ರಾಮ ಮಂದಿರ ನಿರ್ಮಾಣದಿಂದ ರಾಮ ರಾಜ್ಯ ಆಗುವುದಿಲ್ಲ: ಮೋದಿ ವಿರುದ್ದ ಸತೀಶ್ ಜಾರಕಿಹೊಳಿ‌ ವಾಗ್ದಾಳಿ

ಬೆಳಗಾವಿ ಉಪಚುನಾವಣೆಗೆ ಅಖಾಡ ರಂಗೇರಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸತೀಶ್‌ ಜಾರಕಿಹೊಳಿ ಅವರು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇಂದು ಯಳ್ಳೂರು ಗ್ರಾಮದಲ್ಲಿಪ್ರಚಾರ ಆರಂಭಿಸಿರುವ ಅವರು, ಸೆಲೆಬ್ರಟಿಗಳ ಬರ್ತಡೇಗೆ ವಿಶ್‌ ಮಾಡಲು ಸಮಯ ಹೊಂದಿರುವ ಮೋದಿ ಅವರಿಗೆ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡಲು ಸಮಯವಿಲ್ಲ. ರಾಮ ಮಂದಿರವನ್ನು ಕಟ್ಟುವುದರಿಂದ ರಾಮ ರಾಜ್ಯವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಜೊತೆ ಗ್ಯಾಸ್ ಬೆಲೆ ಏರಿಕೆ ತಡೆಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಜನಪರ ಸರ್ಕಾರ ಬೇಕು. ಯಾವುದೇ ಅದಾನಿಗಾಗಲಿ, ಅಂಬಾನಿಗಾಗಲಿ ಸರ್ಕಾರ ಇರಬಾರದದು, ದೆಹಲಿ ಸರ್ಕಾರ ಕೇವಲ ಎರಡ್ಮೂರು ಜನರಿಗಾಗಿ ನಡೆಯುತ್ತಿದೆ ಎಂದಿದ್ದಾರೆ.

ರೈತರ ಬಳಿ ಬರಲು ಪ್ರಧಾನಿ ಮೋದಿಗೆ ಸಮಯ ಇಲ್ಲ, ರಾಮ ಮಂದಿರ ನಿರ್ಮಾಣದಿಂದ ರಾಮರಾಜ್ಯ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಏಪ್ರಿಲ್ 17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಮೇ 02 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆ: ಮಮತಾ ವಿರುದ್ದ ಬಿಜೆಪಿ ಮೈಂಡ್‌ಗೇಮ್‌ ಅಸ್ತ್ರ; ವರ್ಕ್‌ ಆಗತ್ತಾ ಭಯದ ಸ್ಟ್ರಾಟಜಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights