Corona effect : ಕಾಲೇಜುಗಳು ಪುನಾರಂಭ ಅಗಸ್ಟ್‌ನಲ್ಲಿ, ಹೊಸ ಬ್ಯಾಚ್ ಸೆಪ್ಟೆಂಬರಿನಲ್ಲಿ…

ಕೊರೋನಾ ವಿರುದ್ಧದ ಸಮರದಿಂದಾಗಿ ಜಾರಿಯಲ್ಲಿರುವ ಲಾಕ್‌ಡೌನಿನಿಂದಾಗಿ ಸ್ಥಗಿಗೊಂಡಿರುವ ಕಾಲೇಜುಗಳು ಆಗಸ್ಟ್ ತಿಂಗಳಲ್ಲಿ ಪುನರಂಭಗೊಳ್ಳುವ ಸಾಧ್ಯತೆಗಳಿವೆ. ಎಲ್ಲಾ ಅಂದುಕೊಂಡಂತೆ ನಡೆದರೆ ಆಗಸ್ಟ್ ತಿಂಗಳಿನಿಂದ ಕಾಲೇಜುಗಳು ಮತ್ತೆ ಆರಂಭವಾಗುವ ಸಾಧ್ಯತೆಗಳಿವೆ , ಇದು ಸೋಂಕು ಎಷ್ಟು ನಿಯಂತ್ರಣಕ್ಕೆ ಬಂದಿದೆ ಅನ್ನುಚುದರ ಮೇಲೆ ನೆರ್ಧಾರವಾಗಲಿದೆ ಎಂದು ವಿಶ್ವ ವಿದ್ಯಾಲಯ ಅನುದಾನ ಆಯೋಗವು ತಿಳಿಸಿದೆ..

ಎಲ್ಲ ಅಂದುಕೊಂಡಂತೆ ನಡೆದರೇ ಆಗಸ್ಟ್ 1ರಿಂದ ಹಾಲಿ ವಿದ್ಯಾರ್ಥಿಗಳಿಗೆ ಕಾಲೇಜು ತರಗತಿ ಆರೆಂಭವಾಗಲಿದೆ ಎಂದು ಆಯೋಗವು ಮಾಹಿತಿ ನೀಡಿದೆ.   ಇದೇ ವೇಳೆ ಹೊಸದಾಗಿ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳ ತರಗತಿಗಳು ಸೆಪ್ಟೆಂಬರ್‌ 1ರಿಂದ ಆರಂಭವಾಗುವ ಸಂಭವ ಇದೆ ಎಂದೂ ಆಯೋಗವು ತಿಳಿಸಡಿದೆ.

ಕಳೆದ ಮಾರ್ಚ್‌ ತಿಂಗಳಿಂದ ಶಾಲಾ ಕಾಲೇಜುಗಳು ಸ್ಥಗಿತಗೊಂಡಿದ್ದು, ಎಂದಿನಂತೆ ಜೂನ್ ಮೊದಲ ವಾರದಲ್ಲಿ ಆರಂಭವಾಗುವುದು ಅಸಾಧ್ಯ ಎನ್ನುವುದು ಖಚಿತವಾದಂತಾಗಿದೆ. ಲಾಕ್‌ಡೌನ್ ಸಂಪೂರ್ಣವಾಗಿ ಕೊನೆಗೊಳ್ಳುವ ತನಕ ಶಾಲಾ ಕಲೇಜುಗಳು ಮತ್ತೆ ಆರಂಭವಾಗುವುದು ಸಾಧ್ಯವಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಯಾವುದೇ ಆತುರದ ಕ್ರಮ ಕೈಗೊಳ್ಳದಿರಲು ಆಯೋಗ ನಿರ್ಧರಿಸಿದೆ.

ಮೂರನೇ ಬಾರಿಗೆ ಲಾಕ್‌ಡೌನ್ ವಿಸ್ಗತರಣೆ ಆಗುವುದ ಬಹುತೇಖ ಖಚಿತವಾಗಿದ್ದರೂ ಈ ಮಾಸಾಂತ್ಯದ ವೇಳೆಗೆ ನಿಯಂತ್ರಣಗಳು ದೂರವಾಗುವ ಆಶಾಭಾವವಿದೆ. ಇದಾದ ಬಳಿಕೆ ಸ್ಥಗಿಗೊಂಡಿರುವ ಪರೀಕ್ಷೆಗಳು ನಡೆಯಬೇಕಿದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿಯಲು ಸಮಯಾವಕಾಶ ಬೇಕಾದ ಹಿನ್ನೆಲೆಯಲ್ಲಿ ಆಯೋಗವು ಆಗಸ್ಟ್‌ ವೇಳೆ ಕಾಲೇಜು ತೆರೆಯುವ ಮಾತಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights