ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಮೇಲೆ ಕುಳಿತುಕೊಳ್ಳಲು ಮುಂದಾದ ಆನೆ…!
ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಮೇಲೆ ಕುಳಿತುಕೊಳ್ಳಲು ಮುಂದಾದ ಆನೆಯ ವಿಡಿಯೊ ಇದೀಗ ಭಾರಿ ವೈರಲ್ ಆಗಿದೆ.
ಹೌದು.. ಈ ಘಟನೆ ಥಾಯ್ಲಾಂಡ್ ನ ಖಾವೋ ಯಾಯ್ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ದೊಡ್ಡ ಆನೆಯೊಂದು ಕಾರಿನ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರೊಬ್ಬರಿಗೂ ಗಂಭೀರ ಗಾಯಗಳಾಗಿಲ್ಲ. ಆದರೆ ಕಾಋಉ ನಜ್ಜುಗುಜ್ಜಾಗಿದೆ.
ಈ ವಿಡಿಯೊ ಇದೀಗ ಭಾರಿ ವೈರಲ್ ಆಗಿದೆ. ರಸ್ತೆ ದಾಟುವಾಗ ಕಾರು ಅಡ್ಡ ಬಂದಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಇಲಾಖೆ ಅಧಿಕೃತ ಪೇಜ್ ನಲ್ಲಿ ಹಾಕಲಾಗಿದ್ದು ಇದೀಗ ಭಾರೀ ವೈರಲ್ ಆಗಿದೆ.