ಸತತ 14ನೇ ದಿನವೂ ಏರಿಕೆಯಾದ ಪೆಟ್ರೋಲ್ ಬೆಲೆ; ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?
ಲಾಕ್ಡೌನ್ ಸಡಿಲಿಕೆಯಾದಾಗಿನಿಂದ ಪ್ರತಿನಿತ್ಯ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಸತತ 14ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆಯಾಗಿದೆ.
ವಾಹನ ಸವಾರರನ್ನು ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ. ಶನಿವಾರ ಪೆಟ್ರೋಲ್ ಲೀಟರ್’ಗೆ 0.51 ಪೈಸೆ ಹಾಗೂ ಡೀಸೆಲ್ 0.61 ಪೈಸೆ ಏರಿಕೆ ಮಾಡಲಾಗಿದೆ. ಹೀಗಾಗಿ ಎರಡು ವಾರಗಳ ಅಂತರದಲ್ಲಿ ಪೆಟ್ರೋಲ್ ರೂ.5.88 ಹಾಗೂ ಡೀಸೆಲ್ ರೂ.6.50 ಏರಿಕೆಯಾದಂತಾಗಿದೆ.
ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಶುಕ್ರವಾರ ಲೀಟರ್’ಗೆ ರೂ. 81.42 ಹಾಗೂ ಡೀಸೆಲ್ ರೂ.73.89 ಆಗಿದೆ.
ಅಂತರಾಷ್ಟ್ರೀಯ ಕಚ್ಚಾತೈಲ ದರಕ್ಕೆ ತಕ್ಕಂತೆ ತೈಲ ಕಂಪನಿಗಳು ಜೂ.7ರಿಂದ ತೈಲ ದರಗಳನ್ನು ದೈನಂದಿನ ಪರಿಷ್ಕರಣೆ ಮಾಡುತ್ತಿವೆ.