ರಾಜ್ಯಸಭಾ ಚುನಾವಣೆ: ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವ ದೇವೇಗೌಡರು; ಕಾರಣವೇನು?

ರಾಜ್ಯಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್‌ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಜೆಡಿಎಸ್‌ನಿಂದ ಸ್ಪರ್ಧಿಸುವ ವಿಚಾರ ಚರ್ಚೆಯಾಗುತ್ತಲೇ ಇದೆ. ಆದರೆ, ಚುನಾವಣಾ ಕಣಕ್ಕೆ ಇಳಿಯುವ ಬಗ್ಗೆ ದೇವೇಗೌಡರು ಮೌನ ತಾಳಿದ್ದಾರೆ.

ಶುಕ್ರವಾರ ನಡೆದ ಜೆಡಿಎಲ್‌ಪಿ ಸಭೆಯಲ್ಲಿ ಜೆಡಿಎಸ್‌ ಪಕ್ಷದಿಂದ ಗೆದ್ದು ವಿಧಾನಸಭೆಯಲ್ಲಿರುವ 34 ಶಾಸಕರೂ ದೇವೇಗೌಡರಿಗೆ ಬೆಂಬಲ ನೀಡಿವುದಾಗಿ ಘೋಷಿಸಿದ್ದಾರೆ. ಆ ಕಾರಣದಿಂದಾಗಿ ಶುಕ್ರವಾರದ ಸಭೆಯ ನಂತರ ಜೆಡಿಎಸ್‌ ಅಭ್ಯರ್ಥಿಯನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಜೆಡಿಎಸ್‌ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಸಭೆಯಲ್ಲಿಯೂ ದೇವೇಗೌಡರು ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ. ಅಲ್ಲದೆ, ಸ್ಪರ್ಧೆಯ ಬಗ್ಗೆ ಏನನ್ನೂ ಹೇಳದೆ ಮೌನ ವಹಿಸಿರುವುದು ಜೆಡಿಎಸ್‌ ಒಳಗಿನ ಗೊಂದಲ ಹಾಗೂ ಮುಂದೇನು ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್‌ನಲ್ಲಿರುವ 34 ಶಾಸಕರ ಬೆಂಬಲದಿಂದ ರಾಜ್ಯಸಭೆಗೆ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬುದು ತಿಳಿದಿರುವ ವಿಚಾರ. ಅದಕ್ಕಾಗಿ ಕಾಂಗ್ರೆಸ್‌ ಬೆಂಬಲವನ್ನು ಜೆಡಿಎಸ್‌ ನಿರೀಕ್ಷೆ ಮಾಡಿದೆ. ಆದರೆ, ಕಾಂಗ್ರೆಸ್‌ನ ಬೆಂಬಲವನ್ನು ಜೆಡಿಎಸ್‌ ಇನ್ನೂ ಕೇಳಿಲ್ಲ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಮ್ಮನ್ನು ಯಾರೂ ಬೆಂಬಲ ಕೇಳಿಲ್ಲ. ಒಂದು ವೇಳೆ ಕೇಳಿದರೆ, ಹೈಕಮಾಂಡ್‌ ಜೊತೆಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

Sonia Gandhi-Deve-Gowda | HW English

ಆದರೆ, ಕಾಂಗ್ರೆಸ್‌ ಬೆಂಬಲವನ್ನು ಬಯಸಿರುವ ಜೆಡಿಎಸ್‌, ಅದಕ್ಕಾಗಿಯೇ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನಡೆಸಿದ ವಿರೋಧ ಪಕ್ಷಗಳ ವಿಡಿಯೋ ಕಾನ್ಫರೆನ್ಸ್‌ನಲ್ಲಿ ದೇವೇಗೌಡರು ಭಾಗವಹಿಸಿದ್ದರು. ರಾಜ್ಯಸಭಾ ಚುನಾವಣೆಗಾಗಿ ತಯಾರಿ ನಡೆಸಿದ್ದ ದೇವೇಗೌಡರು ಇತ್ತೀಚೆಗೆ ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.

ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕರು ಮಾಡಿದ ಅಡ್ಡ ಮತದಾನ ಮಾಡಿದ್ದರು. ಇದರಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿತ ಕಾಂಗ್ರೆಸ್‌ ಅಭ್ಯರ್ಥಿ ಕೆಸಿ ರಾಮಮೂರ್ತಿ ಅವರು ಗೆಲ್ಲಲು ಸಾಧ್ಯವಾಯಿತು. ಜೆಡಿಎಸ್‌ ಹೈಕಮಾಂಡ್‌ ಮಾತು ಮೀರಿ ಅಡ್ಡ ಮತದಾನ ಮಾಡಿದ್ದ ಜೆಡಿಎಸ್‌ ಶಾಸಕರ ವಿರುದ್ಧ ದೇವೇಗೌಡರು  ಶಿಸ್ತು ಕ್ರಮ ಜರುಗಿಸಿದರು.

Deve Gowda Never Had It Better, But Congress Too Will Gain from ...

ಅಡ್ಡಮತದಾನ ಮಾಡಿದ್ದ ಜಮೀರ್ ಅಹ್ಮದ್, ಚಲುವರಾಯಸ್ವಾಮಿ, ಬಾಲಕೃಷ್ಣರನ್ನು ಪಕ್ಷದಿಂದ ಹೊರಹಾಕಿದ್ದಲ್ಲದೆ. ಅವರನ್ನು ಚುನಾವಣೆಯಲ್ಲಿ ಸೋಲಿಸಲು ಶ್ರಮಿಸಿ ಯಶಸ್ವಿಯಾಗಿದ್ದರು.  ಈಗಲೂ ಅದೇ ರೀತಿಯ ಪರಿಸ್ಥಿತಿ ಎದುರಾಗಬಹುದೆಂದು ಲೆಕ್ಕಾಚಾರ ಹಾಕಿರುವ ದೇವೇಗೌಡರು ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

ಆದರೆ, ಕಾಂಗ್ರೆಸ್‌ ಈಗಾಗಲೇ ರಾಜ್ಯಸಭೆಯ ಒಂದು ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆಯವರಿಗೆ ಟಿಕೆಟ್‌ ಘೋಷಿಸಿದೆ. ಇನ್ನೂ ಉಳಿದ ಮತಗಳನ್ನು ಜೆಡಿಎಸ್‌ಗೆ ಬೆಂಬಲ ನೀಡಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ಡಿಕೆಶಿ ಮತ್ತು ದೇವೇಗೌಡರ ಕುಟುಂಬದ ನಡುವಿನ ಒಡನಾಟ ಖಾತ್ರಿ ಪಡಿಸುತ್ತಿದೆ.

ಆದರೂ, ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸನ್ನು ನಂಬಿ ತುಮಕೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದೇವೇಗೌಡರು ಸೋಲುಂಡ ವಿಚಲಿತರಾಗಿದ್ದರು. ಆ ಸೋಲಿನ ಕಹಿಯನ್ನೇ ಇನ್ನೂ ಮರೆಯದ ದೇವೇಗೌಡರು ಮತ್ತೆ ಕಾಂಗ್ರೆಸ್‌ ಶಾಸಕರನ್ನು ನಂಬಿ ಚುನಾವಣೆಗೆ ಸ್ಪರ್ಧಿಸಲು, ಸ್ಪರ್ಧಿಸಿ ಸೋಲನುಭವಿಸಲು ತಯಾರಾಗಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights