FACT CHECK | ಮೂತ್ರ ಕುಡಿದು ಮೊಣಕಾಲಿನ ನೋವು ನಿವಾರಿಸಿಕೊಂಡ ನಟ ಪರೇಶ್ ! ಮೂತ್ರ ಕುಡುದ್ರೆ ಆರೋಗ್ಯ ಸುಧಾರಣೆ ಆಗತ್ತಾ?

ಭಾರತೀಯ ಜನತಾ ಪಕ್ಷದ (BJP) ಮಾಜಿ ಸಂಸದ ಮತ್ತು ಬಾಲಿವುಡ್ ನಟ ಪರೇಶ್ ರಾವಲ್ ಇತ್ತೀಚೆಗೆ ಲಲ್ಲಂಟಾಪ್‌ನ ಸೌರಭ್ ದ್ವಿವೇದಿ ಅವರೊಂದಿಗೆ 15 ದಿನಗಳ ಕಾಲ ಮೂತ್ರ ಕುಡಿಯುವುದರಿಂದ ಮೊಣಕಾಲಿನ ಸಮಸ್ಯೆಗಳಿಂದ ಹೊರಬರಲು ಹೇಗೆ ಸಹಾಯವಾಯಿತು ಎಂಬುದರ ಕುರಿತು ಮಾತನಾಡಿದರು.

ನಟ ಪರೇಶ್‌ ರಾವಲ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಘಟಕ್‌ ಸಿನಿಮಾದ ಚಿತ್ರೀಕರಣ ವೇಳೆಯಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಉಂಟಾದ ಗಂಭೀರ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ಅವರು ಸ್ವಮೂತ್ರ ಪಾನ ಮಾಡಿರುವುದಾಗಿ ಹೇಳಿದ್ದಾರೆ.

“ಮೂತ್ರವನ್ನು ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಬಹುದೇ?” ಮತ್ತು “ಮೂತ್ರ ಕುಡಿಯುವುದು ಆರೋಗ್ಯಕರವೇ ಅಥವಾ ಮನುಷ್ಯರಿಗೆ ಅಪಾಯಕಾರಿಯೇ?” ಇದಕ್ಕೆ ವೈಜ್ಞಾನಿಕ ಅಥಾವ ವೈದ್ಯಕೀಯ ಕಾರಣಗಳಿವೆಯೇ?  ಇದರ ಮೇಲಿನ ವಿಶ್ಲೇಷಣೆಗಗಳು ಏನು ಹೇಳುತ್ತವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮೂತ್ರ ಕುಡಿಯುವುದರಿಂದ ಪ್ರಯೋಜನವಿದೆಯೇ?

ಮೂತ್ರವು ದೇಹದಿಂದ ಬಿಡುಗಡೆಯಾಗುವ ತ್ಯಾಜ್ಯವಾಗಿದೆ. ಇದು ಯೂರಿಯಾ, ಎಲೆಕ್ಟ್ರೋಲೈಟ್‌ಗಳು (ಸೋಡಿಯಂನಂತಹವು), ಕ್ರಿಯೇಟಿನೈನ್ ಮತ್ತು ನೀರಿನೊಂದಿಗೆ ಇತರ ಅಂಶಗಳನ್ನು ಒಳಗೊಂಡಿದೆ.

image.png

NCBI ವರದಿಯ ಪ್ರಕಾರ, ಮೂತ್ರ ಕುಡಿಯುವುದರಿಂದ ಯಾವುದೇ ಸ್ಪಷ್ಟ ಆರೋಗ್ಯ ಪ್ರಯೋಜನಗಳಿಲ್ಲ ಎಂದು ವಿಜ್ಞಾನಿಗಳು ನಂಬುತ್ತಾರೆ. ಮೂತ್ರದಲ್ಲಿ ಸಣ್ಣ ಪ್ರಮಾಣದ ಹಾರ್ಮೋನುಗಳು, ಜೀವಸತ್ವಗಳು ಮತ್ತು ಪ್ರತಿಕಾಯಗಳು ಕಂಡುಬರುತ್ತವೆ, ಆದರೆ ಅವು ಆರೋಗ್ಯದ ಮೇಲೆ ಯಾವುದೇ ಗಮನಾರ್ಹ ಪರಿಣಾಮ ಬೀರುವುದಿಲ್ಲ. ಮೂತ್ರವು ಮೂತ್ರವರ್ಧಕವಾಗಿದ್ದು, ದೇಹದಿಂದ ಹೆಚ್ಚುವರಿ ನೀರು ಮತ್ತು ಉಪ್ಪನ್ನು ತೆಗೆದುಹಾಕುತ್ತದೆ. ಇದು ನಿರ್ಜಲೀಕರಣವನ್ನು ಮತ್ತಷ್ಟು ಹೆಚ್ಚಿಸಬಹುದು.

image.png

ಇದನ್ನು ಮಾರ್ಗದರ್ಶಿಯಾಗಿ ಬಳಸಿಕೊಂಡು, “ನಿಮ್ಮ ಮೂತ್ರವನ್ನು ಏಕೆ ಕುಡಿಯುವುದು ನಿಮಗೆ ಒಳ್ಳೆಯದಲ್ಲ” ಎಂಬ ಶೀರ್ಷಿಕೆಯೊಂದಿಗೆ ಮತ್ತೊಂದು UPMC ಲೇಖನ ಇದರ ಮೇಲೆ ಬೆಳಕು ಚೆಲ್ಲಿದೆ.

ಮೂತ್ರವು ದೇಹದಿಂದ ಹೊರಹೋಗುವಾಗ ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರುತ್ತದೆ. ಆರೋಗ್ಯವಂತ ಜನರ ಮೂತ್ರದಲ್ಲಿಯೂ ಬ್ಯಾಕ್ಟೀರಿಯಾ ಇರಬಹುದು. ಒಬ್ಬರು ಇನ್ನೊಬ್ಬರ ಮೂತ್ರ ಕುಡಿದರೆ, ರೋಗಗಳ ಅಪಾಯ ಹೆಚ್ಚಾಗಬಹುದು. ವಿಶೇಷವಾಗಿ ಚಿಕ್ಕ ಮಕ್ಕಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಹೆಚ್ಚಿನ ಅಪಾಯದಲ್ಲಿರುತ್ತಾರೆ.
ಮೂತ್ರ ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಇನ್ನಷ್ಟು ಹೆಚ್ಚಾಗುತ್ತದೆ ಏಕೆಂದರೆ ಮೂತ್ರದಲ್ಲಿ ಉಪ್ಪು ಇರುತ್ತದೆ. ಆದ್ದರಿಂದ, ನೀರಿಲ್ಲದಿದ್ದರೂ, ಮೂತ್ರ ಕುಡಿಯುವ ಬದಲು, ಶುದ್ಧ ನೀರು ಕುಡಿಯಬೇಕು. ಮೂತ್ರ ಕುಡಿಯುವುದರಿಂದ ದೇಹದಲ್ಲಿನ ಸೋಡಿಯಂ ಮತ್ತು ಇತರ ಎಲೆಕ್ಟ್ರೋಲೈಟ್‌ಗಳ ಮಟ್ಟವು ತೊಂದರೆಗೊಳಗಾಗಬಹುದು, ವಿಶೇಷವಾಗಿ ನೀವು ಈಗಾಗಲೇ ನಿರ್ಜಲೀಕರಣದ ಸಮಸ್ಯೆಯನ್ನು ಹೊಂದಿದ್ದರೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ದಿ ಲಿವರ್ ಡಾಕ್ ಎಂಬ ಎಕ್ಸ್‌ ಬಳಕೆದಾರರು ವೈರಲ್ ವಿಡಿಯೋಗೆ ಪ್ರತಿಕ್ರಯಿಸಿದ್ದು,  ಬಾಲಿವುಡ್ ನಟ ಹೇಳಿದ್ದಾರೆಂದು ದಯವಿಟ್ಟು ನಿಮ್ಮ ಮೂತ್ರವನ್ನು (ಅಥವಾ ಇತರರ) ಕುಡಿಯಬೇಡಿ. ಮೂತ್ರ ಕುಡಿಯುವುದರಿಂದ ಯಾವುದೇ ಆರೋಗ್ಯ ಪ್ರಯೋಜನಗಳಿವೆ ಎಂಬ ಕಲ್ಪನೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ವಾಸ್ತವವಾಗಿ, ಮೂತ್ರ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಬ್ಯಾಕ್ಟೀರಿಯಾ, ವಿಷ ಮತ್ತು ಇತರ ಹಾನಿಕಾರಕ ವಸ್ತುಗಳು ರಕ್ತ ಪರಿಚಲನೆಯಲ್ಲಿ ಸೇರುವ ಸಾಧ್ಯತೆಯಿದೆ.

ನಿಮ್ಮ ಮೂತ್ರಪಿಂಡಗಳು ನಿಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ಮೂತ್ರದ ಮೂಲಕ ತೆಗೆದುಹಾಕಲು ತುಂಬಾ ಶ್ರಮಿಸುತ್ತವೆ. ಅದನ್ನು ಮತ್ತೆ ಒಳಗೆ ಹಾಕುವ ಮೂಲಕ ಅದನ್ನು ಅವಮಾನಿಸಬೇಡಿ. ಮೂತ್ರವು ಕ್ರಿಮಿನಾಶಕವಲ್ಲ. ಮೂತ್ರವು ನಿಮ್ಮ ದೇಹವು ತೆಗೆದುಹಾಕಲು ಪ್ರಯತ್ನಿಸುತ್ತಿರುವ ಲವಣಗಳು ಮತ್ತು ರಾಸಾಯನಿಕಗಳ ಪ್ರಬಲ ಸಂಯೋಜನೆಯಾಗಿದೆ. ನೀವು ಅವುಗಳನ್ನು ಸೇವಿಸಿದರೆ ಈ ರಾಸಾಯನಿಕಗಳು ಗಮನಾರ್ಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಪರೇಶ್ ರಾವಲ್ ಭಾರತೀಯ ವಾಟ್ಸಾಪ್ ಬೂಮರ್ ಅಂಕಲ್‌ಗೆ ಒಂದು ಉತ್ತಮ ಉದಾಹರಣೆ. ಅವರು ಮೀಡಿಯಾ ಮೂಲಕ ಪ್ರಚಾರ ಪಡೆದುಕೊಳ್ಳಲು  ಇದನ್ನು ಹೇಳುತ್ತಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಲಿವುಡ್ ನಟ ಮತ್ತು ಮಾಜಿ ಬಿಜೆಪಿ ಸಂಸದ ಪರೇಶ್ ರಾವಲ್ ಮೂತ್ರ ಕುಡಿಯುವುದರಿಂದ ತನ್ನ ಕಾಯಿಲೆ ಗುಣವಾಯಿತು ಎಂದು ಪ್ರತಿಪಾದಿಸಿ ನೀಡಿರುವ ಹೇಳಿಕೆ ಜನ ಸಾಮಾನ್ಯರನ್ನು ದಾರಿತಪ್ಪಿಸುವಂತಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇಂತಹ ಪ್ರಯೋಗಗಳನ್ನು ಮಾಡುವ ಸಾಹಸ ಮಾಡಬೇಡಿ ಎಂದು ಹೇಳುತ್ತದೆ ವೈದ್ಯ ಲೋಕ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇರಳದಲ್ಲಿ ಪಾಕ್‌ ಪರ ರ್‍ಯಾಲಿ ನಡೆಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights