ಸಂಜೆ ಹುಡುಗಿ ಫೋನು ನಂಬರ್ ಕೇಳುತ್ತಿದ್ದ ಪುಂಡನಿಗೆ ಪಾಠ ಕಲಿಸಿದ ಓಬವ್ವ….!
ರಾಯಚೂರಿನಲ್ಲಿ ಸಂಜೆ ಹೊತ್ತು ಹುಡುಗಿ ಫೋನು ನಂಬರ್ ಕೇಳುತ್ತಿದ್ದ ವ್ಯಕ್ತಿಯನ್ನ ಓಬವ್ವ ಪಡೆ ವಶಕ್ಕೆ ಪಡೆದುಕೊಂಡು ಸರಿಯಾಗಿ ಪಾಠ ಕಲಿಸಿದೆ.
ಮೂರು ದಿನಗಳ ಹಿಂದೆ ಮಹಿಳೆಯರ ಸುರಕ್ಷತೆಗಾಗಿ ಕಾರ್ಯರೂಪಕ್ಕೆ ಇಳಿದ ಓಬವ್ವ ಪಡೆ ರಾಯಚೂರು ಜಿಲ್ಲಾ ಪೊಲೀಸರಿಂದ ಆರಂಭವಾಗಿದೆ.ತಾರಾನಾಥ ಎಂಬ ಯುವಕ ಒಂದು ಹುಡುಗಿಯ ನಂಬರ್ ಕೊಡು ಎಂದು ಆಕೆಯ ಸ್ನೇಹಿತೆರನ್ನು ಪೀಡಿಸುತ್ತಿದ್ದನು. ಈ ಸಂದರ್ಭದಲ್ಲಿ ಕೆಲವರನ್ನು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇನ್ನೊಬ್ಬ ಹುಡುಗ ಹುಡುಗುಯರನ್ನು ಚೂಡಾಯಿಸುತ್ತಿದ್ದ. ಮಹಾಂತೇಶ ಎಂಬ ಹುಡುಗ ರಸ್ತೆಯಲ್ಲಿ ಹೋಗುವ ಹುಡಿಗಿಯರನ್ನು ಚೂಡಾಯಿಸುತ್ತಿದ್ದನು. ಇಬ್ಬರನ್ನು ವಶಕ್ಕೆ ಪಡೆದು ಮಹಿಳಾ ಠಾಣೆಗೆ ಒಪ್ಪಿಸಿದ ಓಬವ್ವ ಪಡೆ ಸರಿಯಾಗಿ ಪಾಠ ಕಲಿಸಿದೆ.