ಶ್ರೀರಾಮುಲು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ: ಉತ್ತಮ ಚಿಕಿತ್ಸೆಯ ಭರವಸೆ!

ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ಉತ್ತಮ ಚಿಕಿತ್ಸೆಯ ಭರವಸೆ ನೀಡಿದ್ದಾರೆ. ಕೋಟೆ ನಾಡು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಾಸ್ತವ್ಯ ಹೂಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಬೇಕಿದ್ದ ಸಚಿವ ಶ್ರೀರಾಮುಲು ವಾಸ್ತವ್ಯವನ್ನ ಮುಂದೂಡಿದ್ರು.

ಆದ್ರೆ ಇಂದು ರಾತ್ರಿ ವಾಸ್ತವ್ಯ ಕ್ಕೆ ಆಸ್ಪತ್ರೆಗೆ ಬೇಟಿ ನೀದ ಸಚಿವ ಶ್ರೀರಾಮುಲು ಹೊರಗುತ್ತಿಗೆ ನೌಕರರ ಸಮಸ್ಯೆ ಆಲಿಸಿದ್ರು. ಬಳಿಕ ನೇರವಾಗಿ ಆಸ್ಪತ್ರೆ ವಾರ್ಡ್ ಗಳಿಗೆ ಬೇಟಿ ನೀಡಿ ರೋಗಿಗಳಿ ಉತ್ತಮ ಚಿಕಿತ್ಸೆ ಸಿಗುತ್ತದೆಯ ಎಂಬುದರ ಬಗ್ಗೆ ವಿಚಾರಿ ಸೂಕ್ತ ಚಿಕಿತ್ಸೆ ಚಿಕಿತ್ಸೆ ನೀಡುವಂತೆ ಜಿಲ್ಲಾಸ್ಪತ್ರೆ ಸಿಬ್ಬಂಧಿಗಳಿಗೆ ಸೂಚನೆ ನೀಡಿದ್ರು. ಈ ವೇಳಿ ಮಾದ್ಯಮಗಳೊಂದಿ ಮಾತನಾಡಿದ ಶ್ರೀರಾಮುಲು., ನಾನು ಬರುತ್ತೇನೆ ವಾಸ್ತವ್ಯ ಹೂಡುತ್ತೇನೆ ಎಂಬ ಕಾರಣಕ್ಕೆ ಆಸ್ಪತ್ರೆಯನ್ನ ಸುಚಿಯಾಗಿ ಇಡುತ್ತಾರೆ. ಇನ್ನು ಮುಂದೆ ಈ ಪ್ರಕ್ರಿಯೆ ಪ್ರತಿನಿತ್ಯ ನಡೆಯಬೇಕು, ಇದು ನನ್ನ ಉಸ್ತುವಾರಿ ಜಿಲ್ಲೆಯಾಗಿದ್ದು ರೋಗಿಗಳಿಗೆ ,ಹೆರಿಗೆಯಾದ ತಾಯಂದರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಆ ನಿಟ್ಟಿನಲ್ಲಿ ವೈಧ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಅಲ್ಲದೆ ಬಳ್ಳಾರಿ ಸೇರಿದಂತೆ ವಿವಿಧ ಪ್ರಕರಣಗಳ ವರದಿ ತರಿಸಿಕೊಂಡು ಯಾರೇ ಕರ್ತವ್ಯ ಲೋಪ ಎಸಗಿದ್ರು ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡುತ್ತೇನೆ. ಬೆಳಗ್ಗೆ ವರೆಗೆ ಆಸ್ಪತ್ರೆಯಲ್ಲಿಯೇ ವಾಸ್ತವ್ಯ ಮಾಡಿ ಬೆಳಿಗೆ ಭೋವಿ ಗುರುಪೀಠದಲ್ಲಿ ಯೋಗ ಮತ್ತು ಪೂಜೆ ಮುಗಿಸಿ ಮತ್ತೆ ಬಂದು ರೋಗಿಗಳು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡುತ್ತೇನೆ ಎಂದಿದ್ದಾರೆ.ಇನ್ನೂ ಮಂಗಳೂರು ಬಾಂಬ್ ಪತ್ತೆ ಪ್ರಕರಣ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಬಾಂಬ್ ಸಿಕ್ಕಿರುವುದು ಗಂಭೀರ ವಿಚಾರ, ಯಾವುದೇ ರಾಜಕಾರಣಿಗಳು ಇದನ್ನ ಗಂಭೀರವಾಗಿ ಯೋಚನೆ ಮಾಡಬೇಕು.ಕುಮಾರ ಸ್ವಾಮಿ ಅವರನ್ನ ಯಾವತ್ತೂ ಸಿರಿಯಸ್ ಪೊಲಿಟಿಷಿಯನ್ ಎಂದುಕೊಂಡಿಲ್ಲ , ಸೈನಿಕರು ಹೊಟ್ಟೆ ಪಾಡಿಗೆ ಸೇನೆ ಸೇರುತ್ತಾರೆ ಎಂದು ಹೇಳಿದ್ದರು.ಈಗ ಬಾಂಬ್ ವಿಚಾರವಾಗಿ ಕೂಡಾ ತಮಾಷೆಯಾಗಿ, ಗೇಲಿಯಾಗಿ ಮಾತನಾಡಿದ್ದಾರೆ.ಸಿರಿಯಸ್ ವಿಚಾರ ಇದ್ದಾಗ ಸಿರಿಯಸ್ ಆಗಿಯೇ ವರ್ತಿಸಬೇಕಾಗುತ್ತೆ.ಕುಮಾರಸ್ವಾಮಿ ಸಿರಿಯಸ್ ರಾಜಕಾರಣಿ ಎಂದುಕೊಂಡಿಲ್ಲ. ಯಾರೇ ತಪ್ಪಿತಸ್ಥರಾದರು ಸರ್ಕಾರ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುತ್ತದೆ.

