ಯಶ್‌ ಅವರ ‘ಕೆಜಿಎಫ್‌-2’ ಮತ್ತು ಅಮಿರ್‌ಖಾನ್‌ ಅವರ ‘ಲಾಲ್ ಸಿಂಗ್ ಚಡ್ಡಾ’ ಒಂದೇ ದಿನ ರಿಲೀಸ್‌!

ನಟ ಯಶ್‌ ಅಭಿನಯದ ಕೆಜಿಎಫ್‌-2 ಮತ್ತು ಅಮಿರ್‌ಖಾನ್‌ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗಳ ರಿಲೀಸ್ ಡೇಟ್ ಘೋಷಣೆಯಾಗಿದೆ. ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್‌ ಆಗಲಿದ್ದು, ಯಾವ ಸಿನಿಮಾ ಬಾಕ್ಸ್‌ ಆಫೀನ್‌ನಲ್ಲಿ ಅಬ್ಬರಿಸಲಿವೆ ಎಂದು ಕುತೂಹಲ ಹುಟ್ಟಿಸಿವೆ.

ಲಾಲ್ ಸಿಂಗ್ ಚಢ್ಢಾ ಮತ್ತು ಕೆಜಿಎಫ್‌-2 ಸಿನಿಮಾಗಳು ಮುಂದಿನ ವರ್ಷ (2022) ಎಪ್ರಿಲ್ 14ರಂದು ಬಿಡುಗಡೆಯಾಗಲಿದೆ.

ಲಾಲ್ ಸಿಂಗ್ ಚಢ್ಢಾ ಸಿನಿಮಾ ಬಿಡುಗಡೆಯ ಬಗ್ಗೆ ಇಂದು ಅಮಿರ್ ಖಾನ್ ಪ್ರೊಡಕ್ಷನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತ ಘೋಷಣೆ ಮಾಡಿಕೊಂಡಿದೆ. ಅದೇ ದಿನ, ಪ್ರಶಾಂತ್ ನೀಲ್ ನಿರ್ದೇಶನದ  ‘ಕೆಜಿಎಫ್ -2′ ಕೂಡ ದೇಶಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ.

ಬಾಲಿವುಡ್ ಟ್ರೇಡ್ ಎನಲಿಸ್ಟ್ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ” ದಿ ಬಿಗ್ ಕ್ಲ್ಯಾಶ್” ಎಂದು ಕರೆದಿದ್ದಾರೆ. “14 ಏಪ್ರಿಲ್ 2022 ಎರಡು ದೊಡ್ಡವರ ಘರ್ಷಣೆಗೆ ಸಾಕ್ಷಿಯಾಗಲಿದೆ. ಲಾಲ್ ಸಿಂಗ್ ಚಡ್ಡಾ ಮತ್ತು ಕೆಜಿಎಫ್ 2… ಅಮೀರ್ ಖಾನ್ ವರ್ಸಸ್ ಯಶ್’ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಅಮಿರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಚಿತ್ರವು 1994ರಲ್ಲಿ ತೆರೆಕಂಡ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್. ಚಿತ್ರದಲ್ಲಿ ಅಮಿರ್ ಜೊತೆ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದ್ವೈತ್ ಚಂದನ್ ನಿರ್ದೇಶನವಿದೆ.

ಇದನ್ನೂ ಓದಿ: ಪುನೀತ್‌ ಫೋಟೋ ಫ್ರೇಮ್‌ಗಳಿಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ಬೇಡಿಕೆ; ದೇವರ ಪಕ್ಕ ಅಪ್ಪು ಫೋಟೋ ಇಡುತ್ತಿರುವ ಅಭಿಮಾನಿಗಳು!

Spread the love

Leave a Reply

Your email address will not be published. Required fields are marked *