ವಿಶ್ವದ ದೊಡ್ಡಣ್ಣ ಸಾರಿದ ಕೊರೊನಾ ಯುದ್ಧ : ವೈರಸ್ ತಡೆಗಟ್ಟುವಲ್ಲಿ ಎಡವಿದ್ರಾ ಟ್ರಂಪ್..?

ವಿಶ್ವದಲ್ಲೇ ದೊಡ್ಡಣ್ಣ ಎನ್ನುವ ಹೆಗ್ಗಳಿಕೆ ಪಡೆದ ಅಮೆರಿಕಾವನ್ನೂ ಕೊರೊನಾ ಮಹಾಮಾರಿ ಹಿಂಡಿ ಹಿಪ್ಪೆಯಾಗಿಸುತ್ತಿದೆ. ಕೊರೊನಾ ವೈರಸ್ ತನ್ನ ಕಪಿ ಮುಷ್ಠಿಯಲ್ಲಿ ಇಡೀ ದೇಶವನ್ನೇ ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಹೀಗೆ ಕೊರೊನಾ ದಿಗ್ಬಂಧನಕ್ಕೆ ಒಳಗಾದ ಮೊಟ್ಟ ಮೊದಲ ನಗರ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ. ಸ್ಯಾನ್ ಫ್ರಾನ್ಸಿಸ್ಕೋ ಅಕ್ಷರಶ: ನಲುಗಾಡಿ ಹೋಗಿದೆ. ಜನ ಮನೆ ಬಿಟ್ಟು ಹೊರಬರಲು ಚೀನಾದ ವುಹಾನ್ ಪ್ರಾಂತ್ಯದ ಜನರಂತೆ ಹೆದರುತ್ತಿದ್ದಾರೆ. ಹೀಗಾಗಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರಸ್ತೆಗಳು, ಮಾಲ್ ಗಳು ಇಡೀ ನಗರವೇ ಜನರಲಿಲ್ಲದೆ ಬಿಕೋ ಎನ್ನುತ್ತಿದೆ. ಇದರ ಜೊತೆಗೆ ಸೋಂಕು ಹರಡುವ ಭೀತಿಯಿಂದ ಅಮೆರಿಕಾ ಸರ್ಕಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜನಸಾಮಾನ್ಯರಿಗೆ ಮನೆ ಬಿಟ್ಟು ಹೊರಬಾರದಂತೆ ಕಟ್ಟಪ್ಪಣೆ ಜಾರಿಗೊಳಿಸಿದೆ. ಅಷ್ಟಕ್ಕೂ ಅಮೆರಿಕಾ ಅಧ್ಯಕ್ಷ ಕೊರೊನಾ ಸೋಂಕು ಹರಡಿದ ಆರಂಭದಲ್ಲಿ ಅಮೆರಿಕಾಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ಮಾತನ್ನ ಹೇಳಿದ್ರು. ಆದರೂ ಇಷ್ಟೊಂದು ಪ್ರಮಾಣದಲ್ಲಿ ವೈರಸ್ ಹರಡಿದ್ದು ಯಾಕೆ…? ಕೊರೊನಾ ವೈರಸ್ ತಡೆಗಟ್ಟುವಲ್ಲಿ ಟ್ರಂಪ್ ಎಡವಿದ್ರಾ ಅನ್ನೋ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ.

ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟ :-

ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14,202ಕ್ಕೇರಿಕೆಯಾಗಿದೆ. ಈ ವರೆಗೆ 208 ಜನರು ಮೃತಪಟ್ಟಿದ್ದಾರೆ. ಇಟಲಿಯ ಆರ್ಥಿಕತೆಯಂತೂ ಪಾತಾಳಕ್ಕೆ ಕುಸಿದಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಅಮೆರಿಕಾ ನೆಲದಲ್ಲೂ ಕೊರೊನಾ ಭೀತಿ ನೆಲಸಿದೆ. ಕ್ರೂರ ಕೊರೊನಾ ವಿಶ್ವದ ದೊಡ್ಡಣ್ಣನ ಮುಂದೆ ಕೇಕೇ ಹಾಕುತ್ತಿದೆ. ಜನರ ಪ್ರಾಣ ಹಿಂಡುತ್ತಿದೆ. ಎಲ್ಲಾ ವಿಚಾರದಲ್ಲೂ ಬುದ್ಧಿವಂತಿಕೆಯಿಂದ ನಡೆದುಕೊಳ್ಳುವ ಅಮೆರಿಕಾದ ಅಧ್ಯಕ್ಷರು ಕೊರೊನಾ ವೈರಸ್ ತಡೆಗಟ್ಟುವಲ್ಲಿ ಎಡವಿಬಿಟ್ರಾ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ.

ವೈರಸ್ ತಡೆಗಟ್ಟುವಲ್ಲಿ ಎಡವಿದ್ರಾ ಟ್ರಂಪ್..?

ಹೀಗೊಂದು ಪ್ರಶ್ನೆ ಉದ್ಬವಿಸಲು ಕಾರಣ ಅಮೇರಿಕದ 50 ರಾಜ್ಯಗಳಲ್ಲೂ ಕೊರೊನಾ ಹರಡಿರುವುದು. ಎಸ್… ಅಮೆರಿಕಾದಲ್ಲಿ ಆರಂಭದಲ್ಲಿ ಸೋಂಕಿತರ ಸಂಖ್ಯೆ 15 ಇದ್ದಾಗಲೇ ಡೊನಾಲ್ಡ್ ಟ್ರಂಪ್ ತುರ್ತು ಸಬೆಯನ್ನ ಮಾಡಿ ಆ ಮೂಲಕ ಸಂದೇಶವನ್ನು ರವಾನೆ ಮಾಡಿದ್ದರು. “ಅಮೆರಿಕಾದಲ್ಲಿ ಕೊರೊನಾ ಬಗ್ಗೆ ಜನ ಭಯಪಡಬೇಕಾಗಿಲ್ಲ. ಕೊರೊನಾ ಬಂದರೆ ನಮ್ಮಲ್ಲಿ ಅದನ್ನ ತಡೆಗಟ್ಟಲು ಬೇಕಾದ ವ್ಯವಸ್ಥೆಗಳಿವೆ. ದೊಡ್ಡ ಪ್ರಮಾಣದಲ್ಲಿ ಹರಡುವ ಮುನ್ನ ನಾವು ಸದಕ್ಕೆ ಔಷಧಿ ಕಂಡುಹಿಡಿಯಲಾಗುತ್ತದೆ. ಕೊರೊನಾ ವೈರಸ್  ಬಂದ ಹಾಗೆ ನಾಶವಾಗುತ್ತದೆ” ಎನ್ನುವ ಹೇಳಿಕೆಗಳನ್ನ ಹೇಳಿಕೊಂಡು ಬಂದಿದ್ದರು.

ಆದರೆ ಸದ್ಯ ಕೊರೊನಾ ವೈರಸ್ ಎಗ್ಗಿಲ್ಲದೆ ಅಮೆರಿಕಾದಲ್ಲಿ ಜನರ ದೇಹ ಸೇರುವುದು ಮಾತ್ರವಲ್ಲದೇ ಪ್ರಾಣವನ್ನೂ ಬಲಿ ಪಡೆದುಕೊಳ್ಳುತ್ತಿದೆ. ಕ್ಷಣದಿಂದ ಕ್ಷಣಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಕೊರೊನಾ ವೈರಸ್ ತಡೆಯುವುದು ಒಂದು ಕಡೆ ಇರಲಿ ಇಡೀ ಅಮೆರಿಕಾದಲ್ಲಿ ಕೊರೊನಾ ಬುನಾದಿ ಹಾಕಿ ನೆಲೆಸಿದೆ. ಕೊರೊನಾ ಕಪಿಮುಷ್ಟಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದ್ದಾನೆ ದೊಡ್ಡಣ್ಣ. ಇನ್ನೂ ನ್ಯೂಕಾರ್ಯ ನಲ್ಲಿಯೂ ವೈರಸ್ ನರ್ತನ ಮಾಡುತ್ತಿದೆ. ಇಲ್ಲಿ 3076 ಸೋಂಕಿತರಿದ್ದಾರೆ. ಇದು ಸ್ಯಾಂಪಲ್ ಅಷ್ಟೇ ಪರೀಕ್ಷೆಗೊಳಗಾಗದ ಅದೆಷ್ಟೋ ಜನರಿಗೆ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಮಾತ್ರವಲ್ಲ ನ್ಯೂಯಾರ್ಕ್ ನಗರದಲ್ಲಿ ವೃದ್ಧರು ಸಂಖ್ಯೆ ಅಧಿಕ ಇರೋದ್ರಿಂದ ಇಲ್ಲಿ ಸಾವಿನ ಸಂಖ್ಯೆ ಹಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.

ಆದರೆ ಸೋಂಕು ದೇಶಕ್ಕೆ ಕಾಲಿಟ್ಟ ಆರಂಭದಲ್ಲಿ ಅಧ್ಯಕ್ಷ ಟ್ರಂಪ್ ಹೇಳಿದ ಮಾತಿಗೂ ಸೋಂಕು ಹೆಚ್ಚಾಗಿ ಹರಡಿದ ನಂತರ ಹೇಳಿದ ಮಾತುಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಯಾಕೆಂದರೆ ಅಮೆರಿಕಾ ನಗರದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಹಾಹಾಕಾರ ನಡೆದಿದೆ.“ಈ ಸೋಂಕಿನ ಅಟ್ಟಹಾಸ 18 ತಿಂಗಳ ಕಾಲ ಇರಲಿದೆ. ನಾನು ಯುದ್ಧ ಕಾಲದ ಅಧ್ಯಕ್ಷ. ಕೊರೊನಾ ವಿರುದ್ಧ ಹೋರಾಡಬೇಕು” ಎಂದು ಹೇಳಿದ್ದಾರೆ. ಹಾಗಾದ್ರೆ ಟ್ರಂಪ್ ಕೊರೊನಾ ವಿರುದ್ಧ ಹೇಗೆ ಯುದ್ಧ ಶುರು ಮಾಡಿದ್ದಾರೆ?

ಕೊರೊನಾ ವಿರುದ್ಧ ಯುದ್ಧ ಸಾರಿದ ಟ್ರಂಪ್  :-

ಅಮೆರಿಕಾದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಿಗಾಗಿ ಹಾಹಾಕಾರ ಶುರುವಾಗಿದೆ. ಸಾಕಾಗುವಷ್ಟು ಐಸಿಯು, ವೆಂಟಿಲೇಟರ್ ಗಳು ಇಲ್ಲ ಎನ್ನುವ ರೋಚಕ ಸತ್ಯ ಹೊರಬಿದ್ದಿದೆ. ಹೀಗಾಗಿ ಅಮೆರಿಕಾ ಚೀನಾದಿಂದ ವೆಂಟಿಲೇಟರ್ ಖರೀಸಲು ಮುಂದಾಗಿದೆ. ಒಂದು ವೇಳೆ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಛಾಗುತ್ತಾ ಹೋದರೆ ಜನರಿಗೆ ಆಸ್ಪತ್ರೆಗಳೇ ಸಿಗದ ವಿಷಮ ಸ್ಥಿತಿ ಇದೆ. ಟ್ರಂಪ್ ಮೈಮರೆತಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. 3 ತಿಂಗಳು ಯಾಮಾರಿ ಕೊನೆಗೂ ಟ್ರಂಪ್ ಮಾಡಿದ್ದೇನು..?

ಜನವರಿಂದ ಮೊನ್ನೆಯವರೆಗೂ ಟ್ರಂಪ್ ಏಪ್ರಿಲ್ ನಲ್ಲಿ ವೈರಸ್ ತನ್ನಷ್ಟಕ್ಕೇ ಮಾಯವಾಗುತ್ತೆ. ಮಾರ್ಚ್ ನಲ್ಲಿ ಔಷಧಿ ಕಂಡು ಹಿಡಿಯುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಹೀಗೆ ಮೂರು ತಿಂಗಳ ಕಾಲ ಟ್ರಂಪ್ ಯಾಮಾರಿಬಿಟ್ಟಿದ್ದಾರೆ. ಇತ್ತೀಚೆಗೆ ಬಂದ ಫೆಡರಲ್ ರಿಪೋರ್ಟ್ ಪ್ರಕಾರ ಕೊರೊನಾ ಸೋಂಕು 18 ತಿಂಗಳುಗಳ ಕಾಲ ಇರಲಿದೆಯಂತೆ.

ಇದಕ್ಕೆ ಕೊರೊನಾ ಸೋಲಿಸಲು ಅಮೆರಿಕಾ ಕಂಡರಿಯದ ಹೆಜ್ಜೆಗಳನ್ನು ಇಡುತ್ತಿದೆ. ಹಾಗಾದ್ರೆ ಅಮೆರಿಕಾ ಕೊರೊನಾ ಯುದ್ಧ ಸಾರಿದ್ದು ಹೇಗೆ..? ಜನವರಿ ತಿಂಗಳಿನಲ್ಲಿ ಕೊರೊನಾ ಇನ್ನಿಲ್ಲದಂತೆ ಕಾಡಿದ್ದು. ಆದರೂ ಟ್ರಂಪ್ ಅಮೆರಿಕಾಕ್ಕೆ ಯಾವುದೆ ತೊಂದರೆ ಇಲ್ಲ ಅಂತ ಹೇಳಿಕೊಂಡು ಓಡಾಡಿದ್ರು. ಆದರೆ ಕೊರೊನಾ ಜೊತೆ ಸದ್ಯ ಯುದ್ಧಕ್ಕೆ ನಿಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಯುಎಸ್ ಎನ್ ಎಸ್ ಮರ್ಸಿ ಹಡಗುಗಳಲ್ಲಿ ತೇಲುವ ಆಸ್ಪತ್ರೆಗಳು ಏರ್ಪಾಡು ಮಾಡಲಾಗಿದೆ. ಈ ತೇಲುವ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ಸೋಂಕಿತರಿಗೆ ಅಲ್ಲೇ ರೀತಿಯ ಹಾರೈಕೆ ಮಾಡಲಾಗುತ್ತದೆ.

ಅಷ್ಟು ಮಾತ್ರವಲ್ಲ ಟ್ರಂಪ್ ಪರಿಹಾರ ಪ್ಯಾಕೇಜ್ ಗೆ ಸಹಿ ಹಾಕಿದ್ದು, ಇದರ ಪ್ರಕಾರ ಎಲ್ಲರೂ ಉಚಿತ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಸಂಬಳ ಸಹೇತ ರಜೆ ನೀಡಬೇಕು. ಇದಕ್ಕೆ 105 ಬಿಲಿಯನ್ ಡಾಲರ್ ಹಣ ನೀಡಿದೆ ಅಮೆರಿಕಾ ಸರ್ಕಾರ. ಜೊತೆಗೆ ಅತ್ಯಂತ ಕಡಿಮೆ ಸಂಬಳ ಇರುವವರಿಗೆ ಮನೆಯಲ್ಲೇ ಹಣ, ವೇತನ , ಚಿಕಿತ್ಸೆಗೆ 1.3 ಟ್ರಿಲಿಯನ್ ಡಾಲರ್ ನೀಡಲು ಟ್ರಂಪ್ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ಕೊನೆಗೂ ಟ್ರಂಪ್ ಗೆ ಕೊರೊನಾ  ಭೀಕರತೆ ಅರ್ಥವಾಗಿದೆ. ಈ ಕೊರೊನಾ ಹೆಮ್ಮಾರಿ ಯಾವಾಗ ಅಂತ್ಯ ಕಾಣುತ್ತೆ ಅಂತ ಜಗತ್ತು ಪರಿತಪಿಸುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights