ಅಂಗನವಾಡಿ ಕಟ್ಟಡ ಸ್ಥಳ ವಿವಾದ : ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ!

ಅಂಗನವಾಡಿ ಕಟ್ಟಡ ಸ್ಥಳ ವಿವಾದಕ್ಕೆ ಗ್ರಾಮಸ್ಥರು ಯೋಧನ ಕುಟುಂಬವನ್ನು ಬಹಿಷ್ಕಾರ ಮಾಡಿದ ಘಟನೆ  ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತೋಟಗಟ್ಟಿಯಲ್ಲಿ ನಡೆದಿದೆ.

ಈ ಕುಟುಂಬದ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ ಐದು ಸಾವಿರ ದಂಡ ವಿಧಿಸಲಾಗುತ್ತೆ. ಜೊತೆಗೆ ಯೋಧನ ಕುಟುಂಬಕ್ಕೆ ಯಾರೋಬ್ಬರ ಮನೆಯಲ್ಲೂ ನೀರು ಸಿಗಲ್ಲ, ಊರಿನ ಜಾತ್ರೆ, ದೇಗುಲಕ್ಕೆ ಕೂಡ ಯೋಧನ ಕುಟುಂಬದವರಿಗೆ ಪ್ರವೇಶ ನಿಷೇಧಿಸಲಾಗಿದೆ.

2017ರಲ್ಲೇ ಈ ಬಗ್ಗೆ ಬೆಳಗಾವಿ ಡಿಸಿ, ಎಸ್‌ಪಿಗೆ ಮನವಿ ಮಾಡಿದ್ದರು.
ಗ್ರಾಮಕ್ಕೆ ಭೇಟಿ ನೀಡಿ ಸಂಧಾನ ಮಾಡಿದ್ದ ಡಿಸಿ, ಎಸ್ಪಿ.
ಜಮ್ಮು‌ಕಾಶ್ಮೀರದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ವಿಠ್ಠಲ್ ಕಡಕೋಳ ಹಾಗೂ ಯೋಧನ ಸಹೋದರನ ನಿಶ್ಚಿತಾರ್ಥ ಮುಂದಿನ ತಿಂಗಳು ನಿಗಧಿಯಾಗಿದ್ದು, ಇಬ್ಬರ ನಿಶ್ಚಿತಾರ್ಥಕ್ಕೂ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.

ಹೀಗಾಗಿ ಯೋಧನ ನಿಶ್ಚಿತಾರ್ಥಕ್ಕೆ ಯಾವ ಅರ್ಚಕರೂ ಸಹ ಮುಂದೆ ಬರುತ್ತಿಲ್ಲ. ಎಲ್ಲಿ ಮದುವೆ ನಿಂತು ಹೋಗುತ್ತೋ ಎಂಬ ಆತಂಕದಲ್ಲಿದೆ ಯೋಧನ ಕುಟುಂಬ.

ಯೋಧನ ಕುಟುಂಬ ಕಳೆದ ಮೂರು ವರ್ಷದಿಂದ ನರಕ ನೋಡುತ್ತಿದ್ದರೂ, ಇಂತಹ ಬಹಿಷ್ಕಾರದಂತಹ ಅನಿಷ್ಠ ಪದ್ಧತಿ ನಡೆಯುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ರ ಮೌನವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights