ಸಿದ್ದರಾಮಯ್ಯ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ್ರೂ ಬಾರದ ಅಧಿಕಾರಿಗಳ ವಿರುದ್ಧ ಫುಲ್ ಗರಂ…
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಇಂದು ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬೇಗನೇ ಆಗಮಿಸದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ್ರೂ ಬಾರದ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ. ಅಧಿಕಾರಿಗಳು ಕತ್ತೆಕಾಯಲಿಕ್ಕೆ ಹೋಗಿದ್ದಾರಾ..? ಏಯ್ ಎಲ್ಲಿದ್ದಾರೆ ಅಧಿಕಾರಿಗಳು..? ಇಷ್ಟೊತ್ತು ಏನ್ಮಾಡಿತ್ತಿದ್ದಿ. ನನಗಿಂತ ಮುಂಚೆ ಬಂದು ಇಲ್ಲಿ ಇರಬೇಕಾ ಬೇಡ್ವಾ!? ಎಂದು ಆಮೇಲೆ ಬಂದ ತಹಶೀಲ್ದಾರ್ ರಿಗೆ ತರಾಟೆ ತೆಗೆದುಕೊಂಡರು.
ಸಿದ್ದರಾಮಯ್ಯ ಅವರಿಗೆ ತಹಶೀಲ್ದಾರ್ ರಸ್ತೆ ಬಂದಾಗಿತ್ತು ಅದನ್ನು ಕ್ಲಿಯರ್ ಮಾಡಿಸೋಕೆ ಹೋಗಿದ್ದೇ ಅಂತ ನುಸುಳಿಕೊಂಡರು. ಮಲಪ್ರಭಾ ನದಿ ಪ್ರವಾಹಕ್ಕೆ ಕೊಚ್ಚಿಹೋದ ಕೆಳಗಿನ ಗೋವನಕೊಪ್ಪ ಸೇತುವೆ ವೀಕ್ಷಿಸಿದ ಸಿದ್ದರಾಮಯ್ಯ, ರಸ್ತೆ ಕಾಮಗಾರಿ ಶೀಘ್ರವೇ ಮುಗಿಸ್ಬೇಕು. ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಜೊತೆಗೆ ಮಾತನಾಡ್ತೇನೆ ಎಂದರು. ಇದರೊಂದಿಗೆ ಗೋವನಕೊಪ್ಪ ಸಂತ್ರಸ್ತರ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ, ಸಮಸ್ಯೆ ಆಲಿಸೋವಾಗ ಪಿಡಿಓ ತರಾಟೆಗೆ ತೆಗೆದುಕೊಂಡರು. ಜನರ ಸಮಸ್ಯೆಗೆ ಸ್ಪಂದಿಸಿ,ಜನ್ರ ಕೆಲ್ಸ ಮಾಡಿಕೊಡು. ಇಲ್ಲವಾದ್ರೆ ಸಸ್ಪೆಂಡ್ ಆಗ್ತೀಯಾ ನೋಡು ಎಂದು ಪಿಡಿಓಗೆ ಖಡಕ್ ಎಚ್ಚರಿಕೆ ನೀಡಿದರು.
Hello, this weekend is pleasant designed for me, since this occasion i
am reading this great informative paragraph here at my residence.