬುಧವಾರದ ವೇಳೆಗೆ ವೈಟ್‌ಹೌಸ್ ಖಾತೆಯು‌ 22 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿತ್ತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights