ಹಾಲು ಮೊಸರಿನ ದರ ಏರಿಕೆ : ಲೀಟರ್ ಗೆ 2ರೂ. ಹೆಚ್ಚಳ – ಗ್ರಾಹಕರಿಗೆ ಬಿತ್ತು ಭಾರೀ ಹೊಡೆತ

ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಆಹಾರ , ಈರುಳ್ಳಿ ದರ ಏರಿಕೆ ಬಳಿಕ ಹಾಲು ಮೊಸರಿನ ಸರದಿ ಬಂದಿದೆ.

ಹೌದು… ಹಾಲು ಮತ್ತು ಮೊಸರು ದರದಲ್ಲಿ ಏರಿಕೆ ಮಾಡಲಾಗಿದೆ. ಇದೇ ಫೆಬ್ರವರಿ 1 ರಿಂದ ಒಂದು ಲೀಟರ್ ಹಾಲಿಗೆ 2 ರೂಪಾಯಿ ಬೆಲೆ ಅಧಿಕವಾಗಿದೆ. ಮಸರಿಗೂ ಲೀಟರ್ ಗೆ 2 ರೂಪಾಯಿ ದರ ಹೆಚ್ಚಿಸಲಾಗಿದೆ. ಹಾಲಿನ ದರವನ್ನು ಲೀಟರ್ ಗೆ 3 ರೂಪಾಯಿ ಏರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ 2 ರೂಪಾಯಿ ಏರಿಕೆಗೆ ಅನುಮತಿ ನೀಡಿದೆ.

ಈ ಕುರಿತು ಮಾತನಾಡಿದ ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, 14 ಹಾಲು ಒಕ್ಕೂಟಗಳ ವತಿಯಿಂದ ಹಾಲಿನ ದರ ಹೆಚ್ಚಳಕ್ಕಾಗಿ ಕೆಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರತೀ ಲೀಟರ್ ಗೆ ಎರಡರಿಂದ ಮೂರು ರೂ. ಹೆಚ್ಚಳ ಮಾಡುವಂತೆ ಬೇಡಿಕೆ ಬಂದಿತ್ತು. ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಕೂಡ ಚರ್ಚಿಸಿ ತೀರ್ಮಾನ ಕೈ ಗೊಳ್ಳಲಾಗಿತ್ತು ಎಂದರು.

 

Spread the love

Leave a Reply

Your email address will not be published. Required fields are marked *