ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರಿಗೆ ಗೋಣಿಚೀಲ ಹಾಕಿದ ಪೊಲೀಸರು..!
ಲಾಕ್ ಡೌನ್… ಲಾಕ್ ಡೌನ್ ಇದೇ ಕಣ್ರೀ ಮನೆಯಲ್ಲಿ ಸುಮ್ನೆ ಕುಳಿತುಕೊಳ್ರಿ. ನಿಮಗಾಗಿ ನಾವು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ದುಡಿತಿದಿವಿ. ಮನೆಯಲ್ಲಿರೋಕೆ ನಿಮಗೇನ್ ಕಷ್ಟ ಅಂತ ಪೊಲೀಸರಿಗೂ ಹೇಳಿ ಹೇಳಿ ಸುಸ್ತಾಗೋಯ್ತು ಕಣ್ರಿ. ಎಷ್ಟು ಹೇಳಿದ್ರು ಜನ ಮಾತು ಕೇಳಿಲ್ಲ ಅಂದರೆ ಪೊಲೀಸರು ತಾನೆ ಏನ್ ಮಾಡ್ತಾರೆ ಹೇಳಿ. ಹೀಗಾಗಿ ಇವತ್ತು ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮನೆಬಿಟ್ಟು ಹೊರಬಂದವರಿಗೆ ಪಿಪಿಇ ಕಿಟ್ ಹಾಕಿದ್ದಾರೆ ಕೊಪ್ಪಳದ ಪೊಲೀಸರು.
ಹೌದು… ಅಲ್ಲಾ ರೀ ವೈದ್ಯರಿಗೇ ಪಿಪಿಇ ಕಿಟ್ ಸಿಗ್ತಾಯಿಲ್ಲ. ಇನ್ನೂ ಬೀದಿಯಲ್ಲಿ ಓಡಾಡೊರ್ಗೆ ಪಿಪಿಇ ಕಿಟ್ ಎಲ್ಲಿಂದ ಹಾಕಿದ್ರು ಪೊಲೀಸರು ಅಂತ ಪ್ರಶ್ನೆ ಮಾಡಬೇಡಿ. ಅಷ್ಟಕ್ಕೂ ಪೊಲೀಸರು ಹಾಕಿದ್ದು ಪಿಪಿಇ ಕಿಟ್ ನಲ್ಲಿರುವ ವಸ್ತ್ರವನ್ನಲ್ಲ. ಬದಲಿಗೆ ಗೋಣಿಚೀಲವನ್ನು. ಹೌದು… 24/7 ರೋಗಿಗಳ ರಕ್ಷಣೆಗೆ ಶೆಕೆಯಾದರು ತಡೆದುಕೊಂಡು, ನೀರು, ಊಟ ಹೊತ್ತೊತ್ತಿಗೆ ಮಾಡದೇ, ಮನೆಗೂ ಹೋಗದೇ ದುಡಿಯುವ ವೈದ್ಯರ ಸಂಕಷ್ಟ ಸಾಮಾನ್ಯ ಜನರಿಗೆ ಅರ್ಥ ಆಗಬೇಕು ಅನ್ನೋ ಕಾರಣಕ್ಕೆ ಕೊಪ್ಪಳ ಪೋಲಿಸರು ಗೋಣಿಚೀಲ ಹಾಕುವ ಮೂಲಕ ಅರಿವು ಮೂಡಿಸಿದ್ದಾರೆ.
ಲಾಖ್ ಡೌನ್ ನಿಯಮ ಉಲ್ಲಂಘನೆ ಮಾಡಿ ಬೀದಿಗಿಳಿದವರನ್ನು ಬಿಸಿಲಿನಲ್ಲಿ ನಿಲ್ಲಿಸಿ ಕೆಲಹೊತ್ತು ಗೋಣಿಚೀಲ ಹಾಕಿದ್ದಾರೆ. ಈ ದೃಶ್ಯಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದ್ದು, ಕೆಲವರು ಮೆಚ್ಚುಗೆ ಚ್ಯಕ್ತಪಡಿಸಿದ್ದಾರೆ.