ಲಾಕ್ ಡೌನ್ : ಮನೆಯಿಂದ ಹೊರಬಂದ ತಮ್ಮನನ್ನು ಕೊಲೆ ಮಾಡಿದ ಅಣ್ಣ..!

ವಿಶ್ವವೇ ಕೊರೊನಾ ವೈರಸ್ ಗೆ ನಲುಗಿ ಹೋಗಿದೆ. ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಎಲ್ಲೆಡೆ ಲಾಕ್ ಡೌನ್ ಮಾಡಲಾಗಿದ್ದರೂ ಜನ ಮನೆ ಬಿಟ್ಟು ಕೊರಬರುತ್ತಿದ್ದಾರೆ. ಮನೆ ಬಿಟ್ಟು ಹೊರಬಂದಿರುವ ಕಾರಣಕ್ಕೇ ಅಣ್ಣ ತಮ್ಮನನ್ನು ಕೊಲೆ ಮಾಡಿದ ಘಟನೆ ಎಲ್ಲರನ್ನ ಬೆಚ್ಚಿ ಬೀಳೀಸಿದೆ.

ಹೌದು… ಮುಂಬೈನ ಕಾಂದಿವಲಿ(ಪೂರ್ವ) ನಿವಾಸಿ ದುರ್ಗೇಶ್ ಥಾಕೂರ್ ತನ್ನ ತಮ್ಮ ರಾಜೇಶ್(21)  ನ್ನು ಕೊಚ್ಚಿ ಕೊಂದಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಅಂದ್ರೆ ವಿಶ್ವದೆಲ್ಲೆಡೆ ಲಾಕ್ ಡೌನ್ ಇದ್ದ ಕಾರಣ ಅಣ್ಣ ದುರ್ಗೇಶ್ ತಮ್ಮನಿಗೆ ಹೊರಹೋಗುವುದನ್ನ ತಡೆದಿದ್ದಾನೆ. ಆದರೆ ಮನೆಯಲ್ಲಿ ದಿನಸಿ ಖಾಲಿಯಾದ ಕಾರಣ ಅಂಗಡಿಗೆ ಹೊರಟಿದ್ದ ತಮ್ಮ ಹಾಗೂ ತಮ್ಮನ ಹೆಂಡತಿಯನ್ನು ಅಣ್ಣ ತಡೆದಿದ್ದಾನೆ. ಕೊರೊನಾ ಸೋಂಕು ಹರಡುವ ಭೀತಿ ಎಲ್ಲೆಡೆ ಇದೆ ಹೊರಹೋಗುವುದು ಬೇಡ ಅಣ್ಣ ತಮ್ಮನನ್ನು ತಡೆದಿದ್ದಾನೆ.

ಆದರೆ ತಮ್ಮ ರಾಜೇಶ್ ಹಾಗೂ ಪತ್ನಿ ಅಣ್ಣ ನ ಕಣ್ಣು ತಪ್ಪಿ ದಿನಸಿ ಅಂಗಡಿಗೆ ಹೋಗಿ ಮನೆಗೆ ವಾಪಸ್ಸಾಗಿದ್ದಾರೆ. ಈ ವೇಳೆ ಅಣ್ಣ ಹಾಗೂ ತಮ್ಮನ ನಡುವೆ ಜಗಳವಾಗಿದೆ. ಈ ವಾಗ್ವಾದ ತಾರಕಕ್ಕೇರಿದ್ದು ತಮ್ಮನ ಹೆಂಡತಿಗೆ ಹೊಡೆದ ದುರ್ಗೇಶ್ ನಂತರ ತಮ್ಮನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣಕ್ಕೆ ತಮ್ಮನನ್ನು ಆಸ್ಪತ್ರೆಗೆ ದಾಖಲಿಸಲಾದರೂ ಅಷ್ಟು ಹೊತ್ತಿಗಾಗಲೇ ತಮ್ಮನ ಪ್ರಾಣ ಪಕ್ಷ ಹಾರಿ ಹೋಗಿತ್ತು.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ದುರ್ಗೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Spread the love

Leave a Reply

Your email address will not be published. Required fields are marked *