UDF ಅಧಿಕಾರಕ್ಕೆ ಬಂದರೆ ಕೇರಳದ ಪ್ರತಿ ಬಡವರಿಗೂ ತಿಂಗಳಿಗೆ 6,000 ರೂ ನೀಡುತ್ತೇವೆ: ರಾಹುಲ್‌ಗಾಂಧಿ ಘೋಷಣೆ

ಕೇರಳದಲ್ಲಿ ಏಪ್ರಿಲ್‌ 06 ರಂದು ಚುನಾವಣೆ ನಡೆಯಲಿದ್ದು, ಇಂದು ಚುನಾವಣಾ ಪ್ರಚಾರವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ‘ನ್ಯುಂಟಮ್ ಆಯೆ ಯೋಜನೆ’ (ನ್ಯಾಯ್‌) ಎಂಬ ಹೊಸ ಯೋಜನೆಯ ಭರವಸೆಯನ್ನು ಘೋಷಿಸಿದ್ದಾರೆ. ಇದರ ಅನ್ವಯ ಯುಡಿಎಫ್‌ ಅಧಿಕಾರಕ್ಕೆ ಬಂದರೆ, ರಾಜ್ಯದ ಪ್ರತಿಯೊಬ್ಬ ಬಡ ಜನರಿಗೂ ಪ್ರತಿ ತಿಂಗಳು 6,000 ರೂ ನೀಡುವುದಾಗಿ ಹೇಳಿದ್ದಾರೆ.

“ಯುಡಿಎಫ್ ಅಧಿಕಾರಕ್ಕೆ ಬಂದರೆ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರುತ್ತದೆ. ಇದೂ ವರೆಗೂ ಭಾರತದ ಯಾವುದೇ ರಾಜ್ಯದಲ್ಲಿ ಇಂತಹ ಯೋಜನೆಗಳನ್ನು ತರಲು ಪ್ರಯತ್ನಿಸಿಲ್ಲ” ಎಂದು ವೆಲ್ಲಮುಂಡದಲ್ಲಿ ಯುಡಿಎಫ್‌ ಪ್ರಚಾರ ರ್ಯಾಲಿಯಲ್ಲಿ ಹೇಳಿದ್ದಾರೆ.

“ನಾವು ಹಣವನ್ನು ನೇರವಾಗಿ ಕೇರಳದ ಬಡ ಜನರ ಕೈಗೆ ನೀಡುವ ಯೋಜನೆ ಇದೆ. ಅದು ಅಲ್ಪ ಪ್ರಮಾಣದ ಹಣವಲ್ಲ. ಕೇರಳದ ಪ್ರತಿಯೊಬ್ಬ ಬಡವನಿಗೆ ತಿಂಗಳಿಗೆ 6,000 ರೂ – ವರ್ಷಕ್ಕೆ 72,000 ರೂಗಳನ್ನು ಪ್ರತಿ ತಿಂಗಳು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು” ಎಂದು ಅವರು ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ, ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರವು ವೃದ್ಧರಿಗೆ ಕಲ್ಯಾಣ ಪಿಂಚಣಿಯನ್ನು ಗಣನೀಯವಾಗಿ ಹೆಚ್ಚಿಸಿದೆ. 2016 ರಲ್ಲಿ ಯುಡಿಎಫ್ ಯೋಜನೆಯು ಕೊನೆಗೊಂಡಾಗ ಕಲ್ಯಾಣ ಪಿಂಚಣಿ 600 ರೂ. ಇತ್ತು. ಈಗ ಇದು ತಿಂಗಳಿಗೆ 1,600 ರೂ.ಇದ್ದು, ಎಡ ಸರ್ಕಾರವು ಹಂತ-ಹಂತವಾಗಿ ಪಿಂಚಣಿಯ ಮೊತ್ತವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆ: ಮಮತಾ ವಿರುದ್ದ ಬಿಜೆಪಿ ಮೈಂಡ್‌ಗೇಮ್‌ ಅಸ್ತ್ರ; ವರ್ಕ್‌ ಆಗತ್ತಾ ಭಯದ ಸ್ಟ್ರಾಟಜಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights