ಸುದೀಪ್ ಬಗ್ಗೆ ವಿವಾದಿತ ಹೇಳಿಕೆ : ವಿಜಯ್ಗುರೂಜಿಗೆ ಪರೋಕ್ಷ ಟಾಂಗ್ ಕೊಟ್ಟ ಮೈಸೂರಿನ ಅರ್ಜುನ್ಗುರೂಜಿ…
ಮೊನ್ನೆಯಷ್ಟೆ ಸುದೀಪ್ ಬಗ್ಗೆ ವಿವಾದಿತ ಹೇಳಿಕೆ ಹೇಳಿದ್ದ ವಿನಯ್ ಗುರೂಜಿಗೆ ಮೈಸೂರಿನ ಅರ್ಜುನ್ಗುರೂಜಿ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ಹೌದು.. ಮೊನ್ನೆಯಷ್ಟೇ ವಿನಯ್ ಗುರೂಜಿ ಸುದೀಪ್ ಗೆ ‘ ನಾನೇ ಮಾಣಿಕ್ಯ, ಹೆಬ್ಬುಲಿ ಎಂದು ಹೇಳುವವರೆಲ್ಲ ಸರಿಯಾದ ಹುಲಿ ಬಂದರೆ ಹೆದರಿ ಓಡಿಹೋಗುತ್ತಾರೆ ಎಂದು ಹೇಳಿರುವ ವಿನಯ್ ಗುರೂಜಿ ಸುದೀಪ್ ಅವರನ್ನು ಗೇಲಿ ಮಾಡಿದ್ದರು’. ಈ ಮಾತು ಕಿಚ್ಚನ ಅಭಿಮಾನಿ ಕೆಂಗಣ್ಣಿಗೆ ಗುರಿಯಾಗಿತ್ತು. ಕೋಪಗೊಂಡ ಫ್ಯಾನ್ಸ್ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ತಮ್ಮ ಆಸಮಧಾನವನ್ನೂ ಹೊರಹಾಕಿದ್ದರು.
ಈ ಹೇಳಿಕೆಗೆ ಮೈಸೂರಿನ ಅರ್ಜುನ್ಗುರೂಜಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಹೆಬ್ಬುಲಿ ಸಿನಿಮಾವನ್ನ ಮತ್ಯಾರು ಮಾಡೋಕೆ ಸಾಧ್ಯವಿರಲಿಲ್ಲ. ಸುದೀಪ್ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ. ಗುರುಪೀಠದಲ್ಲಿರುವವರು ಎಲ್ಲರಿಗು ಆಶಿರ್ವಾದ ಮಾಡಬೇಕು. ರಾಜ್ಕುಮಾರ್, ಅಂಬರೀಶ್, ವಿಷ್ಟುವರ್ಧನ್ ಉತ್ತಮ ನೀಡಿ ಪ್ರಶಂಸೆ ಗಳಿಸಿದ್ದಾರೆ. ಸುದೀಪ್ ಸಹ ಹೆಬ್ಬುಲಿ ಚಿತ್ರ ಮಾಡಿ ಕನ್ನಡಕ್ಕೆ ಹೆಮ್ಮೆ ತಂದಿದ್ದಾರೆ. ಅದು ವಾಲ್ಮಿಕಿ ಜನಾಂಗದವರಿಗೆ ಒಳ್ಳೆಯ ಸ್ಥಿರತೆ ತಂದುಕೊಟ್ಟಿದೆ. ಗುರುಪೀಠದಲ್ಲಿರೋರು ಯಾವಾಗಲೂ ಎಲ್ಲರನ್ನು ಹರಸುತ್ತಿರಬೇಕು ಎಂದು ವಿನಯ್ ಗುರೂಜಿಗೆ ಹೆಸರು ಹೇಳದೆ ರ್ಜುನ್ ಗುರೂಜಿ ಟಾಂಗ್ ಕೊಟ್ಟು, ಸುದೀಪ್ ಅವರಿಗೆ ಒಳ್ಳೆಯದಾಗಲಿ ಹಾರೈಸಿದ್ದಾರೆ.