ಸಿಎಂ ಕಾಯ೯ಕ್ರಮದ ಬಂದೋಬಸ್ತ್ ಗಾಗಿ ತೆರಳುತ್ತಿದ್ದ ಪಿಎಸ್ಐ ವಾಹನ ಪಲ್ಟಿ…!
ಸಿಎಂ ಕಾಯ೯ಕ್ರಮದ ಬಂದೋಬಸ್ತ್ ಗಾಗಿ ತೆರಳುತ್ತಿದ್ದ ಪಿಎಸ್ಐ ವಾಹನ ಪಲ್ಟಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೈದಾಪೂರ ಬಳಿಯ ಕಪ್ಪಲಗುದ್ದಿ ಕ್ರಾಸ್ ನಲ್ಲಿ ನಡೆದಿದೆ.
ಬಾಗಲಕೋಟೆಗೆ ಸಿಎಂ ಆಗಮಿಸೋ ಹಿನ್ನೆಲೆಯಲ್ಲಿ ರಿಹಸ೯ಲ್ ನಲ್ಲಿ ತೊಡಗಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬುಲೇರೋ ವಾಹನ ರಸ್ತೆ ಪಕ್ಕದ ಕಬ್ಬಿನ ಜಮೀನಿಗೆ ನುಗ್ದೆಗಿದೆ. ಬುಲೆರೋ ವಾಹನ ಮೇಲ್ಭಾಗ ನುಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಪಿಎಸ್ಐ ಸೇರಿ ಮೂವರಿಗೆ ಗಂಭೀರ ಗಾಯವಾಗಿದೆ.
ಇಲಕಲ್ ದಿಂದ ಸೈದಾಪೂರಕ್ಕೆ ಬಂದೂಬಸ್ತ್ ಗೆ ತೆರಳಿದ್ದ ಮೂವರು ಪೋಲಿಸ ಸಿಬ್ಬಂದಿಯನ್ನು ಅಂಬುಲೆನ್ಸ್ ಮೂಲಕ ಗಾಯಗೊಂಡ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇಲಕಲ್ ನಗರ ಠಾಣೆಯ ಪಿಎಸ್ಐ ಕುಮಾರ ಹೆಡಕರ್, ಡ್ರೈವರ್ ಶಿವಾನಂದ, ಪೇದೆ ಮಂಜುನಾಥ ಮೂವರು ಪೋಲಿಸ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.