ಸಿಎಂ ತಂತಿ ಮೇಲೆ ನಡೆಯುತ್ತಿದ್ದಾರೋ, ಬೆಂಕಿ ಮೇಲೆ ನಡೆಯುತ್ತಿದ್ದಾರೊ ಅವರನ್ನೇ ಕೇಳಿ- ಎಂ. ಬಿ. ಪಾಟೀಲ
ಸಿಎಂ ಯಡಿಯೂರಪ್ಪ ತಂತಿ ಮೇಲೆ ನಡೆಯುತ್ತಿದ್ದಾರೋ, ಬೆಂಕಿ ಮೇಲೆ ನಡೆಯುತ್ತಿದ್ದಾರೊ ಎಂಬುದನ್ನು ಅವರನ್ನೇ ಕೇಳಿ ಎಂದು ವಿಜಯಪುರದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ಕುಟುಕಿದ್ದಾರೆ.
ಅನರ್ಹ ಶಾಸಕರ ಕುರಿತು ಉಮೇಶ ಕತ್ತಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಯಾವ ಬೀಜ ಬಿತ್ತುತ್ತೀರಿ ಆ ಫಸಲು ಬರುತ್ತೆ. ಅನರ್ಹರಿಗೂ ಈಗ ತಪ್ಪಿನ ಅರಿವಾಗಿದೆ. ನಮ್ಮ ಜೊತೆ ಅವರು ನಮ್ಮ ಜೊತೆ ಸಂಪರ್ಕದಲ್ಲಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ನಮ್ಮ ಅಸ್ಮಿತೆ. ಲಿಂಗಾಯತ ಧರ್ಮ ಒಡೆಯುವ ಪ್ರಶ್ನೆಯೇ ಇಲ್ಲ.
12ನೇ ಶತಮಾನದಲ್ಲಿ ಬಸವಣ್ಣ, ಬಸವಾದಿ ಶರಣರು ಹುಟ್ಟು ಹಾಕಿದ್ದಾರೆ. ಕುಮಾರಸ್ವಾಮಿ ಸರಕಾರ ಹಾಲಿ ಬಿಜೆಪಿ ಸರಕಾರಕ್ಕಿಂತ ಸಾವಿರ ಪಾಲು ಉತ್ತಮವಿತ್ತು. ಬಿಜೆಪಿ ಸರಕಾರಕ್ಕೆ ಗೊತ್ತು ಗುರಿ ಇಲ್ಲ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಇವರ ಬಳಿ ಹಣವಿಲ್ಲ.
ಇವರು ರೂ. 2-3 ಸಾವಿರ ಕೋ. ಮಾತ್ರ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಪ್ರವಾಹ ಸಂತ್ರಸ್ತರ ಶಾಪ ಇವರಿಗೆ ತಟ್ಟಲಿದೆ. ಈಶ್ವರಪ್ಪ, ತೇಜಸ್ವಿ ಸೂರ್ಯ ಅವರನ್ನು ಪ್ರವಾಹ ಸಂದರ್ಭದಲ್ಲಿ ನಡುಗಡ್ಡೆಯಲ್ಲಿ ಒಯ್ದು ಬಿಡಬೇಕು. ಪ್ರಧಾನಿ ಬಳಿಗೆ ತೆರಳಿ ಪರಿಹಾರ ಕೇಳಲು ಸಿಎಂಗೆ ಧೈರ್ಯವಿಲ್ಲ. ಸಿಎಂ ಸ್ಥಾನದಲ್ಲಿ ನಾನಿದ್ದರೆ ರಾಜೀನಾಮೆ ಬೀಸಾಕುತ್ತಿದ್ದೆ. ಉತ್ತರ ಕರ್ನಾಟಕ ಯಡಿಯೂರಪ್ಪ ಅವರಿಗೆ ಬಲ ನೀಡಿದೆ ಅಂತಾರ. ಆದರೆ, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಇವರು ಸ್ಪಂದಿಸುತ್ತಿಲ್ಲ. ತಾತ್ಕಾಲಿಕ ಶೆಡ್ ನಿರ್ಮಿಸಲು ಸಾಧ್ಯವಾಗದ ಇವರು ಶಾಶ್ವತ ಕೆಲಸ ಮಾಡಲು ಹೇಗೆ ಸಾಧ್ಯ ಅಧಿಕಾರ ಹೋಗಯವ ಹೆದರಿಕೆಯಿಂದ ಸಚಿವ ಸಂಪುಟದಲ್ಲಿರುವವರು ಪ್ರವಾಹ ಸಂತ್ರಸ್ತರ ಪರ ಧ್ವನಿ ಎತ್ತುತ್ತಿಲ್ಲ.
ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗದಿದ್ದರೆ ಸಿಎಂ, ಸಚಿವ ಸ್ಥಾನದಲ್ಲಿದ್ದು ಪ್ರಯೋಜನವೇನು? ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವೆ- ಬಿ ಎಸ್ ವೈ ಹೇಳಿಕೆ ವಿಚಾರ. 15 ರಲ್ಲಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. 3ರಲ್ಲಿ ಜೆಡಿಎಸ್ ಗೆಲ್ಲಲಿದೆ. ಅಥಣಿ ಮತಕ್ಷೇತ್ರದ ಉಸ್ತುವಾರಿ ನನಗಿದೆ. ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ.
ಬಿಜೆಪಿಗೆ ಆರ್ ಎಸ್ ಎಸ್ ಮೂಲ. ಆದರೆ, ಆರ್ ಎಸ್ ಎಸ್ ಗರ್ಭ ಗುಡಿಯೊಳಗೆ ಕೆಲವರಿಗಷ್ಟೇ ಪ್ರವೇಶವಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಉಳಿದ ಮುಖಂಡರಿಗೆ ಆರ್ ಎಸ್ ಎಸ್ ಹೊಸ್ತಿಲೊಳಗೆ ಬಿಡುವುದಿಲ್ಲ. ಆರ್ ಎಸ್ ಎಸ್ ನಿರ್ಧಿಷ್ಠ ನಾಯಕರನ್ನು ಹೊರತು ಪಡಿಸಿ ಉಳಿದವರನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.