ಮಾನಸಿಕ ಸ್ಥಿತಿ ಕಳೆದುಕೊಂಡ ನಂತರ ಈ ರೀತಿ ಮಾತನಾಡುತ್ತಾರೆ. ಬಿಜೆಪಿ- ಹಿಂದೂ ಸಂಘಟನೆಗಳು ಸಕ್ರಿಯವಾಗಿ ಕೆಲಸ ಮಾಡುತ್ತುವೆ, ಕಲ್ಲಡ್ಕ ಪ್ರಭಕರ್ ಭಟ್ ಬಗ್ಗೆ ಕಾಂಗ್ರೆಸ್ ಸರ್ಕಾರದ ವೇಳೆ ಇಂತಹ ಆರೋಪ ಮಾಡಿದ್ದರು,ಇದೆಲ್ಲವೂ ರಾಜಕೀಯ ಶಡ್ಯಂತ್ರ , ಏನು ಮಾಡಿದರು ಬಿಜೆಪಿ ಸಕ್ರಿಯವಾಗಿ ಕೆಲಸ ಮಾಡುತ್ತದೆ.

ಸಿಎಎ ಬಗ್ಗೆ ಸಿದ್ದರಾಮಯ್ಯ ಈ ರೀತಿ ಮಾತನಾಡುವುದು ಶೋಭೆ ತರುವುದಲ್ಲ ಎಂದು ಅಸಮದಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸ್ವಚ್ಚತೆ ಇಲ್ಲದೆ ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಸಚಿವರ ಆಸ್ಪತ್ರೆ ವಾಸ್ತವ್ಯದ ಕಾರಣಕ್ಕೆ ಸ್ವಚ್ಚಗೊಂಡಿದೆ. ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿ ರೋಗಿಗಳ ಸಮಸ್ಯೆ ಕೇಳಿರುವ ಆರೋಗ್ಯ ಸಚಿವರು ಆಸ್ಪತ್ರೆ ಸುವ್ಯವಸ್ತೆಗೆ ಯಾವ ರೀತಿ ಕ್ರಮ ಕೈಗೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights