ರಾಜ್ಯ ಮಾಹಿತಿ ಹಕ್ಕು ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ದೂರು…!

ಮಾಹಿತಿ ಹಕ್ಕು ಕಾಯ್ದೆಯಿಂದ ದೇಶದಲ್ಲಿ ನಡೆದ ಅನೇಕ ಭ್ರಷ್ಟಚಾರ ಬಯಲಾಗಿವೆ. ಸದ್ಯ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಪಿ. ಜಿ ವಿಜಯಕುಮಾರ್ ವಿರುದ್ಧವೇ ಸದ್ಯ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. ಆಯುಕ್ತರು ನ್ಯಾಯಾಂಗ ಘತನೆಗೆ ಅಗೌರವ ತಂತಿದ್ದಾರೆ. ತಕ್ಷಣ ಮಾಹಿತಿ ಆಯೋಗದ ಆಯುಕ್ತರ ಸ್ಥಾನದಿಂದ ವಜಾ ಮಾಡಬೇಕು ಎಂದು ದೂರು ದಾಖಲಾಗಿಸಿದ್ದಾರೆ.

ಇತ್ತೀಚಿಗೆ ಬೆಳಗಾವಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ವಿವಿಧ ಇಲಾಖೆಗಳಲ್ಲಿ 16 ಅರ್ಜಿಗಳನ್ನು ಸಲಿಕೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಹಕ್ಕು ಆಯುಕ್ತ ಪಿ.ಜಿ ವಿಜಯಕುಮಾರ್ ಗಡಾದಗೆ ಪತ್ರ ಮೂಲಕ ಉತ್ತರ ನೀಡಿದ್ದು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಓರ್ವ ವ್ಯಕ್ತಿ ವರ್ಷಕ್ಕೂ ಮೂರು ಅರ್ಜಿ ಮಾತ್ರ ಸಲ್ಲಿಸಬಹುದು ಎಂದು ಹೇಳಿದ್ದರು. ಅಷ್ಟೇ ಅಲ್ಲ ನೀವು ಮೊದಲು ಸಲ್ಲಿಸಿದ ಮೂರು ಅರ್ಜಿಗಳಿಗೆ ಮಾತ್ರ ಉತ್ತರ ನೀಡುತ್ತೇವೆ ಎಂದು ಲಿಖಿತ ರೂಪದಲ್ಲಿ ಆದೇಶ ನೀಡಿದ್ದರು.

ನಂತರ ಇದಕ್ಕೆ ಪ್ರತಿಯಾಗಿ ಮಾಹಿತಿ ಹುಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಪತ್ರ ಬರೆದು ಸುಪ್ರೀಂ ಕೋರ್ಟ್ ನೀಡಿರೋ ತೀರ್ಪಿನ ಪ್ರತಿ ನೀಡುವಂತೆ ಕೇಳಿದ್ರು. ರಾಜ್ಯ ಮಾಹಿತಿ ಆಯೋಗದಿಂದ ಇದಕ್ಕೆ ಉತ್ತರ ಬಂದಿದ್ದು, ಓರ್ವ ವ್ಯಕ್ತಿ ನಿರ್ಧಿಷ್ಟವಾಗಿ ಇಷ್ಟೇ ಪ್ರಶ್ನೆ ಕೇಳಬೇಕು ಎಂ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ ಎಂದು ಉತ್ತರ ಬಂದಿದೆ. ಸದ್ಯ ಭೀಮಪ್ಪ ಗಡಾದ್ ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಮಾಹಿತಿ ಆಯೋಗದ ಆಯುಕ್ತ ಪಿ. ಜಿ ವಿಜಯಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸದ್ಯ ಮಾಹಿತಿ ಹಕ್ಕು ಆಯುಕ್ತ ಪಿ. ಜಿ ವಿಜಯಕುಮಾರ್ ವಿರುದ್ದ ರಾಜ್ಯಪಾಲರು, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ದೂರು ನೀಡಿದ್ದಾರೆ. ನ್ಯಾಯಾಂಗ ಘತನೆಗೆ ದಕ್ಕೆ ತಂದಿದ್ದಾರೆ ಅವರನ್ನು ಆಯುಕ್ತರ ಸ್ತಾನದಿಂದ ವಜಾ ಮಾಡಬೇಕು ಎಂದು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಲಕಕ್ಕೆ ಕಾರಣವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.