ಸೋಮವಾರದಿಂದ ಮಾಲ್, ರೆಸ್ಟೋರೆಂಟ್‌ಗಳು ಓಪನ್: ನಡುವೆ ಅಂತರವಿರಲಿ ಎಂದ ಕೇಂದ್ರ ಸರ್ಕಾರ

ಕೊರೊನಾ ಲಾಕ್‌ಡೌನ್‌ ನಿಂದಾಗಿ ಕಳೆದ ಎರಡು ತಿಂಗಳಿನಿಂದ ಮುಚ್ಚಿದ್ದ ಹೋಟೆಲ್​, ರೆಸ್ಟೋರಂಟ್​, ಮಾಲ್​ಗಳನ್ನು ಜೂನ್‌ 08 ರಿಂದ ತೆರೆಯಲು ಕೇಂದ್ರ ಹಸಿರು ನಿಶಾನೆ ತೋರಿದೆ. ಇದಕ್ಕಾಗಿ ಹಲವು ಮಾರ್ಗಸೂಚಿಗಳನ್ನೂ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ.

ಸೋಮವಾರದಿಂದ ಮಾಲ್​ಗಳನ್ನು ತೆರೆದರೂ, ಮಾಲ್‌ಗಳಲ್ಲಿರುವ ಚಿತ್ರಮಂದಿರಗಳು ಅಥವಾ ಮಲ್ಟಿಪ್ಲೆಕ್ಸ್​ ಹಾಗೂ ಗೇಮಿಂಗ್​ ಸೆಂಟರ್​ಗಳನ್ನು ತೆರೆಯುವಂತಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಜತೆಗೆ, ಗ್ರಾಹಕರಿಗೂ ಹಲವು ನಿರ್ಬಂಧಗಳನ್ನು ವಿಧಿಸಿದರೆ ಅಚ್ಚರಿಯೇನಿಲ್ಲ.

ಹೋಟೆಲ್​ ಹಾಗೂ ರೆಸ್ಟೋರಂಟ್​ಗಳಲ್ಲಿ ಕಸ್ಟಮರ್ಸ್‌ ಕುಳಿತುಕೊಳ್ಳಬಹುದಾದ ಸಾಮರ್ಥ್ಯದ ಶೇ.50 ಜನರಿಗೆ ಮಾತ್ರ ಅವಕಾಶವಿರಲಿದೆ. ಅಲ್ಲದೆ, ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್​ ಮತ್ತಿತರ ಭಿತ್ತಿಫಲಕಗಳನ್ನು ಅಳವಡಿಸುವುದು ಕಡ್ಡಾಯವೆಂದು ಹೇಳಿದೆ.

Best 5 Star Restaurants in CP, Delhi, Fine Dining Restaurants in ...

ಗ್ರಾಹಕರು ಹಾಗೂ ಸಿಬ್ಬಂದಿಗಳು ಮಾಸ್ಕ್​ ಧರಿಸುವುದು ಕಡ್ಡಾಯವಾಗಿದ್ದು, ಹ್ಯಾಂಡ್​ ಸ್ಯಾನಿಟೈಸರ್​, ಥರ್ಮಲ್​ ಸ್ಕ್ರೀನಿಂಗ್​ ಬಳಕೆ ಕಡ್ಡಾಯವಾಗಿರುತ್ತದೆ. ರೋಗ ಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ಮಾತ್ರ ಮಾಲ್, ಹೊಟೆಲ್‌ಗಳಲ್ಲಿ ಪ್ರವೇಶವಿರಲಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕಿದೆ.

ಹಿರಿಯ ಸಿಬ್ಬಂದಿ, ಗರ್ಭಿಣಿಯರು, ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರನ್ನು ಜನರೊಂದಿಗೆ ನೇರವಾಗಿ ಸಂಪರ್ಕಿಸಬಹುದಾದ ಸ್ಥಳಗಳಲ್ಲಿ ಕೆಲಸಕ್ಕೆ ನಿಯೋಜಿಸದಂತೆ ತಿಳಿಸಲಾಗಿದೆ. ಹಾಗಾಗಿ ಸಾರ್ವಜನಿಕರೂ ಕೂಡ 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷಕ್ಕೂ ಕಡಿಮೆ ವಯಸ್ಸಿನವರು ಇಂತಹ ಸ್ಥಳಗಳಿಗೆ ಬಾರದೆ ಮನೆಯಲ್ಲಿರುವುದು ಸೂಕ್ತ ಎಂದು ಕೇಂದ್ರ ತಿಳಿಸಿದೆ.

ಗ್ರಾಹಕರ ಹೆಸರು ಮತ್ತು ಸಂಪರ್ಕ ಸಂಖ್ಯೆ ಮೊದಲಾದವುಗಳನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ. ಒಂದೇ ಕುಟುಂಬದವರಾದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿ ಗ್ರಾಹಕರಿಗೆ ತಿಳಿಸಲು ಸೂಚಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.