ಸತ್ಯಸಾಯಿ ಬಾಬಾರ ಅವತಾರವೆಂದು ಪವಾಡ ಪುರುಷನನ್ನು ಕಾಣಲು ಮುಗಿಬಿದ್ದ ಭಕ್ತರು..!

ಚನ್ನಪಟ್ಟಣದಲ್ಲೊಬ್ಬ ಪವಾಡ ಪುರುಷನನ್ನು ಕಂಡ ಜನ ಶಿರಡಿ ಬಾಬಾ, ಸತ್ಯಸಾಯಿ ಬಾಬಾರ ಅವತಾರವೆಂದು ಆತನನ್ನು ಕಾಣಲು ಮುಗಿಬಿದ್ದಿದ್ದಾರೆ.

ಪ್ರೇಮ್ ಸಾಯಿ ಬಾಬಾ ಎಂಬ ಪವಾಡ ಪುರುಷ, ಬರಿಗೈನಲ್ಲಿ ಭಕ್ತರಿಗೆ ವಿಭೂತಿ, ತಾಯತ, ಸಿಹಿ ತಿನಿಸು ನೀಡುತ್ತಿರುವುದನ್ನ ಕಂಡು ಜನ ಆಶ್ಚರ್ಯಗೊಂಡಿದ್ದಾರೆ. ಚನ್ನಪಟ್ಟಣದ ಚಿಕ್ಕಮಳೂರಿನಲ್ಲಿ ಕಳೆದ ಒಂದು ವಾರದಿಂದ ಇರುವ ಪ್ರೇಮ್ ಸಾಯಿಬಾಬಾನ ಪವಾಡಕ್ಕೆ ಭಕ್ತರು ಮರುಳಾಗಿದ್ದಾರೆ.

ಚಿಕ್ಕಮಳೂರಿನ ಸ್ಮಶಾನದಲ್ಲಿ ಪುಟ್ಟಸ್ವಾಮಿಗೌಡ ಎಂಬುವವರ ಸಮಾಧಿ ಬಳಿ ಇದ್ದ ಪ್ರೇಮ್ ಸಾಯಿ, ಕಳೆದ ಮೂರು ದಿನಗಳಿಂದ ಮಂಗಳವಾರಪೇಟೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಹೂಡಿರುವರು.

ಸಮಸ್ಯೆಗಳನ್ನು ಹೇಳಿಕೊಂಡು ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿಭೂತಿ, ಕೆಲವರಿಗೆ ಸಾಯಿಬಾಬಾ ಪೋಟೋ, ತಾಯತ, ಸಿಹಿ ತಿನಿಸು ನೀಡಿರುವ ಪವಾಡ ಪುರುಷ, ಭಕ್ತರಿಂದ ಯಾವುದೇ ಕಾಣಿಕೆ ಪಡೆಯದೇ ದರ್ಶನ, ಸಮಸ್ಯೆಗಳಿಗೆ ಪರಿಹಾರ ಹೇಳುತ್ತಿದ್ದಾರೆ.

ಹೀಗಾಗಿ ಭಕ್ತರು ಈತನ ದರ್ಶನ ಪಡೆಯಲು ಮುಗಿಬಿದ್ದಿದ್ದು, ಬೆಳಿಗ್ಗೆ ಹಾಗೂ ಸಾಯಂಕಾಲದ ವೇಳೆ ದರ್ಶನ ಹಾಗೂ ಭಜನೆ ಮಾಡುತ್ತಿದ್ದಾರೆ. ಪವಾಡ ಪುರುಷ ಹಿಂದಿ, ಇಂಗ್ಲೀಷ್ ಹಾಗೂ ಸ್ವಲ್ಪ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights