ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನ ಸೋಂಕು

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನ ಸೋಂಕು ತಗುಲಿರುವುದು ಧೃಢಪಟ್ಟಿದೆ. ಕೆಲವೇ ನಿಮಿಷಗಳ ಕಳಗೆ ಟ್ವಿಟ್ಟರ್ ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಬೋರಿಸ್ ಜಾನ್ಸನ್, ತಾವು ಕೊರೊನ ಸೋಂಕಿಗೆ ಗುರಿಯಾಗಿರುವುದನ್ನು ಹೇಳಿಕೊಂಡಿದ್ದಾರೆ.

“ಕಳೆದ 24 ಘಂಟೆಗಳಲ್ಲಿ ಲಕ್ಷಣಗಳು ಕಾಣಿಸಿಕೊಂಡವು ಮತ್ತು ಈಗ ಪರೀಕ್ಷೆಯ ನಂತರ ಕೊರೊನ ಸೋಂಕಿಗೆ ಗುರಿಯಾಗಿರುವುದು ಧೃಢಪಟ್ಟಿದೆ. ನಾನು ಈಗ ಪ್ರತ್ಯೇಕಗೊಳ್ಳುತ್ತಿದ್ದೇನೆ. ಆದರೆ ಸರ್ಕಾರದ ಕಾರ್ಯಕ್ರಮಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂದುವರೆಸಲಿದ್ದೇನೆ. ಎಲ್ಲರೂ ಒಟ್ಟಾಗಿ ಇದನ್ನು ಸೋಲಿಸಬಹುದು” ಎಂದು 55 ವರ್ಷದ ಜಾನ್ಸನ್  ಟ್ವೀಟ್ ಮಾಡಿದ್ದಾರೆ.

ತಂತ್ರಜ್ಞಾನಕ್ಕೆ ಧನ್ಯವಾದ ಎಂದಿರುವ ಜಾನ್ಸನ್ ಅವರು ದೇಶವನ್ನು ಸದ್ಯಕ್ಕೆ ತಂತ್ರಜ್ಞಾನದ ನೆರವಿನಿಂದ ಮುನ್ನಡೆಸುವುದಾಗಿ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights