ಲಾಕ್‌ಡೌನ್‌ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ 31,507 ವಾಹನಗಳು ಸೀಜ್‌!

ಕೊರೊನಾ ಎರಡನೇ ಅಲೆಯ ಹಾವಳಿಗೆ ಇಡೀ ಭಾರತವೇ ತತ್ತರಿಸಿಹೊಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಹರಡುವಿಕೆಗೆ ಬ್ರೇಕ್‌ ಹಾಕಲು ಹಲವು ರಾಜ್ಯಗಳು ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡಿವೆ. ಕರ್ನಾಟಕದಲ್ಲಿಯೂ ಕಳೆದ ಒಂದು ತಿಂಗಳಿಂದ ಲಾಕ್‌ಡೌನ್‌ ಜಾರಿಯಲ್ಲಿದೆ. ಆದರೂ, ಜನರು ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ಹೊರಬರುತ್ತಿದೆ.

ಹೀಗಾಗಿ ಅನಗತ್ಯವಾಗಿ ಹೊರ ಬಂದು ಓಡಾಡುವವರನ್ನು ನಿಯಂತ್ರಿಸಲು ಪೊಲೀಸರು ವಾಹನಗಳನ್ನು ಸೀಜ್‌ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಅನಗತ್ಯವಾಗಿ ರಸ್ತೆಗೆ ಬರುವವರ ವಾಹನಗಳನ್ನು ಪೊಲೀಸರು ಸೀಜ್‌ ಮಾಡುತ್ತಿದ್ದು, ಇದೂವರೆಗೂ ಒಟ್ಟು 31,507 ವಾಹನಗಳನ್ನು ಬೆಂಗಳೂರು ನಗರ ಪೊಲೀಸರು ವಶಪಡಿಸಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಶಪಡಿಸಿಕೊಳ್ಳಲಾದ ವಾಹನಗಳ ಪೈಕಿ 28.260 ದ್ವಿಚಕ್ರ ವಾಹನಗಳು, 1.480 ತ್ರಿಚಕ್ರ ವಾಹನ ಹಾಗೂ 1.767 ನಾಲ್ಕು ಚಕ್ರದ ವಾಹನಗಳಿವೆ ಎಂದು ಮಾಹಿತಿ ದೊರೆತಿದೆ.

ಸೋಮವಾರ ಒಂದೇ ದಿನ 1,496 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಜನರನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸರು ರಸ್ತೆಗಳಲ್ಲಿದ್ದು, 1595 ಪೊಲಿಸರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 1,118 ಮಂದಿ ಪೊಲಿಸರು ಗುಣ ಮುಖರಾಗಿದ್ದಾರೆ. 16 ಪೊಲೀಸ್‌ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಉಳಿದ 420 ಪೊಲಿಸರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಿಜೆಪಿಯ ಕೋಮು-ದ್ವೇಷ ರಾಜಕೀಯಕ್ಕೆ ಬಲಿಯಾಗುತ್ತಿದೆ ಲಕ್ಷದ್ವೀಪ? ಅಲ್ಲಿ ಕೇಂದ್ರ ಸರ್ಕಾರದ ಧೋರಣೆ ಹೇಗಿದೆ ಗೊತ್ತೇ?

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights